ಕಾಶಿ ವಿಶ್ವನಾಥ ಮಂದಿರ ನವೀಕರಣ; ಸೋಮನಾಥ ಬಳಿಕ ಮತ್ತೊಂದು ಧಾರ್ಮಿಕ ತಾಣಕ್ಕೆ ಆಧುನಿಕ ಸ್ಪರ್ಶ!
- ಕಾಶಿ ವಿಶ್ವನಾಥ ಮಂದಿರಕ್ಕೆ ಆಧುನಿಕ ಸ್ಪರ್ಶ ನೀಡಲು ಕಾಮಗಾರಿ
- ನವೆಂಬರ್ ಒಳಗೆ ಕಾಮಗಾರಿ ಪೂರ್ತಿಗೊಳಿಸಲು ನಿರಂತರ ಕೆಲಸ
- ಸೋಮನಾಥ ಮಂದಿರ ಬಳಿಕ ಇದೀಗ ಕಾಶೀ ವಿಶ್ವನಾಥ ಮಂದಿರ
ವಾರಣಾಸಿ(ಸೆ.04): ದೇಶದ ಪ್ರಸಿದ್ಧ ಧಾರ್ಮಿಕ ತಾಣ ಕಾಶಿ ವಿಶ್ವನಾಥ ಮಂದಿರಕ್ಕೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಧಾರ್ಮಿಕ ಕ್ಷೇತ್ರದ ಪಾರಂಪರಿಕತೆ ನಷ್ಟವಾಗದಂತೆ ಹೊಸ ರೂಪ ನೀಡಲಾಗುತ್ತಿದೆ. ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಕಾಮಗಾರಿ ಇದೀಗ ತೀವ್ರ ವೇಗದಲ್ಲಿ ನಡೆಯತ್ತಿದೆ. ನವೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉತ್ತರ ಪ್ರದೇಶ ಸರ್ಕಾರ ಟೊಂಕ ಕಟ್ಟಿ ನಿಂಚಿದೆ.
ಕಾಶಿ ವಿಶ್ವನಾಥ ಮೂಲ ಮಂದಿರದ ಮೇಲೆ ಮಸೀದಿ; ಸತ್ಯ ಬಹಿರಂಗ ಪಡಿಸಲು ಐವರ ಸಮಿತಿಕಾಶೀ ವಿಶ್ವನಾಥ ಮಂದಿರದ ನವೀಕರಣ ಕಾಮಗಾರಿ 2021ರೊಳಗೆ ಪೂರ್ಣಗೊಳಿಸುವುದಾಗಿ ಕಾಶಿ ವಿಶ್ವನಾಥ್ ಧಾಮ್ ಯೋಜನೆ ಗಡುವು ನೀಡಿದೆ. ಆದರೆ ಕೊರೋನಾ ಕಾರಣ ಕಾಮಗಾರಿ ವೇಗಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. ಇನ್ನು ನವೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ. ಬಳಿಕ ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಆಗಮಿಸಲಿದೆ.
ಇನ್ನೆರಡು ತಿಂಗಳಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಆಧುನಿಕ ಸ್ಪರ್ಶ ಸಿಗಲಿದೆ. ಪುರಾತನ ದೇವಾಲಯವನ್ನು ನವೀಕರಣ, ಮೂಲಭೂತ ಸೌಕರ್ಯ, ಸಂಕೀರ್ಣ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. 1,200 ಕೆಲಸಗಾರರು ದಿನದ 24 ಗಂಟೆ ಕಾಮಗಾರಿಯಲ್ಲಿ ತೊಡಗಿದ್ದಾರೆ.
ಕಾಶಿ ಮಸೀದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಿಗೆ ಹತ್ಯೆ ಬೆದರಿಕೆ!
600 ಕಾರ್ಮಿಕರನ್ನು ಹೆಚ್ಚುವರಿಯಾಗಿ ಕಾಮಗಾರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇತ್ತೀಚೆಗಿನ ಪ್ರವಾಹ ಕೂಡ ಕಾಮಗಾರಿ ವಿಳಂಬಕ್ಕೆ ಕಾರವಾಗಿತ್ತು. 439 ಕೋಟಿ ರೂಪಾಯಿ ಯೋಜನೆ ವಿಳಂಬದ ಕಾರಣ ಇದೀಗ 400 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಯೋಜನೆಯಲ್ಲಿ ಕಾಶಿ ವಿಶ್ವನಾಥ ಮಂದಿರದ ಸನಿಹದಲ್ಲಿ ನೆಲಸಮವಾಗಿರುವ ಹಲವು ಮಂದಿರಗಳು, ಶಿಥಿಲಗೊಂಡಿರು ಸಣ್ಣ ಮಂದಿರಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ.