Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಗಮನ ಸೆಳೆಯಿತು ರಿಕ್ಷಾ ರಿವರ್ಸ್ ಓಡಿಸುವ ಸ್ಪರ್ಧೆ... ವಿಡಿಯೋ ನೋಡಿ

ಇಲ್ಲೊಂದು ಕಡೆ ರಿಕ್ಷಾವನ್ನು ರಿವರ್ಸ್ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಆಟೋ ಚಾಲಕರು ತಮ್ಮ ಆಟೋಗಳನ್ನು ಮಣ್ಣು ರಸ್ತೆಗಳಲ್ಲಿ ವೇಗವಾಗಿ ಹಿಂದಕ್ಕೆ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Reverse rickshaw driving competition has attracted attention in Maharashtra Watch the video akb
Author
First Published Jan 25, 2023, 7:52 PM IST

ಮುಂಬೈ: ನೀವು ಎತ್ತಿನ ಗಾಡಿ ಓಟದ ಸ್ಪರ್ಧೆ ಕುದುರೆ ಓಟದ ಸ್ಪರ್ಧೆ ಮಣ್ಣು ರಸ್ತೆಯಲ್ಲಿ ಕಾರಿನ ರೇಸ್ ಮುಂತಾದ ಸ್ಪರ್ಧೆಗಳನ್ನು  ಸಾಕಷ್ಟು ನೋಡಿರುತ್ತೀರಿ. ಆದರೆ ವಾಹನವನ್ನು ಹಿಂದಕ್ಕೆ ಓಡಿಸುವುದನ್ನು ಎಲ್ಲಾದರು ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ. ಇಲ್ಲೊಂದು ಕಡೆ ರಿಕ್ಷಾವನ್ನು ರಿವರ್ಸ್ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಆಟೋ ಚಾಲಕರು ತಮ್ಮ ಆಟೋಗಳನ್ನು ಮಣ್ಣು ರಸ್ತೆಗಳಲ್ಲಿ ವೇಗವಾಗಿ ಹಿಂದಕ್ಕೆ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ಈ ಘಟನೆ ಮಹಾರಾಷ್ಟ್ರದ (Maharashtra) ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ರೇಸ್‌ನಲ್ಲಿ ಭಾಗವಹಿಸಿದ ಆಟೋ ಚಾಲಕರು ಹಿಂಬದಿಗೆ (reverse race) ತಮ್ಮ ಆಟೋವನ್ನು ವೇಗವಾಗಿ ಚಲಾಯಿಸುತ್ತಾ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.  ಈ  ದೃಶ್ಯವನ್ನು ನೋಡಲು  ನೂರಾರು ಜನ ಮಣ್ಣ ರಸ್ತೆಯ ಅಕ್ಕಪಕ್ಕದ ಜಾಗದಲ್ಲಿ ನಿಂತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.  ಹಿಂಬದಿ ನೋಡುತ್ತಾ ಆಟೋ ಚಾಲಕರು  ತಾವ್ಯಾರಿಗೂ ಕಡಿಮೆ ಇಲ್ಲವೆಂಬಂತೆ ಆಟೋವನ್ನು ವೇಗವಾಗಿ ರಿವರ್ಸ್ ಓಡಿಸುತ್ತಿದ್ದಾರೆ.

ಹಗ್ಗ ಕಟ್ಟಿ ವಿಮಾನ ಎಳೆದ ಜನ: ಯಾಕಿರಬಹುದು ಈ ಸಾಹಸ

ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯ ಹರಿಪುರ (Haripur) ಗ್ರಾಮದಲ್ಲಿ ಮಂಗಳವಾರ ಈ ಸ್ಪರ್ಧೆ (Auto Race)ಆಯೋಜಿಸಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಹರಿಪುರ್ ಗ್ರಾಮದಲ್ಲಿ ನಡೆದ ಸಂಗಮೇಶ್ವರ ಯಾತ್ರೆಯ (Sangameshwar Yatra) ಅಂಗವಾಗಿ ಈ ಸ್ಪರ್ಧೆಯನ್ನು ಸಂಘಟಕರು ಆಯೋಜಿಸಿದ್ದರು.  ಈ ಸ್ಪರ್ಧೆಯಲ್ಲಿ ಆಟೋ ಚಾಲಕರ ಹುರುಪಿನ ಚಾಲನೆಯನ್ನು ನೋಡಲು ಮಣ್ಣು ರಸ್ತೆಯ ಉದ್ದಕ್ಕೂ ಸಾವಿರಾರು ಜನ ನಿಂತುಕೊಂಡು ಸೀಳೆ ಹೊಡೆದು ಬೊಬ್ಬೆ ಹಾಕಿ ಚಾಲಕರನ್ನು ಪ್ರೋತ್ಸಾಹಿಸುತ್ತಿರುವುದು ಕಾಣುತ್ತಿತ್ತು. 

ಅಲ್ಲದೇ ಒರ್ವ ಲೈವ್ ಕಾಮೆಂಟರಿ ಮೂಲಕ ಸ್ಪರ್ಧೆಯನ್ನು ವಿವರಿಸುತ್ತಿರುವುದು ಕೇಳಿ ಬಂತು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  80  ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಅನೇಕರು ಆಟೋ ಚಾಲಕರ ಸಾಮರ್ಥ್ಯಕ್ಕೆ ಸಲಾಂ ಹೇಳಿದ್ದಾರೆ. ಮತ್ತೆ ಕೆಲವರು ಆಟೋದಲ್ಲೂ ರಿವರ್ಸ್ ಗೇರ್ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಈ ಸ್ಪರ್ಧೆಯನ್ನು ಕೂಡ ಸೇರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಈ ಸ್ಪರ್ಧೆಗೆ ರಿಕ್ಷಾ ರಿಟರ್ನ್ಸ್‌ ಎಂದು ಹೆಸರಿಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ. 

50ಕ್ಕೆ ಜಿದ್ದು ಕಟ್ಟಿ ಗಬಗಬನೆ 41 ಮೊಟ್ಟೆ ತಿಂದ ಭೂಪ, ಆಮೇಲೆ ಏನಾಯ್ತು?

ಕಳೆದ ವರ್ಷ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಅಂಬೆಗಾನ್ ತೆಹ್ಸಿಲ್‌ನಲ್ಲಿ ಎತ್ತಿನಗಾಡಿಯ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚು ಎತ್ತಿನಗಾಡಿಗಳ ಮಾಲೀಕರು  ಭಾಗವಹಿಸಿದ್ದರು.  ಶಿರೂರು ಕ್ಷೇತ್ರದ ಶಿವಸೇನೆಯ ಮಾಜಿ ಸಂಸದ ಶಿವಾಜಿರಾವ್ ಅಂದಾಲ್ ರಾವ್ ಪಾಟೀಲ್ ಈ  ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಪುಣೆ ಜಿಲ್ಲೆಯವರು ಮಾತ್ರವಲ್ಲದೇ ಅಹ್ಮದಾಬಾದ್‌ ಜಿಲ್ಲೆಯ ಎತ್ತಿನಗಾಡಿ ಮಾಲೀಕರು ಕೂಡ ಭಾಗವಹಿಸಿದ್ದರು. 

 

Follow Us:
Download App:
  • android
  • ios