ಕಾಗದ ರಹಿತ ಕೋರ್ಟ್‌ಗೆ 7210 ಕೋಟಿ ರೂ : ಇ-ಕೋರ್ಟ್ಸ್ 3ನೇ ಹಂತದ ಯೋಜನೆಗೆ ಅನುಮೋದನೆ
ಕೇಂದ್ರ ಸಚಿವ ಸಂಪುಟವು ಇ-ಕೋರ್ಟ್ಸ್ ಯೋಜನೆಯ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ 7,210 ಕೋಟಿ ರು.ಗಳನ್ನು ಮುಂದಿನ 4 ವರ್ಷದಲ್ಲಿ ವೆಚ್ಚ ಮಾಡಿ ಕೋರ್ಟುಗಳನ್ನು ಮತ್ತಷ್ಟು ಕಾಗದರಹಿತ ಮಾಡಲು ಕ್ರಮ ಕೈಗೊಳ್ಳಲು ಸಮ್ಮತಿಸಿದೆ.
ನವದೆಹಲಿ: ಕೇಂದ್ರ ಸಚಿವ ಸಂಪುಟವು ಇ-ಕೋರ್ಟ್ಸ್ ಯೋಜನೆಯ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ 7,210 ಕೋಟಿ ರು.ಗಳನ್ನು ಮುಂದಿನ 4 ವರ್ಷದಲ್ಲಿ ವೆಚ್ಚ ಮಾಡಿ ಕೋರ್ಟುಗಳನ್ನು ಮತ್ತಷ್ಟು ಕಾಗದರಹಿತ ಮಾಡಲು ಕ್ರಮ ಕೈಗೊಳ್ಳಲು ಸಮ್ಮತಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ (Cabinet meeting) ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ (Information and Broadcasting Minister) ಅನುರಾಗ್ ಠಾಕೂರ್(Anurag Thakur), ತಂತ್ರಜ್ಞಾನ ಬಳಸಿಕೊಂಡು ನ್ಯಾಯದಾನ ವ್ಯವಸ್ಥೆ ಸುಧಾರಿಸುವ ಕ್ರಮ ಇದಾಗಿದೆ ಎಂದರು. ರಾಷ್ಟ್ರೀಯ ಇ-ಆಡಳಿತ ಯೋಜನೆಯ (National e-Governance Plan) ಭಾಗವಾಗಿ, 2007 ರಿಂದ ಇ-ಕೋರ್ಟ್ಸ್ ಯೋಜನೆಯು ಅನುಷ್ಠಾನದಲ್ಲಿದೆ. ಯೋಜನೆಯ 2ನೇ ಹಂತ ಇದೇ ವರ್ಷದ ಆರಂಭದಲ್ಲಿ ಮುಗಿದಿದೆ. ಹೀಗಾಗಿ ಈಗ 3ನೇ ಹಂತಕ್ಕೆ ಯೋಜನೆ ವಿಸ್ತರಿಸಲಾಗಿದೆ.
ಏನಿದು ಯೋಜನೆ?:
ಮೂರನೇ ಹಂತದಲ್ಲಿ ಡಿಜಿಟಲ್, ಆನ್‌ಲೈನ್ ಮತ್ತು ಕಾಗದ ರಹಿತ ನ್ಯಾಯಾಲಯಕ್ಕೆ (paperless court) ಕ್ರಮ ಕೈಗೊಳ್ಳಲಾಗುತ್ತದೆ. ಅಂದರೆ ನ್ಯಾಯಾಲಯದ ಎಲ್ಲ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತದೆ. ಪ್ರಕರಣಗಳ ಇ-ಫೈಲಿಂಗ್, ಕೋರ್ಟ್ ಶುಲ್ಕ ಕಟ್ಟಲು ಇ-ಪೇಮೆಂಟ್ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಕೋರ್ಟ್‌ಗಳಲ್ಲಿ ಇ-ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಏಕೀಕೃತ ತಂತ್ರಜ್ಞಾನ ವೇದಿಕೆ ರಚಿಸಿ ಒಂದೇ ವೇದಿಕೆಯಲ್ಲಿ ಕೋರ್ಟ್‌ನ ಎಲ್ಲ ಮಾಹಿತಿ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಇದು ನ್ಯಾಯಾಲಯಗಳು, ದಾವೆದಾರರು ಮತ್ತು ಇತರ ಮಧ್ಯಸ್ಥಗಾರರ ನಡುವೆ ತಡೆರಹಿತ ಮತ್ತು ಕಾಗದರಹಿತ ಸೇವೆ ಒದಗಿಸುತ್ತದೆ. ನ್ಯಾಯಾಲಯದ ಶುಲ್ಕಗಳು, ದಂಡಗಳು ಮತ್ತು ದಂಡಗಳನ್ನು ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ಪಾವತಿಸಬಹುದು. ಇದರಿಂದ ಭೌತಿಕ ಪ್ರಯಾಣ ತಗ್ಗಿ ವೆಚ್ಚ ಉಳಿತಾಯವಾಗುತ್ತದೆ.
ಜಿ20 ಯಶಸ್ಸಿಗೆ ಶ್ರಮಿಸಿದ 450 ಪೊಲೀಸರೊಂದಿಗೆ ಪ್ರಧಾನಿ ಮೋದಿ ಭೋಜನ ಕೂಟ
75 ಲಕ್ಷ ಹೊಸ ಉಚಿತ ಎಲ್‌ಪಿಜಿ ಸಂರ್ಪಕಕ್ಕೆ 1650 ಕೋಟಿ ನಿಗದಿ
ನವದೆಹಲಿ: ಉಜ್ವಲಾ ಯೋಜನೆಯಡಿ (Ujwala scheme) ಬಿಪಿಎಲ್ ವರ್ಗದ ಜನರಿಗೆ ಮುಂದಿನ 3 ವರ್ಷದಲ್ಲಿ ಹೊಸದಾಗಿ 75 ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ 1650 ಕೋಟಿ ರು. ನಿಗದಿ ಪಡಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಸಿಲಿಂಡರ್, ಉಚಿತ ಸ್ಟೌವ್ ಮತ್ತು ಮೊದಲ ಬಾರಿಗೆ ಗ್ಯಾಸ್ ಅನ್ನು ಉಚಿತವಾಗಿ ತುಂಬಿಸಿ ಕೊಡಲಾಗುವುದು. ನಂತರ ಸಾಮಾನ್ಯ ದರಕ್ಕಿಂತ 200 ರು. ಕಡಿಮೆ ದರದಲ್ಲಿ ಅವರಿಗೆ ಎಲ್‌ಪಿಜಿ ಗ್ಯಾಸ್ (LPG gas) ವಿತರಿಸಲಾಗುವುದು.
ಜಿ20 ಶೃಂಗಸಭೆ ಯಶಸ್ವಿ: ಬಿಜೆಪಿ ಕಚೇರೀಲಿ ಮೋದಿಗೆ ಭವ್ಯ ಸ್ವಾಗತ
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬುಧವಾರ ಭವ್ಯ ಸ್ವಾಗತ ಕೋರಲಾಯಿತು. ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಭಾಗಿಯಾಗಲು ಮೋದಿ ಬಿಜೆಪಿ ಕಚೇರಿಗೆ ಆಗಮಿಸಿದರು. ಮೋದಿ ಅವರು ಆಗಮಿಸಿದ ವೇಳೆ ಚುನಾವಣಾ ಸಮಿತಿಯ ಸದಸ್ಯರು, ಕೇಂದ್ರ ಸಚಿವರಾದ ರಾಜನಾಥ ಸಿಂಗ್ (Rajnath Singh) ಮತ್ತು ಅಮಿತ್ ಶಾ (Amit Shah)ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಾಜರಿದ್ದರು. ಪ್ರಧಾನಿ ಮೋದಿ ಅವರ ಮೇಲೆ ಪುಷ್ಪವೃಷ್ಟಿ ಸುರಿಸುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಕಚೇರಿಯ ಬಳಿ ನೆರೆದಿದ್ದ ಅಪಾರ ಜನಸ್ತೋಮ ಜಯಘೋಷಗಳನ್ನು ಕೂಗಿದರು. ಜಿ20 ಸಭೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಮೋದಿ ಭೇಟಿ ನೀಡಿದರು.
ಕ್ರಿಮಿನಲ್ ಕೇಸುಗಳ ಮಾಧ್ಯಮ ವಿಚಾರಣೆ ಸಲ್ಲ: ನ್ಯೂಸ್ ರೂಮ್ ಕೋರ್ಟ್‌ಗೆ ಕಡಿವಾಣ ಹಾಕಿ: ಸುಪ್ರೀಂಕೋರ್ಟ್
ಇದೇ ವೇಳೆ ಜಿ20 ಶೃಂಗ ಸಭೆಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟವು (Union Cabinet) ಬುಧವಾರ ಅಂಗೀಕರಿಸಿದೆ.