ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಇಟಲಿ ಪ್ರಧಾನಿ ಮೆಲೋನಿ ಸೆಕ್ಸ್ ವಿಡಿಯೋ: ಪ್ರಕರಣ ದಾಖಲು
ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಖ್ಯಾತನಾಮನ ಹೆಸರಿಗೆ ಕಳಂಕ ಬಳಿಯುವ ಯತ್ನಗಳು ಮುಂದುವರೆದಿದ್ದು, ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದಕ್ಕೆ ತುತ್ತಾಗಿದ್ದಾರೆ. ಇಟಲಿ ಇಬ್ಬರು ವ್ಯಕ್ತಿಗಳು ಸೆಕ್ಸ್ ವಿಡಿಯೋವೊಂದಕ್ಕೆ ಮೆಲೋನಿ ಮುಖ ಸೇರಿಸಿ ಆನ್‌ಲೈನ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು.
ಮಿಲಾನ್ (ಮಾ.22): ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಖ್ಯಾತನಾಮನ ಹೆಸರಿಗೆ ಕಳಂಕ ಬಳಿಯುವ ಯತ್ನಗಳು ಮುಂದುವರೆದಿದ್ದು, ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದಕ್ಕೆ ತುತ್ತಾಗಿದ್ದಾರೆ. ಇಟಲಿ ಇಬ್ಬರು ವ್ಯಕ್ತಿಗಳು ಸೆಕ್ಸ್ ವಿಡಿಯೋವೊಂದಕ್ಕೆ ಮೆಲೋನಿ ಮುಖ ಸೇರಿಸಿ ಆನ್‌ಲೈನ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ಅಮೆರಿಕದಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಈ ವಿಡಯೋ ಕೆಲವೇ ತಿಂಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿತ್ತು. ಮೆಲೋನಿ ಪ್ರಧಾನಿಯಾಗುವುದಕ್ಕೂ ಮುನ್ನ ನಡೆದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಈ ಕುರಿತು ಪೊಲೀಸರು ದುಷ್ಕೃತ ಎಸಗಿದ ಅಪ್ಪ-ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಮೆಲೋನಿ 85 ಲಕ್ಷ ರು. ಪರಿಹಾರ ಕೋರಿ ಕೇಸು ದಾಖಲಿಸಿದ್ದಾರೆ. ಆದರೆ ಈ ಹಣವನ್ನು ಕೇವಲ ಸಾಂಕೇತಿಕವಾಗಿ ಕೇಳಲಾಗಿದೆ. ಇದು ಮಹಿಳೆಯರನ್ನು ಅನಾವಶ್ಯವಾಗಿ ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳುವವರಿಗೆ ಎಚ್ಚರಿಕೆ ಸಂದೇಶವಾಗಲಿದೆ. ಪರಿಹಾರದ ರೂಪದಲ್ಲಿ ಸಿಗುವ ಪೂರ್ಣ ಹಣವನ್ನು ಪುರುಷರಿಂದ ಹಿಂಸೆಗೆ ಒಳಗಾದ ಮಹಿಳೆಯರ ಕಲ್ಯಾಣಕ್ಕೆ ಬಳಸುವುದಾಗಿ ಮೆಲೋನಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ಭಾರತದಲ್ಲೂ ಇತ್ತೀಚೆಗೆ ಹಲವು ಖ್ಯಾತನಾಮ ನಟಿಯರ ಫೋಟೋ, ವಿಡಿಯೋಗಳನ್ನು ಹೀಗೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿಕೊಂಡು ಅಶ್ಲೀಲವಾಗಿ ಚಿತ್ರಿಸಲಾಗಿತ್ತು.
ಇಸ್ಲಾಂ, ಯುರೋಪ್ ಮಧ್ಯೆ ಹೊಂದಾಣಿಕೆ ಇಲ್ಲ: ಇಸ್ಲಾಂ ಸಂಸ್ಕೃತಿ ಮತ್ತು ಐರೋಪ್ಯ ನಾಗರಿಕತೆಯ ಮೌಲ್ಯಗಳು ಹಾಗೂ ಹಕ್ಕುಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂದು ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಇಸ್ಲಾಂ ಸಂಸ್ಕೃತಿ ಅಥವಾ ಅದರ ಕೆಲವು ವ್ಯಾಖ್ಯಾನ ಮತ್ತು ನಮ್ಮ ನಾಗರಿಕತೆಯ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಸೌದಿ ಅರೇಬಿಯಾದಿಂದ ಆರ್ಥಿಕ ನೆರವು ಪಡೆಯುವ ಇಸ್ಲಾಂ ಸಂಸ್ಕೃತಿ ಬಹುತೇಕ ಇಟಲಿಯಲ್ಲಿ ಕೇಂದ್ರಿತವಾಗಿದೆ’ ಎಂದು ಪ್ರಧಾನಿ ಮೆಲೋನಿ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಹಳೆಯ ವಿಡಿಯೋ ಎನ್ನಲಾಗಿದೆ.
ಪ್ರಧಾನಿ ಮೋದಿ ಮಹದಾಯಿ ಗ್ಯಾರಂಟಿ ಕೊಡಲಿ: ಕಾಂಗ್ರೆಸ್
ವಿಡಿಯೋದಲ್ಲಿ ಸೌದಿ ಅರೇಬಿಯಾದ ಷರಿಯಾ ಕಾನೂನನ್ನು ಜರಿದಿರುವ ಪ್ರಧಾನಿ ಮೆಲೋನಿ, ಷರಿಯಾ ಕಾನೂನಿನ ಪ್ರಕಾರ ಧರ್ಮಭ್ರಷ್ಟತೆ ಮತ್ತು ಸಲಿಂಗಕಾಮ ಗಂಭೀರ ಕ್ರಿಮಿನಲ್ ಅಪರಾಧಗಳು. ಇದನ್ನು ಸಾಮಾನ್ಯವಾಗಿ ಇಸ್ಲಾಂ ಕಾನೂನು ಎಂದೇ ಕರೆಯುತ್ತಾರೆ. ಇಸ್ಲಾಂ ಪವಿತ್ರ ಗ್ರಂಥ ಕುರಾನ್‌ನಲ್ಲಿಯ ಕೆಲವು ತತ್ವಗಳನ್ನು ಇದರಲ್ಲಿ ಕಾನೂನುಗಳಾಗಿ ರಚಿಸಲಾಗಿದೆ ಎಂದು ಹೇಳಿದ್ದಾರೆ.