215 ಕಿ.ಮೀಗಿಂತ ದೂರದ ಸಾಮಾನ್ಯ ರೈಲುಗಳ ಟಿಕೆಟ್ ದರ ಪ್ರತಿ ಕಿ.ಮೀಗೆ 1 ಪೈಸೆ, ಎ.ಸಿ ಮತ್ತು ಎ.ಸಿ ಸೌಲಭ್ಯ ಇಲ್ಲದ ಮೇಲ್, ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಿಸಿರುವ ಹೊಸ ದರವು ಡಿ.26ರಿಂದ ಜಾರಿಯಾಗಲಿದೆ.
ನವದೆಹಲಿ: 215 ಕಿ.ಮೀಗಿಂತ ದೂರದ ಸಾಮಾನ್ಯ ರೈಲುಗಳ ಟಿಕೆಟ್ ದರ ಪ್ರತಿ ಕಿ.ಮೀಗೆ 1 ಪೈಸೆ, ಎ.ಸಿ ಮತ್ತು ಎ.ಸಿ ಸೌಲಭ್ಯ ಇಲ್ಲದ ಮೇಲ್, ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಿಸಿರುವ ಹೊಸ ದರವು ಡಿ.26ರಿಂದ ಜಾರಿಯಾಗಲಿದೆ.
ಇಂದಿನಿಂದ ಜಾರಿಗೆ
ಡಿ.21ರಂದು ರೈಲ್ವೆ ಸಚಿವಾಲಯ ದರ ಹೆಚ್ಚಳದ ಬಗ್ಗೆ ಘೋಷಿಸಿದ್ದು, ಶುಕ್ರವಾರದಿಂದ ಜಾರಿಯಾಗಲಿದೆ ಎಂದು ಅಧಿಕೃಯ ಪ್ರಕಟಣೆ ಹೊರಡಿಸಿದೆ.
ಒಂದು ವರ್ಷದಲ್ಲಿ ರೈಲ್ವೆ ದರ ಹೆಚ್ಚಿಸುತ್ತಿರುವುದು ಇದು 2ನೇ ಸಲ
ಒಂದು ವರ್ಷದಲ್ಲಿ ರೈಲ್ವೆ ದರ ಹೆಚ್ಚಿಸುತ್ತಿರುವುದು ಇದು 2ನೇ ಸಲ. ಕಳೆದ ಜುಲೈನಲ್ಲಿ ಏರಿಕೆಯಾಗಿತ್ತು. ಹೊಸ ದರವು ಅಲ್ಪಮಟ್ಟದ ಏರಿಕೆಯಾಗಿದ್ದು, 500 ಕಿ.ಮೀ. ನಾನ್ ಎ.ಸಿ ವಿಭಾಗದ ಟಿಕೆಟ್ ದರ 10 ರು.ನಷ್ಟು ಹೆಚ್ಚಳವಾಗಲಿದೆ. ಅಲ್ಲದೇ ಪಾಸ್ ಹೊಂದಿರುವವರಿಗೆ ಯಾವುದೇ ಪರಿಣಾಮ ಬೀರಲ್ಲ.


