ತನ್ನ ಪಾಪಗಳನ್ನು ಮುಚ್ಚಿಕೊಂಡು ಹೇಳಿಕೆ ನೀಡೋದನ್ನ ಪಾಕ್‌ ನಿಲ್ಲಿಸಲಿ: ವಿಶ್ವಸಂಸ್ಥೆಯಲ್ಲಿ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ವಿಶ್ವಸಂಸ್ಥೆಯಲ್ಲಿ ತಮ್ಮ ಭಾಷಣದ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಪ್‌ ತನ್ನ ನೆಲದ ಪರಿಸ್ಥಿತಿ ಕುರಿತಾಗಿ ಮಾತನಾಡುವುದನ್ನು ಬಿಟ್ಟು ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಭಾಷಣದಲ್ಲಿ 10 ಬಾರಿ ಕಾಶ್ಮೀರದ ಹೆಸರನ್ನು ಷರೀಫ್‌, 9 ಬಾರಿ ಭಾರತದ ಹೆಸರನ್ನು ತೆಗೆದುಕೊಂಡಿದ್ದಾರೆ.
 

Respond to PAK on 370 in UN India says gave a statement against us to hide its misdeeds san

ನ್ಯೂಯಾರ್ಕ್‌ (ಸೆ.24): ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ವಿಶ್ವಸಂಸ್ಥೆ ಸಾಮಾನ್ಯ ಸಭೆಯ 77ನೇ ಮಹಾಅಧಿವೇಶನದಲ್ಲಿ ಮಾತನಾಡಿದರು. ಈ ವೇಳೆ ಮತ್ತೊಮ್ಮೆ ಕಾಶ್ಮೀರದ ವಿಚಾರವಾಗಿ ಅವರು ಮಾತನಾಡಿದ್ದಾರೆ. ಕಾಶ್ಮೀರ ವಿಚಾರ ಮಾತ್ರವಲ್ಲದೆ, ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿದ 370ನೇ ವಿಧಿಯ ಬಗ್ಗೆಯೂ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ತಾವು ಶಾಂತಿ ಹಾಗೂ ಉತ್ತಮ ನಡವಳಿಕೆಯನ್ನು ಬಯಸುತ್ತಿರುವುದಾಗಿ ಹೇಳಿದರು.  ಈ ಶಾಂತಿಯು,  ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ನ್ಯಾಯ ಹಾಗೂ ಶಾಶ್ವತ ಪರಿಹಾರವನ್ನು ಅವಲಂಬಿಸಿರುತ್ತದೆ. ಇಲ್ಲಿ ಅವರು ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಪಡಿಸಿದ 370ನೇ ವಿಧಿಯ ಬಗ್ಗೆ ಮಾತನಾಡಿದ್ದರು. ಆದರೆ, ಪಾಕಿಸ್ತಾನದ ಪ್ರಧಾನಿಯ ಮಾತಿಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಪ್ರಧಾನಿ ತಮ್ಮ ಭಾಷಣದಲ್ಲಿ 10 ಬಾರಿ ಕಾಶ್ಮೀರ ಎನ್ನುವ ಶಬ್ದವನ್ನು ಪ್ರಸ್ತಾಪ ಮಾಡಿದರೆ 9 ಬಾರಿ ಭಾರತದ ಹೆಸರನ್ನು ಪ್ರಸ್ತಾಪಿಸಿದರು. ಪಾಕ್‌ ಪ್ರಧಾನಿಯ ಮಾತಿಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಮಿಷನ್‌ನ ಮೊದಲ ಕಾರ್ಯದರ್ಶಿ ಮಿಜಿತೋ ವಿನಿಟೋ ಅವರು ಖಡಕ್‌ ಉತ್ತರ ನೀಡಿದ್ದು, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ತಲೆ ಕೆಡಿಸಿಕೊಳ್ಳುವ ಬದಲು, ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಹೇಳಿದ್ದಾರೆ. ತಮ್ಮ ಪಾಪಗಳನ್ನು ಮುಚ್ಚಿಕೊಳ್ಳಲು ಅವರು ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು.

370ನೇ ವಿಧಿ ರದ್ದತಿ ಬಗ್ಗೆ ಪಾಕ್‌ ಪ್ರಧಾನಿ ಹೇಳಿದ್ದೇನು: ಅವರ ಭಾಷಣದ ಸಮಯದಲ್ಲಿ, ಪಾಕಿಸ್ತಾನಿ ಪಿಎಂ ಶೆಹಬಾಜ್ ಅವರು ಒಮ್ಮೆಯೂ 'ಆರ್ಟಿಕಲ್ 370' ಎಂದು ಹೇಳಲಿಲ್ಲ, ಆದರೆ ಅವರ ಇಂಗಿತವು ಈ ದಿಕ್ಕಿನಲ್ಲಿತ್ತು. ಕಾಶ್ಮೀರವನ್ನು ಸುದೀರ್ಘ ವಿವಾದ ಎಂದು ಕರೆದ ಶಹಬಾಜ್ ಷರೀಫ್ (Jammu And Kashmir), ಭಾರತವು 2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಬದಲಾಯಿಸಲು ಏಕಪಕ್ಷೀಯ ಹೆಜ್ಜೆಯನ್ನು ತೆಗೆದುಕೊಂಡಿತು. ಭಾರತದ ನಿರ್ಧಾರವು ಪರಿಹಾರವನ್ನು ಹೆಚ್ಚು ಕಷ್ಟಕರವಾಗಿಸಿದೆ. ಜಮ್ಮು-ಕಾಶ್ಮೀರವನ್ನು ಹಿಂದೂ ಪ್ರದೇಶವನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇಲ್ಲಿ ಭಾರತದ ನಿರ್ಧಾರದಿಂದ ಅವರು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವುದನ್ನು ಅರ್ಥೈಸಿದರು.

ಯುದ್ಧ ಎನ್ನುವುದು ಆಯ್ಕೆಯಲ್ಲ: ಎರಡೂ ದೇಶಗಳ ಶಾಂತಿಗಾಗಿ (Peace) ಭಾರತವು (India) ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳಬೇಕು. 1947 ರಿಂದ ಎರಡು ದೇಶಗಳ ನಡುವೆ 3 ಯುದ್ಧಗಳು ನಡೆದಿವೆ. ಇದು ಎರಡೂ ಕಡೆಗಳಲ್ಲಿ ದುಃಖ, ಬಡತನ ಮತ್ತು ನಿರುದ್ಯೋಗವನ್ನು ಹೆಚ್ಚಿಸಿದೆ. ಈಗ ನಮ್ಮ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಮತ್ತು ನಮ್ಮ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆ ಮತ್ತು ಚರ್ಚೆಯ ಮೂಲಕ ಪರಿಹರಿಸಿಕೊಳ್ಳುವುದು ನಮಗೆ ಬಿಟ್ಟದ್ದು. ಎರಡೂ ದೇಶಗಳು ಪರಸ್ಪರ ಸಂಪರ್ಕ ಹೊಂದಿವೆ ಎಂಬ ಸಂದೇಶವನ್ನು ಭಾರತ ಅರ್ಥಮಾಡಿಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಯುದ್ಧವು ಒಂದು ಆಯ್ಕೆಯಲ್ಲ, ಶಾಂತಿಯುತ ಮಾತುಕತೆಯ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಬಹುದು, ಇದರಿಂದ ಮುಂದಿನ ದಿನಗಳಲ್ಲಿ ಜಗತ್ತು ಹೆಚ್ಚು ಶಾಂತಿಯುತವಾಗಿರುತ್ತದೆ ಎಂದರು.

ದುಡ್ಡಿಲ್ಲ, ತೈಲವೂ ಇಲ್ಲ..ಇಂಧನ ಉಳಿಸೋಕೆ ಉದ್ಯೋಗಿಗಳಿಗೆ ರಜೆ ನೀಡಲಿರುವ ಪಾಕಿಸ್ತಾನ!

ಭಾರತದ ತೀಕ್ಷ್ಣ ಪ್ರತಿಕ್ರಿಯೆ: ಭಯೋತ್ಪಾದನೆಯನ್ನು (terrorism) ನಿಲ್ಲಿಸಲು ನೆರೆಹೊರೆಯವರೊಂದಿಗೆ ಶಾಂತಿ ಕೋರುವ ಪಾಕಿಸ್ತಾನದ ಷರೀಫ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿನಿಟೋ, ತನ್ನ ನೆರೆಹೊರೆಯವರೊಂದಿಗೆ ಶಾಂತಿಯನ್ನು ಬಯಸುವ ದೇಶವು ಎಂದಿಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಆಶ್ರಯ ನೀಡುವುದಿಲ್ಲ ಎಂದರು. ಇದು ಅತ್ಯಂತ ವಿಷಾದನೀಯವಾಗಿದೆ ಭಾರತದ ವಿರುದ್ಧ ಸುಳ್ಳು ಆರೋಪ ಮಾಡಲು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ (Shahbaz Sharif) ಈ ವೇದಿಕೆಯನ್ನು ಆರಿಸಿಕೊಂಡಿದ್ದಾರೆ.

14 ಕೋಟಿ ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್!

ಅದರೊಂದಿಗೆ ಪಾಕಿಸ್ತಾನದಲ್ಲಿನ ಪ್ರವಾಹದ ಬಗ್ಗೆಯೂ ಭಾರತ ಪ್ರಸ್ತಾಪಿಸಿದೆ. ಭೀಕರ ಪ್ರವಾಹದಿಂದ (Floods) 1500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಇವರಲ್ಲಿ 400ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಲಕ್ಷಾಂತರ ಜನರು ರೋಗಗಳು ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಸುಮಾರು 80 ಲಕ್ಷ ಜನರು ಈ ದುರಂತದಿಂದ ಸಂತ್ರಸ್ತರಾಗಿದ್ದಾರೆ. ಪ್ರವಾಹ ಬಿಕ್ಕಟ್ಟನ್ನು ಎದುರಿಸಲು ಅವರು ಇತರ ದೇಶಗಳಿಂದ ಆರ್ಥಿಕ ಸಹಾಯವನ್ನು ಕೋರಿದ್ದಾರೆ ಎಂದರು. ಈ ವಿಚಾರವಾಗಿ ಪಾಕಿಸ್ತಾನ ಹೆಚ್ಚಿನ ಗಮನ ನೀಡಬೇಕು ಎಂದು ಭಾರತ ಪ್ರತಿಕ್ರಿಯಿಸಿದೆ.

Latest Videos
Follow Us:
Download App:
  • android
  • ios