ಮ್ಯಾನ್ಮಾರ್‌ನಿಂದ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಉಳಿಯುವ ಹಕ್ಕನ್ನು ಕಲ್ಪಿಸಲಾಗದು. ಅಲ್ಲದೆ ಅವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲಾಗದು ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿದೆ. 

ನವದೆಹಲಿ (ಮಾ.22): ಮ್ಯಾನ್ಮಾರ್‌ನಿಂದ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಉಳಿಯುವ ಹಕ್ಕನ್ನು ಕಲ್ಪಿಸಲಾಗದು. ಅಲ್ಲದೆ ಅವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲಾಗದು ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿದೆ. ಈ ಕುರಿತು ಅದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ರೋಹಿಂಗ್ಯಾ ನಿರಾಶ್ರಿತರನ್ನು ಬಂಧನಾ ಕೇಂದ್ರಗಳಿಂದ ಬಿಡುಗಡೆ ಮಾಡಬೇಕು. ಇಂಥ ಬಂಧನ ವಿದೇಶಿ ಕಾಯ್ದೆಯ ಉಲ್ಲಂಘನೆ ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಹೀಗಾಗಿ ನಮ್ಮ ಪ್ರಜೆಗಳ ಆದ್ಯತೆ ಪೂರೈಸುವುದು ನಮ್ಮ ಮೊದಲ ಕರ್ತವ್ಯ. ಹೀಗಿರುವಾಗ ಅಕ್ರಮವಾಗಿ ಭಾರತ ಪ್ರವೇಶಿಸಿ ಇಲ್ಲಿ ಉಳಿದುಕೊಂಡಿರುವ ರೋಹಿಂಗ್ಯಾಗಳಿಗೆ ಇಲ್ಲೇ ಉಳಿಯುವ ಹಕ್ಕು ಕಲ್ಪಿಸುವುದು ದೇಶದ ಭದ್ರತೆ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಅಕ್ರಮ ವಲಸಿಗರಿಗೆ ನಿರಾಶ್ರಿತರ ಸ್ಥಾನಮಾನ ನೀಡುವುದು ಕೇಂದ್ರ ಸರ್ಕಾರದ ನೀತಿಯ ವಿಷಯ. ಈ ವಿಷಯದಲ್ಲಿ ನ್ಯಾಯಾಲಯಗಳು ಯಾವುದೇ ಆದೇಶ ಮೂಲಕ ಸ್ಥಾನಮಾನ ನೀಡುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಇಟಲಿ ಪ್ರಧಾನಿ ಮೆಲೋನಿ ಸೆಕ್ಸ್‌ ವಿಡಿಯೋ: ಪ್ರಕರಣ ದಾಖಲು

ರೋಹಿಂಗ್ಯಾಗಳು ಯಾರು?: ಬೌದ್ಧ ಧರ್ಮ ಅನುಯಾಯಿಗಳೇ ಹೆಚ್ಚಿರುವ ಮ್ಯಾನ್ಮಾರ್‌ನಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಳಿಕ ಸಾವಿರಾರು ರೋಹಿಂಗ್ಯಾ ಮುಸ್ಲಿಮರು ಭಾರತಕ್ಕೆ ಪ್ರವೇಶಿಸಿ ಇಲ್ಲೇ ಉಳಿದುಕೊಂಡಿದ್ದಾರೆ.

ಮ್ಯಾನ್ಮಾರ್‌ ರೋಹಿಂಗ್ಯಾಗಳಿಗೆ ವಸತಿ, ಭದ್ರತೆ ಇಲ್ಲ: ನವದೆಹಲಿ: ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವ ರೋಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ವಸತಿ ಅಥವಾ ಭದ್ರತೆ ನೀಡುವ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಹರದೀಪ್‌ಸಿಂಗ್‌ ಪುರಿ ಅವರು, ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಅಗ್ಗದ ದರದ ಫ್ಲ್ಯಾಟ್‌ಗಳನ್ನು ನೀಡಲಾಗುವುದು ಮತ್ತು ಅವರಿಗೆ ಭದ್ರತೆ ವಹಿಸಲಾಗುವುದು ಎಂದು ಟ್ವೀಟ್‌ ಮಾಡಿದ ಬೆನ್ನಲ್ಲೇ ಗೃಹ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ತಮಿಳ್ನಾಡು ಗೌರ್ನರ್‌ ರವಿಗೆ ಸುಪ್ರೀಂಕೋರ್ಟ್‌ ಪ್ರಹಾರ: ಪೊನ್ಮುಡಿಗೆ ಸಚಿವ ಸ್ಥಾನ ನೀಡದ್ದಕ್ಕೆ ಆಕ್ರೋಶ!

ಅಕ್ರಮ ವಲಸಿಗರಿಗೆ ಯಾವುದೇ ಮನೆ ನೀಡದಂತೆ ದೆಹಲಿಯ ಕೇಜ್ರಿವಾಲ್‌ ಸರ್ಕಾರ ಕ್ರಮ ವಹಿಸಬೇಕು. ಅವರನ್ನು ಕಾನೂನು ಮೂಲಕ ಗಡಿಪಾರು ಮಾಡುವವರೆಗೂ ಅವರು ಹಾಲಿ ಇರುವ ಸ್ಥಳದಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ನಿರಾಶ್ರಿತರಿಗೆ ಮನೆ ಮತ್ತು ಭದ್ರತೆ ನೀಡುವ ಬಗ್ಗೆ ಗೃಹ ಸಚಿವಾಲಯ ಯಾವುದೇ ಆದೇಶವನ್ನೂ ಹೊರಡಿಸಿಲ್ಲ ಎಂದು ಅದು ಸ್ಪಷ್ಟನೆ ನೀಡಿದೆ. ಮ್ಯಾನ್ಮಾರ್‌ನಲ್ಲಿ ಸೇನಾ ಹಿಂಸೆ ತಾಳಲಾದರೆ ಸುಮಾರು 40000 ರೋಹಿಂಗ್ಯಾ ಮುಸ್ಲಿಮರು, ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ದಿಲ್ಲಿಯಲ್ಲಿ ಸುಮಾರು 1500 ಜನರಿದ್ದಾರೆ ಎಂಬ ಅಂದಾಜಿದೆ.