ದೆಹಲಿಯ ಜಹಾಂಗೀರಪುರಿ ಹಿಂಸಾಚಾರ ಪ್ರಕರಣ ಗುಂಡು ಹಾರಿಸಿದ ಆರೋಪಿ ಅಪ್ರಾಪ್ತ ಎಂದ ಕುಟುಂಬ ಭಯಾನಕ ಚಿತ್ರಣ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ
ದೆಹಲಿ: ದೆಹಲಿಯ ಜಹಾಂಗೀರಪುರಿಯಲ್ಲಿ ನಡೆದ ಹನುಮ ಜಯಂತಿ ಶೋಭಾಯಾತ್ರೆ ವೇಳೆ ಗುಂಡು ಹಾರಿಸಿದ ಆರೋಪಿ ಅಪ್ರಾಪ್ತ ಎಂದು ಆತನ ಕುಟುಂಬ ಹೇಳಿದೆ. ಭಾನುವಾರ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಯ ಜನನ ಪ್ರಮಾಣ ಪತ್ರ ತೋರಿಸಿ, ಆತ 2005ರಲ್ಲಿ ಜನಿಸಿದ್ದು, ಹೀಗಾಗಿ ಅಪ್ರಾಪ್ತ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಆದರೆ, ಶನಿವಾರ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಆರೋಪಿಗೆ 22 ವರ್ಷ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿಯ ಜಹಾಂಗೀರಪುರಿಯಲ್ಲಿ ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ 14 ಜನರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತನಾದ ಓರ್ವ ಆರೋಪಿ 2020 ರಲ್ಲಿ ಬೇರೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದರಿಂದ ಆತನನ್ನು 'ಪುನರಾವರ್ತಿತ ಅಪರಾಧಿ' ಎಂದು ಪೊಲೀಸರು ವರ್ಗೀಕರಿಸಿದ್ದಾರೆ. ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
Jahangirpuri Violence: ದೆಹಲಿಯಯಲ್ಲಿ ಶೋಭಾಯಾತ್ರೆ ವೇಳೆ ದುಷ್ಕೃತ್ಯ: ಹನುಮ ಜಯಂತಿ ಯಾತ್ರೆಗೆ ಕಲ್ಲೇಟು
ಶನಿವಾರ ಸಂಜೆ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿತ್ತು. ನಂತರದ ಹಿಂಸಾಚಾರದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆದಿದೆ ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘರ್ಷಣೆಯ ವೇಳೆ ಆರೋಪಿ ಆರು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಒಬ್ಬ ಪೊಲೀಸ್ ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಜಹಾಂಗೀರ್‌ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಭಯಾನಕ ಚಿತ್ರಣವನ್ನು ಬಿಚ್ಚಿಟ್ಟಿದ್ದು, ನಾನು ನೋಡಿದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹನುಮ ಜಯಂತಿ ಮೆರವಣಿಗೆಯಲ್ಲಿ ನಡೆದ ಘರ್ಷಣೆ ವೇಳೆ ಎಎಸ್‌ಐ ಅರುಣ್ ಕುಮಾರ್ ಮೇಲೆ ಕಲ್ಲು ತೂರಾಟ ನಡೆದಿದೆ. ಅವರ ಕಾಲು ಮತ್ತು ಭುಜಗಳಿಗೆ ಗಾಯಗಳಾಗಿವೆ.
ಇಂಡಿಯಾ ಟುಡೆಯೊಂದಿಗೆ ಪ್ರತ್ಯೇಕವಾಗಿ ಈ ಬಗ್ಗೆ ಮಾತನಾಡಿದ ಅವರು, ತಾವು ಕಂಡದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಮತ್ತು ಎಲ್ಲೆಡೆ ಸಾಕಷ್ಟು ಅವ್ಯವಸ್ಥೆ ಮತ್ತು ಗದ್ದಲವಿತ್ತು ಎಂದು ಹೇಳಿದರು. ಎಎಸ್‌ಐ ಅರುಣ್ ಕುಮಾರ್ ಅವರು ಆರಂಭದಿಂದಲೂ ಈ ಶೋಭಾಯಾತ್ರೆಯ ಭಾಗವಾಗಿದ್ದರು ಮತ್ತು ಆಂಜನೇಯ ವಿಗ್ರಹವನ್ನು ಇರಿಸಲಾಗಿದ್ದ ಕಾರಿನ ಹಿಂದೆಯೇ ಇದ್ದರು. ಮೆರವಣಿಗೆಯು ಕುಶಾಲ್ ಚೌಕ್‌ಗೆ ತಲುಪುತ್ತಿದ್ದಂತೆ ಸಾವಿರಾರು ಜನರು ಇದ್ದಕ್ಕಿದ್ದಂತೆ ಮೆರವಣಿಗೆಯತ್ತ ಧಾವಿಸಿ ಬಂದರು.
ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣ: ಗುಂಡೇಟಿಗೊಳಗಾದ ಎಸ್ಐ ಹೇಳಿದ್ದೇನು?
ನಾನು ನೋಡಿದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸುತ್ತಲೂ ಗದ್ದಲವಿತ್ತು. ಜನಸಮೂಹದಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಇದ್ದರು. ಎರಡೂ ಕಡೆಯಿಂದ ಕಲ್ಲು ತೂರಾಟದೊಂದಿಗೆ ನಿಂದನೆ ಕೇಳಿ ಬಂತು ನಾವು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು ಆದರೆ ಯಾರೂ ನಮ್ಮ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ಅವರು ಹೇಳಿದರು.
ಎಲ್ಲರ ಕೈಯಲ್ಲೂ ಕತ್ತಿ, ಚಾಕುಗಳಿದ್ದವು. ಸುತ್ತಲೂ ಕಲ್ಲುಗಳು ಮತ್ತು ಬಾಟಲಿಗಳು ಕಾಣುತ್ತಿದ್ದವು ಎಂದು ಎಎಸ್‌ಐ ಅರುಣ್‌ಕುಮಾರ್ (ASI Arun Kumar) ನೆನಪಿಸಿಕೊಂಡರು. ಈ ವೇಳೆ ಜನರು ತಮ್ಮ ಕಾರುಗಳನ್ನು ಬಿಟ್ಟು ಓಡಲು ಪ್ರಾರಂಭಿಸಿದರು, ಅವರು ಕಾರುಗಳನ್ನು ಸುಡಲು ಪ್ರಯತ್ನಿಸಿದರು, ನಾವು ಅವರನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು, ನಾನು ಎಲ್ಲರನ್ನು ಅಲ್ಲಿಂದ ಕಳುಹಿಸಲು ಪ್ರಯತ್ನಿಸುತ್ತಿದ್ದೆ, ನಾನು ಜನರನ್ನು ರಕ್ಷಣೆ (Rescue) ಮಾಡಲು ಮುಂದಾದಾಗ ನನಗೆ ಕಲ್ಲೇಟು ಬಿತ್ತು ಎಂದು ಅರುಣ್ ಕುಮಾರ್ ಹೇಳಿದ್ದಾರೆ.