Asianet Suvarna News Asianet Suvarna News

ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ವ್ಯಕ್ತಿಯ ರಕ್ಷಣೆ... ರೋಚಕ ವಿಡಿಯೋ ವೈರಲ್‌

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ
  • ವ್ಯಕ್ತಿಯನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ
  • ಮಹಾರಾಷ್ಟ್ರದ ವಸಾಯಿ ರೈಲು ನಿಲ್ದಾಣದಲ್ಲಿ ಘಟನೆ
RPF Jawans Rescue Passenger From Falling Onto Tracks at Vasai Railway Station in Maharashtra akb
Author
Bangalore, First Published Jan 25, 2022, 3:37 PM IST

ಮುಂಬೈ: ರೈಲ್ವೇ ಸಂರಕ್ಷಣಾ ಪಡೆಯ (ಆರ್‌ಪಿಎಫ್) ಸಿಬ್ಬಂದಿಯೋರ್ವರ ಸಮಯಪ್ರಜ್ಞೆ ಹಾಗೂ ದಿಢೀರ್ ಕಾರ್ಯಾಚರಣೆಯಿಂದಾಗಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ವ್ಯಕ್ತಿಯೊಬ್ಬನ ಪ್ರಾಣ ಉಳಿದ ಘಟನೆ ನಡೆದಿದೆ.  ಮಹಾರಾಷ್ಟ್ರದ (Maharashtra)  ವಸಾಯಿ (Vasai) ರೈಲು ನಿಲ್ದಾಣದಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕರೊಬ್ಬರು ಸಮತೋಲನ ಕಳೆದುಕೊಂಡು ಬಹುತೇಕ ಹಳಿಗೆ ಜಾರಿದ್ದಾರೆ. ಈ ವೇಳೆ ಧಾವಿಸಿ ಬಂದ ಚಾಣಾಕ್ಷ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಮೇಲೆ ಎಳೆದು ರಕ್ಷಣೆ ಮಾಡಿದ್ದಾರೆ. 

ಈ ಘಟನೆಯ ದೃಶ್ಯವೀಗ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಅಲ್ಲದೇ ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ರೈಲಿಗೆ ಸ್ಪರ್ಧೆ ನೀಡಿದ ಕುದುರೆ... ಚಲಿಸುತ್ತಿರುವ ರೈಲುಗಳ ಮಧ್ಯೆ ಓಟ: ವಿಡಿಯೋ ವೈರಲ್‌

ಇಂತಹದ್ದೇ ಒಂದು ಪ್ರಕರಣ ನಾಗಪುರದಲ್ಲಿಯೂ (Nagpur) ನಡೆದಿತ್ತು. ನಾಗಪುರದಲ್ಲಿ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಹಿಳೆಯೊಬ್ಬರು ಕೆಳಗೆ ಬಿದ್ದಿದ್ದರು. ಕೂಡಲೇ ಅಲ್ಲಿದ್ದ ರೈಲ್ವೇ ಸಂರಕ್ಷಣಾ ಪಡೆಯ ಜವಾನ ಮಹಿಳೆಯನ್ನು ರಕ್ಷಿಸಿ ಪ್ರಾಣ ಉಳಿಸಿದ್ದಾನೆ. ಈ ವಿಡಿಯೋವನ್ನು ರೈಲ್ವೇ ಸಂರಕ್ಷಣಾ ಪಡೆ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಾಕಿತ್ತು. ಈ ವಿಡಿಯೋದಲ್ಲಿ ಆರ್‌ಪಿಎಫ್ ಕಾನ್‌ಸ್ಟೇಬಲ್‌ ನರಪಾಲ್‌ ಸಿಂಗ್‌ (Narpal Singh) ಮಹಿಳೆಯನ್ನು ರಕ್ಷಿಸಿದ ದೃಶ್ಯ ಸೆರೆಯಾಗಿದೆ. ಓಡಿ ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಮಹಿಳೆ ಸಮತೋಲನ ತಪ್ಪಿ ರೈಲ್ವೆ ಹಳಿಗೆ ಬೀಳುವ ಮೊದಲು ನರಪಾಲ್‌ ಸಿಂಗ್‌ ಆಕೆಯನ್ನು ಮೇಲೆತ್ತಿ ರಕ್ಷಣೆ ಮಾಡಿದ್ದರು. 

ಈ ವಿಡಿಯೋವನ್ನು ಶೇರ್‌ ಮಾಡಿದ ರೈಲ್ವೇ ಸಂರಕ್ಷಣಾ ಪಡೆ ಪ್ರಯಾಣಿಕರಿಗೆ ಚಲಿಸುವ ರೈಲನ್ನು ಹತ್ತದಂತೆ ಮನವಿ ಮಾಡಿದೆ.

ರೈಲು ಬರುತ್ತಿದ್ದಂತೆ ಫ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದ ಮಹಿಳೆಯನ್ನು ಕೆಳಗೆ ತಳ್ಳಿದ ವ್ಯಕ್ತಿ... ಭಯಾನಕ ವಿಡಿಯೋ

ಕೆಲದಿನಗಳ ಹಿಂದೆ ವ್ಯಕ್ತಿಯೊಬ್ಬ ರೈಲು ಬರುವುದನ್ನು ನೋಡಿ ಕೂಡಲೇ ಓಡಿ ಬಂದು ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. ಆದರೆ ಈತನ ಅದೃಷ್ಟಕ್ಕೆ ಈತ ಬರುವುದನ್ನು ನೋಡಿದ್ದ ರೈಲಿನ ಲೋಕೋ ಪೈಲಟ್‌ ಕೂಡಲೇ ರೈಲು ನಿಲ್ಲಿಸಿದ್ದರು. ನಂತರ ರೈಲ್ವೆ ಪೊಲೀಸರು ಆಗಮಿಸಿ ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಕರೆದೊಯ್ದಿದ್ದರು.  ಮುಂಬೈನ (Mumbai) ಶಿವ್ದಿ ರೈಲ್ವೆ ನಿಲ್ದಾಣ (Shivdi station) ದಲ್ಲಿ ಈ ಘಟನೆ ನಡೆದಿತ್ತು.

Follow Us:
Download App:
  • android
  • ios