ಹಿಂದೂ ಧರ್ಮದ ರಕ್ಷಕರೆಂದು ಮತ ಪಡೆದು ಚುನಾಯಿತರಾದ ಅಶೋಕ್‌ನಾಯ್‌್ ಅವರು ತನ್ನ ಅಕ್ಷರ ವಿದ್ಯಾಸಂಸ್ಥೆಗೆ ಸರ್ವೇ ನಂ.9ರಲ್ಲಿ 1 ಎಕರೆ 20 ಗುಂಟೆ ಜಾಗವನ್ನು ಕಬಳಿಸಿದ್ದಲ್ಲದೆ ಸ್ಥಳದಲ್ಲಿದ್ದ ಹಿಂದೂ ಧರ್ಮದ ಮಾರಮ್ಮ, ಚೌಡಮ್ಮ ಮತ್ತು ಭೂತಪ್ಪನ ಕಲ್ಲುಗಳನ್ನು ಕಿತ್ತು ಬಿಸಾಕಿದ್ದಾರೆ.

ಶಿವಮೊಗ್ಗ (ಮಾ.13) : ಗ್ರಾಮಾಂತರ ಬಿಜೆಪಿ ಶಾಸಕ ಕೆ.ಬಿ.ಅಶೋಕ್‌ ನಾಯ್ಕ್(KB Ashok kumar naik MLA) ದೇವಸ್ಥಾನ ಹಾಗೂ ಕೆರೆ ಒತ್ತುವರಿ ಮಾಡಿದ್ದು, ಈ ಕ್ರಮ ಖಂಡಿಸಿ, ಕತ್ತಲಘಟ್ಟಚೌಡೇಶ್ವರಿ ಹಾಗೂ ಭೂತೇಶ್ವರಸ್ವಾಮಿ ಹಿಂದೂ ಧಾರ್ಮಿಕ ರಕ್ಷಣಾ ವೇದಿಕೆಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚನ್ನಮುಂಬಾಪುರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ವೇದಿಕೆಯ ಸದಸ್ಯರು ಮತ್ತು ಕಾಂಗ್ರೆಸ್‌ ಮುಖಂಡರು ಅಶೋಕ್‌ ನಾಯ್‌್ಕ ಪ್ರತಿಕೃತಿಯನ್ನು ಮಹಾವೀರ ಸರ್ಕಲ್‌ನಲ್ಲಿ ದಹಿಸಿ ಅವರ ವಿರುದ್ಧ ಘೋಷಣೆ ಕೂಗಿದರು.

ಪಿಎ​ಸ್‌ಐ ಹಗ​ರ​ಣ​ದಿಂದ ಪೊಲೀಸ್‌ ಹುದ್ದೆ​ಗಳು ಭರ್ತಿ​ಯಾ​ಗಿ​ಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಮುಖಂಡ ಜಗದೀಶ್‌ ಮಾತನಾಡಿ, ಹಿಂದೂ ಧರ್ಮದ ರಕ್ಷಕರೆಂದು ಮತ ಪಡೆದು ಚುನಾಯಿತರಾದ ಅಶೋಕ್‌ನಾಯ್‌್ಕ ಅವರು ತನ್ನ ಅಕ್ಷರ ವಿದ್ಯಾಸಂಸ್ಥೆಗೆ ಸರ್ವೇ ನಂ.9ರಲ್ಲಿ 1 ಎಕರೆ 20 ಗುಂಟೆ ಜಾಗವನ್ನು ಕಬಳಿಸಿದ್ದಲ್ಲದೆ ಸ್ಥಳದಲ್ಲಿದ್ದ ಹಿಂದೂ ಧರ್ಮದ ಮಾರಮ್ಮ, ಚೌಡಮ್ಮ ಮತ್ತು ಭೂತಪ್ಪನ ಕಲ್ಲುಗಳನ್ನು ಕಿತ್ತು ಬಿಸಾಕಿದ್ದಾರೆ. ಪರಿಶಿಷ್ಟರ ನಿಧಿಯಿಂದ ಕೆರೆ ಅಭಿವೃದ್ಧಿಗೆ ಹಣ ಮಂಜೂರು ಮಾಡಿಸಿ ಬಫರ್‌ ಝೋನ್‌ನಲ್ಲಿ ಕಾಮಗಾರಿ ನಡೆಸಿದ್ದಾರೆ. ಅವರಿಗೆ ಏನಾದರೂ ನಿಜವಾಗಿ ಹಿಂದೂ ಧರ್ಮದ ಮೇಲೆ ಭಯ, ಭಕ್ತಿ ಇದ್ದರೆ ಕೂಡಲೆ ಗ್ರಾಮಾಂತರ ಜನತೆಯ ಕ್ಷಮೆ ಕೇಳಬೇಕು ಹಾಗೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡು ಸ್ಥಳದಲ್ಲೇ ದೇವಸ್ಥಾನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಗಿರೀಶ್‌ ಮಾತನಾಡಿ, ಚೌಡೇಶ್ವರಿ ಮತ್ತು ಭೂತೇಶ್ವರ ದೇವಸ್ಥಾನವನ್ನು ನಾಶ ಮಾಡಿ ಕೆರೆಯನ್ನು ಸಂಪೂರ್ಣ ಕಬಳಿಸುವ ಹುನ್ನಾರ ನಡೆಸಿದ್ದು, ಇದನ್ನು ಪ್ರಶ್ನಿಸಿದ ಗ್ರಾಮಸ್ಥರು, ಭಕ್ತಾದಿಗಳಿಗೆ ಹಾಗೂ ಅರ್ಚಕರಿಗೆ ಶಾಸಕ ಅಶೋಕ್‌ ನಾಯ್ಕ ಹಾಗೂ ಅವರ ಚೇಲಾಗಳು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಳಂತೆ ವರ್ತಿಸಿ ಅರ್ಚಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ವಕೀಲ ಗೇಮು ನಾಯ್ಕ ಮಾತನಾಡಿ, ಬಿಜೆಪಿ ಹಿಂದೂ ಧರ್ಮ ಹಾಗೂ ಧಾರ್ಮಿಕತೆಯನ್ನು ರಕ್ಷಣೆ ಮಾಡುತ್ತೇವೆಂದು ಬೊಗಳೆ ಬಿಡುತ್ತಿದೆ. ಅವರದೇ ಪಕ್ಷದ ಶಾಸಕ ಹಿಂದೂ ಧರ್ಮಕ್ಕೆ ಧಕ್ಕೆ ಉಂಟು ಮಾಡುತ್ತಿದ್ದರೂ ಪಕ್ಷದವರು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ದೇವಸ್ಥಾನ ಧ್ವಂಸಗೊಳಿಸಿದ ಸ್ಥಳಕ್ಕೆ ತಹಸೀಲ್ದಾರ್‌ ಭೇಟಿ ನೀಡಿ ಪರಿಶೀಲಿಸಿದ್ದು, ಕೆರೆಯ ಜಾಗ ಒತ್ತುವರಿಯಾಗಿದೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ. ಈವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಧ್ವಂಸ ಮಾಡಿರುವ ದೇವಸ್ಥಾನವನ್ನು ಪುನರ್‌ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಪಲ್ಲವಿ, ರವಿಕುಮಾರ್‌, ಮತ್ತಿತರರು ಅಶೋಕ್‌ನಾಯ್‌್ಕ ಅವರ ವಿರುದ್ಧ ಅಣಕು ಶವಯಾತ್ರೆಯಲ್ಲಿ ಭಾಗವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಮೋದಿಯವರ ಆಡ​ಳಿತ ಮೆಚ್ಚಿ ವಿಶ್ವವೇ ಕೊಂಡಾಡುತ್ತಿದೆ: ಕುಮಾರ ಬಂಗಾರಪ್ಪ

ಜಗದೀಶ್‌, ಶಶಿಕುಮಾರ್‌, ರಾಘವೇಂದ್ರ ನಾಯ್ಕ, ಬೂದಿಗೆರೆ ಬಸವರಾಜ್‌, ಚಂದ್ರಮ್ಮ, ಶಾಂತಮ್ಮ, ಗ್ರಾ.ಪಂ. ಸದಸ್ಯ ಮಂಜು, ಗಿರೀಶ್‌, ಅರ್ಚಕ ಶೇಖರಪ್ಪ, ಎನ್‌.ರಮೇಶ್‌, ದೇವೇಂದ್ರಪ್ಪ, ವಿಜಯ್‌ಕುಮಾರ್‌, ಚೇತನ್‌, ಮಧುಸೂದನ್‌, ವೈ.ಎಚ್‌.ನಾಗರಾಜ್‌, ಜೆಡಿಎಸ್‌ನ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್‌ ಹಾಗೂ ಚನ್ನಮುಂಬಾಪುರದ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.