Asianet Suvarna News Asianet Suvarna News

ಹಗ್ಗ ಕಟ್ಟಿ ವಿಮಾನ ಎಳೆದ ಜನ: ಯಾಕಿರಬಹುದು ಈ ಸಾಹಸ

ಅಮೆರಿಕಾದ ವರ್ಜಿನಿಯಾದಲ್ಲಿ ಈ ವಿಚಿತ್ರ ಸ್ಪರ್ಧೆಯೊಂದು ನಡೆದಿದೆ. ಇಲ್ಲಿ ಜನರೆಲ್ಲಾ ಸೇರಿ ವಿಮಾನ ಎಳೆದಿದ್ದಾರೆ. ಪ್ರತಿವರ್ಷವೂ ಇಲ್ಲಿನ ಜನರು ಈ ವಿಮಾನ ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ನಿಧಿ ಸಂಗ್ರಹಕ್ಕಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆಯಂತೆ.

Annual plane pulling event takes place at Dulles International Airport in Virginia for fund rising to Special Olympics akb
Author
First Published Sep 22, 2022, 4:38 PM IST

ವರ್ಜಿನಿಯಾ: ನೀವು ನಮ್ಮ ಗ್ರಾಮೀಣ ಕ್ರೀಡೆ ಹಗ್ಗ ಜಗ್ಗಾಟವನ್ನು ನೋಡಿರಬಹುದು ಅಥವಾ ಕೇಳಿ ತಿಳಿದಿರಬಹುದು. ಹಗ್ಗಜಗ್ಗಾಟ ಬಹಳ ಮೋಜಿನ ಜೊತೆ ಸಾಮೂಹಿಕವಾಗಿ ಶಕ್ತಿ ಸಾಮರ್ಥ್ಯವನ್ನು ಹೊರಗೆಡಹುವ ಸ್ಪರ್ಧೆ, ಇದರಲ್ಲಿ ಎರಡು ತಂಡಗಳು ಅತ್ತಿತ್ತ ನಿಂತು ದೊಡ್ಡದಾದ ಹಗ್ಗವನ್ನು ತಮ್ಮತ್ತ ಎಳೆಯುತ್ತಾರೆ. ಯಾರೂ ಹಗ್ಗವನ್ನು ತಮ್ಮತ್ತ ಸಂಪೂರ್ಣವಾಗಿ ಎಳೆಯುತ್ತಾರೋ ಅವರು ಜಯಶಾಲಿಗಳಾಗುತ್ತಾರೆ. ಈ ವಿಚಾರ ಈಗ್ಯಾಕೆ ಅಂತೀರಾ ಈ ಸ್ಟೋರಿ ನೋಡಿ.

ನೀವು ಇದುವರೆಗೆ ರಸ್ತೆ ನಡುವೆ ಹಾಳಾದ ವಾಹನಗಳನ್ನು ಹಗ್ಗ ಕಟ್ಟಿ ಎಳೆದೊಯ್ದು ಗ್ಯಾರೇಜ್‌ಗೆ ತಲುಪಿಸುವ ದೃಶ್ಯವನ್ನು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಜನರೆಲ್ಲಾ ಸೇರಿ ವಿಮಾನವನ್ನು ಎಳೆಯುತ್ತಿದ್ದಾರೆ. ಇದೇಕೆ ವಿಮಾನವನ್ನು ಇವರು ಹೀಗೆ ಹಗ್ಗ ಕಟ್ಟಿ ಎಳೆಯುತ್ತಿದ್ದಾರೆ. ವಿಮಾನ ಅರ್ಧದಲ್ಲಿ ಹಾಳಾಯಿತು ಅದಕ್ಕೆ ಎಳೆದು ದಾರಿಗೆ ತರುತ್ತಿದ್ದಾರೆ ಎಂದು ಊಹಿಸೋಣವೆಂದರೆ ವಿಮಾನ ಎಂದಿಗೂ ನೆಲದ ಮೇಲೆ ಚಲಿಸದು, ಆಕಾಶದ ಮೇಲೆ ಚಲಿಸುವಾಗ ಹಾಳಾದರೆ ದೇವರೇ ಗತಿ ಬಿಡಿ. ಆದರೂ ಈ ಜನರು ವಿಮಾನವನ್ನು ಎಳೆಯುತ್ತಿರುವುದನ್ನು ನೋಡಿದರೆ ಏನೋ ಕಾರಣವಿರಬೇಕು ಎಂದು ನಿಮಗೆ ಅನಿಸದಿರದು. 

 

ಅಂದಹಾಗೆ ಅಮೆರಿಕಾದ ವರ್ಜಿನಿಯಾದಲ್ಲಿ ಈ ವಿಚಿತ್ರ ಸ್ಪರ್ಧೆಯೊಂದು ನಡೆದಿದೆ. ಇಲ್ಲಿ ಜನರೆಲ್ಲಾ ಸೇರಿ ವಿಮಾನ ಎಳೆದಿದ್ದಾರೆ. ಪ್ರತಿವರ್ಷವೂ ಇಲ್ಲಿನ ಜನರು ಈ ವಿಮಾನ ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ನಿಧಿ ಸಂಗ್ರಹಕ್ಕಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆಯಂತೆ. ಹೀಗಾಗಿ ಪ್ರತಿವರ್ಷ ವರ್ಜಿನಿಯಾದ ನಿವಾಸಿಗಳು ಈ ವಿಮಾನ ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಇದೊಂದು ನಿಧಿ ಸಂಗ್ರಹಕ್ಕಾಗಿ ಕೈಗೊಂಡ ವಿಭಿನ್ನವಾದ ಸ್ಪರ್ಧೆಯಾಗಿದೆ. ಡಲ್ಲೆಸ್ ಪ್ಲೇನ್ ಪುಲ್ ಸ್ಪರ್ಧೆ (Dulles Plane Pull competition) ಎಂದೇ ಈ ಸ್ಪರ್ಧೆ ಫೇಮಸ್ ಆಗಿದೆ. 30 ವರ್ಷಗಳ ಹಿಂದೆ ಆರಂಭವಾದ ಈ ಸ್ಪರ್ಧೆಯಲ್ಲಿ 25 ಜನರಿರುವ ಗುಂಪುಗಳು ಸೇರಿ 12 ಅಡಿ ದೂರವನ್ನು ದಾಟುವವರೆಗೆ ವಿಮಾನಗಳನ್ನು ಎಳೆಯುತ್ತಾರೆ. ವೇಗವಾಗಿ ಈ ದೂರವನ್ನು ಕ್ರಮಿಸಿದ ತಂಡವು ಬಹುಮಾನ ಗೆಲ್ಲುತ್ತದೆ. ಇದು ಡಲ್ಲೆಸ್ ಪ್ಲೇನ್ ಫುಲ್ ಎಂಬ ಫೇಸ್ಬುಕ್ ಪೇಜ್‌ನ್ನು ಕೂಡ ಹೊಂದಿದೆ.

50ಕ್ಕೆ ಜಿದ್ದು ಕಟ್ಟಿ ಗಬಗಬನೆ 41 ಮೊಟ್ಟೆ ತಿಂದ ಭೂಪ, ಆಮೇಲೆ ಏನಾಯ್ತು?

ಪ್ರತಿವರ್ಷವೂ ಈ ಸ್ಪರ್ಧೆಯೂ ಡಲ್ಲೆಸ್ ಡೇ ಹಬ್ಬದಂದು (Dulles Day Festival) ನಡೆಯುತ್ತದೆ. ಸಾವಿರಾರು ಜನರನ್ನು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಈ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಟಿಕೆಟ್‌ಗಳಿರುತ್ತವೆ. ಟಿಕೆಟ್‌ಗಳಿಂದ ಸಂಗ್ರಹವಾದ ಹಣ ಸೇರಿದಂತೆ ಈ ಸಮಾರಂಭದಲ್ಲಿ ಸಂಗ್ರಹವಾದ ಎಲ್ಲಾ ಹಣವನ್ನು ವರ್ಜಿನಿಯಾದ (Virginia) ವಿಶೇಷ ಒಲಿಂಪಿಕ್‌ಗೆ ದೇಣಿಗೆ ನೀಡಲಾಗುತ್ತದೆ. ಈ ವಿಶೇಷ ಒಲಿಂಪಿಂಕ್ ಸಂಸ್ಥೆ ರಾಜ್ಯದ 22,000 ಕ್ಕೂ ಹೆಚ್ಚು ವಿಶೇಷ ಸಾಮರ್ಥ್ಯವುಳ್ಳ ಕ್ರೀಡಾಪಟುಗಳಿಗೆ ವರ್ಷಪೂರ್ತಿ ಕ್ರೀಡಾ ತರಬೇತಿಯನ್ನು ನೀಡುತ್ತದೆ. ಹಾಗೆಯೇ ಈ ವರ್ಷವೂ ಸೆಪ್ಟೆಂಬರ್ 17 ರಂದು ಈ ವಿಮಾನ ಎಳೆಯುವ ಸ್ಪರ್ಧೆ ನಡೆಯಿತು. ಡಲ್ಲೆಸ್ ಪ್ಲೇನ್ ಪುಲ್ ವೆಬ್‌ಸೈಟ್ ಪ್ರಕಾರ, ವರ್ಜಿನಿಯಾದ ವಿಶೇಷ ಒಲಿಂಪಿಕ್‌ಗಾಗಿ ಈ ಬಾರಿ 440,000 ಲಕ್ಷ ಡಾಲರ್ ಅಂದರೆ ಅಂದಾಜು Rs 35,000,000 ರೂಪಾಯಿ ನಿಧಿ ಸ್ಪರ್ಧೆಯಲ್ಲಿ ಸಂಗ್ರಹವಾಗಿದೆ. 

ಆಕೆ ಸತ್ತಿಲ್ಲ, ಶವಪೆಟ್ಟಿಗೆಯಿಂದ ರಾಣಿ ಎಲಿಜಬೆತ್ ಏಳಿಸಲು ಹೊರಟವ ಅಂದರ್

ಈ ಸ್ಪರ್ಧೆಯ ಭಾಗವಾಗಿ ವಿವಿಧ ತಂಡಗಳು 82 ಟನ್ ತೂಕದ ಫಿಡೆಕ್ಸ್ ಏರ್‌ಬಸ್ A320 (FedEx Airbus A320) ವಿಮಾನ ಹಾಗೂ ಯುನೈಟೆಡ್ ಬೋಯಿಂಗ್ 757 ಹೆಸರಿನ ವಿಮಾನವನ್ನು ಹಗ್ಗ ಕಟ್ಟಿ ಎಳೆದರು. ಈ ಸ್ಪರ್ಧೆಯಲ್ಲಿ ಹೆಲಿಕ್ಸ್ ಇಲೆಕ್ಟ್ರಿಕ್‌ (Helix Electric) ತಂಡವು ವಿಜಯಶಾಲಿಯಾಗಿದೆ. ಈ ತಂಡ ಯುನೈಟೆಡ್ ಬೋಯಿಂಗ್  757 (United Boeing 757) ವಿಮಾನವನ್ನು 5 ನಿಮಿಷ 65 ಸೆಕೆಂಡ್‌ಗಳ ಅವಧಿಯಲ್ಲಿ ಎಳೆದು ನಿಗದಿತ ಗುರಿ ತಲುಪಿತು. ಹಾಗೆಯೇ ಚೆಸಾಪೀಕ್ ಶೆರಿಫ್ (Chesapeake Sheriff’s Office) ಕಚೇರಿಯೂ ಫಿಡೆಕ್ಸ್ ಏರ್‌ಬಸ್‌ನ್ನು 5.6 ನಿಮಿಷದಲ್ಲಿ ಎಳೆದು ವಿಜಯಶಾಲಿಯಾಯಿತು. ಈ ಡಲ್ಲೆಸ್ ವಿಮಾನ ಎಳೆಯುವ ಸ್ಪರ್ಧೆಯೂ ಜಗತ್ತಿನ ವಿವಿಧೆಡೆ ನಿಧಿ ಸಂಗ್ರಹಿಸಲು ಇದೇ ರೀತಿಯ ವಿಮಾನ ಎಳೆಯುವ ಸ್ಪರ್ಧೆಗೆ ಸ್ಪೂರ್ತಿಯಾಗಿದೆ.
 

Follow Us:
Download App:
  • android
  • ios