ಹನುಮ ಮೆರವಣಿಗೆ ಮೇಲೆ ಕಲ್ಲು ತೂರಾಟ ಕರ್ನೂಲ್‌ನಲ್ಲಿ 20 ಮಂದಿ, ಡೆಹ್ರಾಡೂನಲ್ಲಿ ಕೆಲವರ ಬಂಧನ ಭೋಪಾಲ್‌ನಲ್ಲಿ ಹನುಮನಿಗೆ ಹೂ ಮಳೆಗರೆದ ಮುಸ್ಲಿಮರು

ನವದೆಹಲಿ: ದಿಲ್ಲಿ(Delhi) ಕರ್ನಾಟಕ (Karnataka) ಮಾತ್ರವಲ್ಲ ಉತ್ತರಾಖಂಡ (Uttarakhand) ಹಾಗೂ ಆಂಧ್ರಪ್ರದೇಶದಲ್ಲಿ ಕೂಡ ಹನುಮ ಜಯಂತಿ ವೇಳೆ ಕೋಮುಗಲಭೆ ನಡೆದಿವೆ. ಆಂಧ್ರಪ್ರದೇಶದ (Andhra Pradesh) ಕರ್ನೂಲ್‌ನಲ್ಲಿ (Kurnool) 20 ಜನ ಹಾಗೂ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಕೆಲವು ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಆಂಧ್ರಪ್ರದೇಶದ ಕರ್ನೂಲ್‌ (Kurnool) ಜಿಲ್ಲೆಯ ಹೋಲಾಗುಂಡಾ (Holagunda) ಎಂಬ ಗ್ರಾಮದಲ್ಲಿ ಶನಿವಾರ ರಾತ್ರಿ ರಮ್ಜಾನ್‌ ಆಚರಣೆ ವೇಳೆ ಮಸೀದಿ ಮುಂದೆ ಹನುಮ ಜಯಂತಿ ಮೆರವಣಿಗೆ ತೆರಳುತ್ತಿತ್ತು. ಮಸೀದಿಯಲ್ಲಿ ರಮ್ಜಾನ್‌ ಆಚರಣೆ ಕಾರಣ ಮೆರವಣಿಗೆಯ ಆಯೋಜಕರು ಹನುಮ ಗೀತೆಗಳ ಲೌಡ್‌ಸ್ಪೀಕರ್‌ ಬಂದ್‌ ಮಾಡಿದರು. ಆದರೆ ಮೆರವಣಿಗೆಯಲ್ಲಿದ್ದ ಕೆಲವರು ಮಸೀದಿ ಮುಂದೆ ‘ಜೈ ಶ್ರೀರಾಂ’ ಘೋಷಣೆ ಕೂಗಲಾರಂಭಿಸಿದರು. ಇದರಿಂದ ಕೆರಳಿದ ಮಸೀದಿಯಲ್ಲಿದ್ದ ಕೆಲವರು, ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಆಗ ಉಭಯ ಕೋಮುಗಳ ನಡುವೆ ಹೊಡೆದಾಟ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಲಾಗಿದೆ. ಇನ್ನು ಡೆಹ್ರಾಡೂನ್‌ನ ಭಗವಾನ್‌ಪುರದಲ್ಲಿ (Bhagwanpur) ಹನುಮಜಯಂತಿ ಶೋಭಾಯಾತ್ರೆ ಮೆರವಣಿಗೆ ಸಾಗುತ್ತಿದ್ದಾಗ ಹನುಮ ಭಕ್ತರ ಮೇಲೆ ಕಲ್ಲುತೂರಾಟ ನಡೆದಿದೆ. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ 13 ಜನರ ವಿರುದ್ಧ ಪ್ರಕರಣ ದಾಖಲಿಸಿ 9 ಜನರನ್ನು ಬಂಧಿಸಲಾಗಿದೆ. 

ಜಹಾಂಗೀರಪುರಿ ಹಿಂಸಾಚಾರ: ಭಯಾನಕ ಚಿತ್ರಣ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ

ಹನುಮನಿಗೆ ಹೂ ಮಳೆಗರೆದ ಮುಸ್ಲಿಮರು

ರಾಮನವಮಿ ಮೆರವಣಿಗೆ ವೇಳೆ ದೇಶದ ಹಲವೆಡೆ ನಡೆದ ಕೋಮುಗಲಭೆಗಳ ಬೆನ್ನಲ್ಲೇ ಹನುಮ ಜಯಂತಿಯ ಅಂಗವಾಗಿ ನಡೆಯುತ್ತಿದ್ದ ಶೋಭಾಯಾತ್ರೆ ವೇಳೆ ಭೋಪಾಲ್‌ನಲ್ಲಿ ಮುಸ್ಲಿಮರು ಹೂವಿನ ಮಳೆಗರೆದಿದ್ದಾರೆ. ಮುಸ್ಲಿಮರು ಶ್ರೀರಾಮನಿಗೆ ಹಾಗೂ ಹನುಮಾನ್‌ಗೆ ಜೈಕಾರ ಹಾಕಿದ ಸೌಹಾರ್ದ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ನಡೆದಿದೆ. ಶೋಭಾ ಯಾತ್ರೆ ನಡೆಯುತ್ತಿದ್ದ ಸಂದರ್ಭ ಮುಸ್ಲಿಂ ಸಮುದಾಯದವರು ಸ್ಥಳದಲ್ಲಿದ್ದು, ಮೆರವಣಿಗೆಯನ್ನು ಸ್ವಾಗತಿಸಿ ಭಾಗವಹಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದೆ. ಕಳೆದ ವಾರ ಮಧ್ಯಪ್ರದೇಶ ಖರ್ಗೋನ್‌ನಲ್ಲಿ (Khargon) ರಾಮನವಮಿ ಯಾತ್ರೆ ವೇಳೆ ಕೋಮುಗಲಭೆ ನಡೆದಿತ್ತು.

Scroll to load tweet…

ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣ: ಗುಂಡೇಟಿಗೊಳಗಾದ ಎಸ್ಐ ಹೇಳಿದ್ದೇನು?