ಹಿಂದು ಅನ್ನೋದು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಎಂದಿರುವ ಅಮೆರಿಕಾದ ಜಾರ್ಜಿಯಾ ರಾಜ್ಯ, ಹಿಂದುಫೋಬಿಯಾ ವಿರುದ್ಧ ನಿರ್ಣಯ ಮಂಡಿಸಿದೆ. ಆ ಮೂಲಕ ಹಿಂದುಫೋಬಿಯಾ ವಿರುದ್ಧ ನಿರ್ಣಯ ಮಂಡಿಸಿದ ಅಮೆರಿಕದ ಮೊದಲ ರಾಜ್ಯ ಎನಿಸಿದೆ.
ನವದೆಹಲಿ (ಏ.1): ಹಿಂದುಫೋಬಿಯಾ ಎನ್ನುವ ಪದಕಬಳಕೆಯನ್ನು ಖಂಡಿಸಿ ಹಾಗೂ ಅದರ ವಿರುದ್ಧ ಅಮೆರಿಕದ ಜಾರ್ಜಿಯಾ ರಾಜ್ಯ ನಿರ್ಣಯವನ್ನು ಮಂಡಿಸಿದೆ. ಆ ಮೂಲಕ ಹಿಂದುಫೋಬಿಯಾ ವಿರುದ್ಧ ಹಾಗೂ ಹಿಂದು ವಿರೋಧಿಗಳ ವಿರುದ್ಧ ನಿರ್ಣಯ ಮಂಡಿಸಿದ ಅಮೆರಿಕದ ಮೊದಲ ರಾಜ್ಯವಾಗಿ ಜಾರ್ಜಿಯಾ ಗುರುತಿಸಿಕೊಂಡಿದೆ. ಹಿಂದೂ ಧರ್ಮವು ವಿಶ್ವದ ಅತಿದೊಡ್ಡ ಮತ್ತು ಹಳೆಯ ಧರ್ಮಗಳಲ್ಲಿ ಒಂದಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಜಗತ್ತಿನ 100ಕ್ಕೂ ಹೆಚ್ಚು ದೇಶಗಳಲ್ಲಿ ಇಂದು ಹಿಂದು ಧರ್ಮವಿದೆ. ವಿಶ್ವದಲ್ಲಿಯೇ 100 ಕೋಟಿಗೂ ಅಧಿಕ ಜನ ಹಿಂದು ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ. ಹಿಂದೂ ಧರ್ಮವು ಸ್ವೀಕಾರ, ಪರಸ್ಪರ ಗೌರವ ಮತ್ತು ವೈವಿಧ್ಯಮಯ ಸಂಪ್ರದಾಯಗಳ ಸಂಶ್ಲೇಷಣೆಯಾಗಿದೆ ಎಂದು ಜಾರ್ಜಿಯಾ ರಾಜ್ಯ ತನ್ನ ನಿರ್ಣಯದಲ್ಲಿ ಹೇಳಿದೆ. ಜಾರ್ಜಿಯಾ ಹಿಂದೂಫೋಬಿಯಾ ಕುರಿತು ನಿರ್ಣಯವನ್ನು ಅಂಗೀಕರಿಸಿದ ಮೊದಲ ಅಮೆರಿಕದ ರಾಜ್ಯವಾಗಿದೆ. ಜಾರ್ಜಿಯಾದ ಅತಿದೊಡ್ಡ ಹಿಂದೂ ಮತ್ತು ಭಾರತೀಯ-ಅಮೆರಿಕನ್ ಸಮುದಾಯಗಳಲ್ಲಿ ಒಂದಾದ ಅಟ್ಲಾಂಟಾದ ಉಪನಗರದಲ್ಲಿರುವ ಫಾರ್ಸಿತ್ ಕೌಂಟಿಯ ಪ್ರತಿನಿಧಿಗಳಾದ ಲಾರೆನ್ ಮೆಕ್‌ಡೊನಾಲ್ಡ್ ಮತ್ತು ಟಾಡ್ ಜೋನ್ಸ್ ಈ ನಿರ್ಣಯವನ್ನು ಮಂಡಿಸಿದ್ದಾರೆ.
ನಿರ್ಣಯದಲ್ಲಿ ಇರೋದೇನು: ಆರೋಗ್ಯ, ವಿಜ್ಞಾನ, ಎಂಜಿನಿಯರಿಂಗ್, ಐಟಿ, ಹಣಕಾಸು, ಶಿಕ್ಷಣ, ಇಂಧನ, ವ್ಯಾಪಾರ ಮತ್ತು ಎಂಜಿನಿಯರಿಂಗ್‌ನಂತಹ ವಿವಿಧ ಕ್ಷೇತ್ರಗಳಲ್ಲಿ ಅಮೆರಿಕನ್-ಹಿಂದೂ ಸಮುದಾಯವು ಪ್ರಮುಖ ಕೊಡುಗೆ ನೀಡಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಜೊತೆಗೆ ಸಮುದಾಯದ ಜನರು ಯೋಗ, ಆಯುರ್ವೇದ, ಧ್ಯಾನ, ಆಹಾರ, ಸಂಗೀತ, ಕಲೆ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಅಮೇರಿಕನ್ ಸಮಾಜದಲ್ಲಿ ವ್ಯಾಪಕವಾಗಿ ಅಳವಡಿಸಿಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರ ಜೀವನದಲ್ಲಿ ಸುಖ ಸಂತೋಷಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದೆ.
ಹಿಂದು ಧರ್ಮದ ರಕ್ಷಕನೆಂದು ಹೇಳಿಕೊಂಡು ದೇವಾಲಯದ ಭೂಮಿ ಕಬಳಿಸಿದ ಬಿಜೆಪಿ ಶಾಸಕ: ಪ್ರತಿಭಟನೆ
ಹಿಂದೂ-ಅಮೆರಿಕನ್ನರ ವಿರುದ್ಧ ಅಪರಾಧಗಳು ಹೆಚ್ಚುತ್ತಿವೆ: ಕಳೆದ ಕೆಲವು ದಶಕಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಹಿಂದೂ-ಅಮೆರಿಕನ್ನರ ವಿರುದ್ಧ ದ್ವೇಷದ ಅಪರಾಧಗಳ ಪ್ರಕರಣಗಳು ದಾಖಲಾಗಿವೆ ಎಂದು ನಿರ್ಣಯವು ಹೇಳಿದೆ. ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡಲು ಪ್ರತಿಪಾದಿಸುವ ಮತ್ತು ಅದರ ಪವಿತ್ರ ಗ್ರಂಥಗಳನ್ನು ದೂಷಿಸುವ ಕೆಲವು ಶಿಕ್ಷಣ ತಜ್ಞರು ಹಿಂದೂಫೋಬಿಯಾವನ್ನು ಬಳಕೆ ಮಾಡಿದ್ದಾರೆ. ಮೂಲದಲ್ಲಿ ಈ ಪದವೇ ಇಲ್ಲ ಎಂದು ಹೇಳಿದೆ.
'ಹಿಂದು ದೇವರ ಕಥೆಗಳನ್ನು ಓದಿ ಅನುಮಾನ ಬಂದವು..' ಧರ್ಮದ ಬಗ್ಗೆ ರಾಜಮೌಳಿ ಮಾತು!
ಈ ನಡುವೆ ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ (CoHNA) ಮಾರ್ಚ್ 22 ರಂದು ಜಾರ್ಜಿಯಾದಲ್ಲಿ ಹಿಂದೂ ವಕೀಲರ ದಿನವನ್ನು ಆಯೋಜನೆ ಮಾಡಿದೆ. ಇದರಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಎರಡೂ ಪಕ್ಷಗಳ ಸುಮಾರು 25 ಶಾಸಕರು ಭಾಗವಹಿಸಿದ್ದರು. ಏತನ್ಮಧ್ಯೆ, CoHNA ಉಪಾಧ್ಯಕ್ಷ ರಾಜೀವ್ ಮೆನನ್ ಅವರು ಮ್ಯಾಕ್‌ಡೊನಾಲ್ಡ್ ಮತ್ತು ಜೋನ್ಸ್‌ರೊಂದಿಗೆ ಕೆಲಸ ಮಾಡುವುದು ನಿಜವಾದ ಗೌರವ ಎಂದು ಹೇಳಿದ್ದರು.
