ದುಡ್ಡಿಲ್ಲ, ತೈಲವೂ ಇಲ್ಲ..ಇಂಧನ ಉಳಿಸೋಕೆ ಉದ್ಯೋಗಿಗಳಿಗೆ ರಜೆ ನೀಡಲಿರುವ ಪಾಕಿಸ್ತಾನ!

ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾದ ದಿನದ ಆರಂಭದಲ್ಲಿ ದೇಶದ ಆರ್ಥಿಕ ಪರಿಸ್ಥಿಗಳು ಹೆಚ್ಚಾಗಿ ಗೋಚರವಾಗಿರಲಿಲ್ಲ. ಆದರೆ, ದಿನಕಳೆದಂತೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಜಗತ್ತಿನ ಅರಿವಿಗೆ ಬರುತ್ತಿದೆ. ಪಾಕಿಸ್ತಾನ ಸರ್ಕಾರವು ತೀವ್ರ ರೂಪದಲ್ಲಿ ನಗದು ಹಣದ ಸಮಸ್ಯೆ ಎದುರಿಸುತ್ತಿದೆ.

No cash no fuel Pakistan in trouble may plan to give more holidays to employees to save oil san

ಕರಾಚಿ (ಮೇ. 24): ಪಾಕಿಸ್ತಾನದಲ್ಲಿ ( pakistan ) ಸರ್ಕಾರ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರ (pakistan government) ಇದೀಗ ತೈಲ ಉಳಿತಾಯಕ್ಕೆ ( Save Fuel ) ಹೊಸ ದಾರಿ ಕಂಡುಕೊಂಡಿದೆ. ಇಂಧನ ಉಳಿಸಲು ಕೆಲಸದ ದಿನಗಳನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಪಾಕಿಸ್ತಾನ ಸರ್ಕಾರ ಪರಿಶೀಲಿಸುತ್ತಿದೆ. ಹಾಗೆ ಮಾಡುವುದರಿಂದ $ 2.7 ಬಿಲಿಯನ್ (ವಾರ್ಷಿಕ) ವಿದೇಶಿ ವಿನಿಮಯವನ್ನು (foreign exchange) ಉಳಿಸಬಹುದು ಎನ್ನುವ ಯೋಜನೆಯನ್ನು ರೂಪಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (State Bank Of pakistan) ಮೂರು ಸಾಧ್ಯತೆಗಳ ಬಗ್ಗೆ ಯೋಚನೆ ನಡೆಸುತ್ತಿದೆ. ಹೀಗೆ ಮಾಡುವುದರಿಂದ  1.5 ಶತಕೋಟಿ ಅಮೆರಿಕನ್ ಡಾಲರ್ ನಿಂದ 2.7 ಶತಕೋಟಿ ಅಮೆರಿಕನ್ ಡಾಲರ್ ವಿದೇಶಿ ವಿನಿಮಯವನ್ನು ಉಳಿಸಬಹುದು ಎಂದು ಹೇಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ (ಜುಲೈನಿಂದ ಏಪ್ರಿಲ್‌ವರೆಗೆ) ಪಾಕಿಸ್ತಾನದ ತೈಲ ಆಮದು 17 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಾಗಿದೆ. ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.96 ರಷ್ಟು ಹೆಚ್ಚಳವಾಗಿದೆ.
ಈಗ ಮಾಡಿರುವ ಅಂದಾಜಿನ ಪ್ರಕಾರ, ಪ್ರತಿ ವಾರ ಒಂದು ಕೆಲಸದ ದಿನವು ಪಾಕಿಸ್ತಾನದ ಮೇಲೆ 642 ಮಿಲಿಯನ್ ಯುಎಸ್ ಡಾಲರ್ ಹೊರೆಯನ್ನು ಹಾಕುತ್ತದೆ. ಇದರಲ್ಲಿ ಸರಕು ಮತ್ತು ಸಾರಿಗೆಯನ್ನು ( freight and transportation ) ಒಳಗೊಂಡ ತೈಲ ಬಳಕೆಯನ್ನು ಒಳಗೊಂಡಿಲ್ಲ.

ಇಂಧನ ಉಳಿಸಲು ಲಾಕ್ ಡೌನ್: ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮಾಡಿರುವ ಮೊದಲ ಯೋಜನೆಯ ಪ್ರಕಾರ, ಕೆಲಸದ ದಿನಗಳನ್ನು ನಾಲ್ಕಕ್ಕೆ ಇಳಿಸಿ ಮೂರು ದಿನ ರಜೆ ನೀಡಬೇಕು ಎಂದು ಹೇಳಲಾಗುತ್ತಿದೆ. ಈ ರೀತಿ ಮಾಡುವುದರಿಂದ ಒಂದು ತಿಂಗಳಲ್ಲಿ 122 ಮಿಲಿಯನ್ ಡಾಲರ್  ಉಳಿಸಬಹುದು. ಇದು ವಾರ್ಷಿಕವಾಗಿ $ 1.5 ಬಿಲಿಯನ್ ಡಾಲರ್ ಉಳಿತಾಯವಾಗಿರುತ್ತದೆ. 2ನೇ ಯೋಜನೆ ಪ್ರಕಾರ, ವಾರದಲ್ಲಿ ನಾಲ್ಕು ಕೆಲಸದ ದಿನಗಳನ್ನು ಇಟ್ಟು ಎರಡು ರಜಾ ದಿನಗಳನ್ನು ನೀಡುವುದಾಗಿದ್ದರೆ, ಒಂದು ದಿನವನ್ನು ಲಾಕ್ ಡೌನ್ (Lock Down) ಮಾಡುವ ಯೋಜನೆಯಾಗಿದೆ. ಈ ಮೂಲಕ ತಿಂಗಳಿಗೆ 175 ಮಿಲಿಯನ್ ಡಾಲರ್ ಮತ್ತು ವರ್ಷದಲ್ಲಿ 2.1 ಬಿಲಿಯನ್ ಡಾಲರ್ ಉಳಿತಾಯ ಮಾಡಬಹುದು ಎಂದು ಹೇಳಲಾಗಿದೆ.

ಮೂರನೇ ಯೋಜನೆ ಪ್ರಕಾರ, ವಾರದಲ್ಲಿ ನಾಲ್ಕು ಕೆಲಸದ ದಿನಗಳು, ಒಂದು ರಜೆ ಮತ್ತು ಎರಡು ದಿನಗಳ ಲಾಕ್‌ಡೌನ್ (ವಾಣಿಜ್ಯ ಚಟುವಟಿಕೆ ಸಹಿತ ಕ್ಲೋಸ್) ಎಂದು ಹೇಳಲಾಗಿದೆ. ಇದು ತಿಂಗಳಿಗೆ 230 ಮಿಲಿಯನ್ ಡಾಲರ್ ಮತ್ತು ಪೆಟ್ರೋಲಿಯಂ-ಸಂಬಂಧಿತ ಆಮದು ಬಿಲ್‌ನಲ್ಲಿ ವಾರ್ಷಿಕವಾಗಿ 2.7 ಶತಕೋಟಿ ಡಾಲರ್ ಅನ್ನು ಉಳಿಸುತ್ತದೆ.

ಪೆಟ್ರೋಲ್‌ ದರ ಇಳಿಕೆ, ಪಾಕ್‌ನಿಂದಲೂ ಶ್ಲಾಘನೆ, ಮೋದಿ ಸ್ಟ್ರಾಟಜಿ ಬೇರೆನೇ..!

ವಿದ್ಯುತ್ ಉಳಿತಾಯ ( save electricity ) ಮಾಡುವಂತೆ ಇಂಧನ ಇಲಾಖೆಯೂ ( Energy Department ) ಸೂಚನೆ ನೀಡಿದೆ. ಕೆಲಸದ ದಿನಗಳನ್ನು ಕಡಿಮೆ ಮಾಡಿ ಹಗಲಿನಲ್ಲಿ ಮಾತ್ರ ವಾಣಿಜ್ಯ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡುವಂತೆ ಇಂಧನ ಇಲಾಖೆ ವತಿಯಿಂದ ಹೊಸ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಇದರಿಂದ ವಿದ್ಯುತ್ ಕೂಡ ಉಳಿತಾಯವಾಗುತ್ತದೆ.

ರೈಲ್ವೆ ಹಳಿಗಳನ್ನು ಸ್ಪೋಟಿಸಲು ಪಾಕ್ ಸಂಚು, ಗುಪ್ತಚರ ವಿಭಾಗದ ಎಚ್ಚರಿಕೆ!

ಕಳೆದ ವಾರ ಪಾಕಿಸ್ತಾನದಲ್ಲಿ ವಿದೇಶಿ ವಿನಿಮಯ ಉಳಿಸಲು 38 ವಿದೇಶಿ ವಸ್ತುಗಳನ್ನು ನಿಷೇಧಿಸಲಾಗಿತ್ತು. ಇದರಲ್ಲಿ ವಿದೇಶಿ ಮೊಬೈಲ್ ಫೋನ್, ಪಾಸ್ತಾ, ಜಾಮ್ ಇತ್ಯಾದಿಗಳ ಆಮದು ಐಷಾರಾಮಿ ಉತ್ಪನ್ನಗಳೆಂದು ಹೇಳುವ ಮೂಲಕ ನಿಷೇಧ ಮಾಡಲಾಗಿದೆ.

Latest Videos
Follow Us:
Download App:
  • android
  • ios