Asianet Suvarna News Asianet Suvarna News

40 ವರ್ಷದ ಕೊಂಡಿ ಕಳಚಿ ರಾಜೀನಾಮೆ ನೀಡಿದ್ದೇಕೆ ಚಾಕೋ? ಸಂದರ್ಶನದಲ್ಲಿ ಬಯಲಾಯ್ತು ಗುಟ್ಟು!

ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಿರಿಯ ನಾಯಕ ಚಾಕೋ| ನಲ್ವತ್ತು ವರ್ಷದ ಸಂಬಂಧ ಕಡಿದು ರಾಜೀನಾಮೆ ಕೊಟ್ಟಿದ್ದೇಕೆ ಹಿರಿಯ ನಾಯಕ| ಸಂದರ್ಶನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡ ನಾಯಕ

Requested Sonia and Rahul to intervene they did nothing PC Chacko Exclusive Interview pod
Author
Bangalore, First Published Mar 13, 2021, 4:01 PM IST

ತಿರುವನಂತಪುರಂ(ಮಾ.13): ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲೊಬ್ಬರಾದ ಪಿ. ಸಿ. ಚಾಕೋ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತ ಕೊಟ್ಟಿದೆ. ಹೀಗಿರುವಾಗಲೇ ಪಿ. ಸಿ. ಚಾಕಕೋರವರು ಏಷ್ಯಾನೆಟ್‌ ನ್ಯೂಸೇಬಲ್ ನೀಡಿರುವ ಸಂದರ್ಶನದಲ್ಲಿ ತಾವು ಕಾಂಗ್ರೆಸ್‌ ತೊರೆಯಲು ಕಾರಣವೇನು? ಪರಿಸ್ಥಿತಿ ಹೇಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಮನೆ ಮಾಡಿದ್ದಅಸಮಾಧಾನ ಹಾಗೂ ಕೆಲಸ ಮಾಡುವವರನ್ನು ನಿರ್ಲಕ್ಷಿಸುತ್ತಿದ್ದ ಬಗೆ. ಹೀಗಿದ್ದರೂ ತಲೆ ಕೆಡಿಸಿಕೊಳ್ಳದ ಹೈಕಮಾಂಡ್ ನಡೆ. ಸೋನಿಯಾ, ರಾಹುಲ್ ಭೇಟಿಯಾಗಿ ಪಕ್ಷದಲ್ಲಿನ ಸ್ಥಿತಿಯನ್ನು ಅರ್ಥೈಸಲು ಯತ್ನಿಸಿದರೂ ಪ್ರಯೋಜನವಾಗದಾಗ ಬೇರೆ ಉಪಾಯವಿಲ್ಲದೇ ತಾನು ಪಕ್ಷ ಬಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

* ನಲ್ವತ್ತು ವರ್ಷದಿಂದ ಒಡನಾಟ ಹೊಂದಿದ್ದ ಕಾಂಗ್ರೆಸ್‌ ಪಕ್ಷ ಬಿಡಲು ಪ್ರಮುಖ ಕಾರಣವೇನು? 

ಇದರ ಹಿಂದೆ ಹಲವಾರು ಕಾರಣಗಳಿವೆ. ಭಾವುಕತೆಯಿಂದ ತೆಗೆದುಕೊಂಡ ನಿರ್ಧಾರವಲ್ಲ, ಈ ಬಗ್ಗೆ ನಾನು ಕಳೆದ ಮೂರು ತಿಂಗಳಿನಿಂದ ಯೋಚಿಸುತ್ತಿದ್ದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಒಂದು ನಿರ್ದಿಷ್ಟ ಪ್ರಕ್ರಿಯೆ ಇದೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಮೂರು ಹಂತಗಳಲ್ಲಿ ಈ ಆಯ್ಕೆ ನಡೆಯುತ್ತದೆ. ಎಲ್ಲಕ್ಕಿಂತ ಮೊದಲು ಸೆಂಟ್ರಲ್ ಎಲೆಕ್ಷನ್ ಕಮಿಟಿ ಇರುತ್ತದೆ, ಇದರ ನಾಯಕತ್ವ ಸೋನಿಯಾ ಗಾಂಧಿ ವಹಿಸಿಕೊಂಡಿದ್ದಾರೆ. ಈ ಕಮಿಟಿ ಎಲ್ಲಾ ಅಂತಿಮ ನಿರ್ಧಾರ ತೆಗೆದುಕೊಳ್ಳುಉತ್ತದೆ. ಇದರ ಬಳಿಕ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದ ತರಬೇತಿ ಸಮಿತಿ ಇರುತ್ತದೆ. ಇದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಸಸೆಂಟ್ರಲ್ ಕಮಿಟಿಗೆ ಕಳುಹಿಸುತ್ತದೆ.. ಇದರ ಕೆಳಗೆ ಪ್ರಾದೇಶಿಕ ಎಲೆಕ್ಷನ್ ಕಮಿಟಿ ಇರುತ್ತದೆ. ಈ ಸಮಿತಿಯ ಸದಸ್ಯರು ಒಂದು ಅಥವಾ ಎರಡು ದಿನಗಳ ಸಭೆ ನಡೆಸಿ, ಯಾರಿಗೆ ಜಯ ಸಿಗಬಹುದು ಎಂಬ ಕುರಿತಾಗಿ ವಿಚಾರ ವಿಮರ್ಶೆ ನಡೆಸುತ್ತಾರೆ. ಈ ಸಭೆ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಯಾಕೆಂದರೆ ಇದು ಸೆಂಟ್ರಲ್ ಕಮಿಟಿ ನಡೆಸುವುದು ಅಸಾಧ್ಯ. ನಾನು ಇದೇ ವಿಚಾರವಾಗಿ ಒತ್ತು ನೀಡುತ್ತಿದ್ದೆ. ಹೀಗಿರುವಾಗ ಮೊದಲ ಸಭೆ ಅವಸರವಾಗೇ ನಡೆಯಿತು. ಈ ಸಭೆಯಲ್ಲಿ ಎರಡನೇ ಸಭೆ ಯಾವಾಗ ನಡೆಸುವುದೆಂದು ಬಿಟ್ಟರೆ ಬೇರೆ ಯಾವುದೇ ನಿರ್ಧಾರಗಳಾಗಲಿಲ್ಲ. ಎರಡನೇ ಸಭೆಯಲ್ಲಿಯೂ ಪಟ್ಟಿ ಈಗ ಸಿದ್ಧಗೊಳಿಸಲು ಸಾಧ್ಯವಿಲ್ಲ ಎನ್ನಲಾಯಿತು. ಹೀಗಾಗಿ ಮೂರನೇ ಸಭೆ ನಡೆಸುವ ನಿರ್ಧಾರ ತೆಗೆದುಕೊಂಡೆವು. ಈ ಮೂರನೇ ಸಭೆಯಲ್ಲಿ ಯಾವೆಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಬಗ್ಗೆಯಷ್ಟೇ ನಿರ್ಧರಿಸಬೇಕಾಗಿತ್ತು. ಕಳೆದ ಬಾರಿ ಕಾಂಗ್ರೆಸ್‌ನ 22 ಶಾಸಕರಿದ್ದರು. ಒಂದು ವೇಳೆ ನಮ್ಮ ಬಳಿ 20 ಸ್ಥಾನಗಳಿದ್ದರೆ ನಾವು ಕೇರಳದಲ್ಲಿ ಸರ್ಕಾರ ರಚಿಸಬಹುದಿತ್ತು. ಮುಸ್ಲಿಂ ಲೀಗ್ 18 ರಿಂದ ಇಪ್ಪತ್ತು ಸ್ಥಾನ ಪಡೆಯಬಹುದಿತ್ತು. ಆದರೆ ಈ ಬಗ್ಗೆ ಚರ್ಚಿಸುವವರು ಯಾರೂ ಇರಲಿಲ್ಲ.

ಒಮಾನ್ ಚಾಂಡಿ ದೆಹಲಿಗೆ ತೆರಳಿದರು. ಇದರ ಬೆನ್ನಲ್ಲೇ ರಮೇಶ್ ಚೆನ್ನಿಥಾಲಾ ಕೂಡಾ ದೆಹಲಿಗೆ ತೆರಳಿ ಕೇರಳ ಹೌಸ್ನಲ್ಲಿ ಉಳಿದುಕೊಂಡರು. ಇಲ್ಲಿ ರಮೇಶ್ ಕೊಠಡಿಯಲ್ಲಿ ಅವರ ಬೆಂಬಲಿಗರು ಸೇರಿ ಸಭೆಯೊಂದನ್ನು ನಡೆಸಿ ತಮ್ಮಿಚ್ಛೆಯಂತೆ ನಿರ್ಧಾರ ತೆಗೆದುಕೊಂಡರು. ಒಮಾನ್ ಚಾಂಡಿ ಕೂಡಾ ತಮ್ಮಿಚ್ಛೆಯಂತೆ ಪ್ರತ್ಯೇಕ ಮೀಟಿಂಗ್ ನಡೆಸಿದರು. ಈ ನಿರ್ಧಾರದಲ್ಲಿ ಯಾರೂ ಮಧ್ಯ ಪ್ರವೇಶಿಸುವಂತಿರಲಿಲ್ಲ. ಇದಾದ ಬಳಿಕ ಪಟ್ಟಿ ಸಿದ್ಧಪಡಿಸಿ ಸ್ಕ್ರೀನಿಂಗ್ ಕಮಿಟಿ ಎದುರು ಇಡಲಾಯ್ತು, ಬಳಿಕ ಸ್ಕ್ರೀನಿಂಗ್ ಕಮಿಟಿ ಚೇರ್ಮನ್‌ ಎಚ್‌. ಕೆ. ಪಾಟೀಲ್‌ ನನ್ನನ್ನು ಉಪಾಹಾರಕ್ಕೆ ಕರೆದು, ನನ್ನ ಅಭಿಪ್ರಾಯ ಕೇಳಿದರು. ಹೀಗಿರುವಾಗ ನಾನು ಇಲ್ಲಿ ಉಪಾಹಾರ ಮಾಡಲು ಬಂದಿದ್ದೇನೆ, ಅಭಿಪ್ರಾಯ ಕೊಡಲು ಬಂದಿದ್ದಲ್ಲ ಎಂದು ಹೇಳಿದೆ. ಪಾಟೀಲ್ ಆಗ ನೀವ್ಯಾಕೆ ಅಭಿಪ್ರಾಯ ನೀಡುವುದಿಲ್ಲ ಎಂದು ಪ್ರಶ್ನಿಸಿದರು. ಹೀಗಿರುವಾಗ ನಾನು  ಒಮಾನ್ ಚಾಂಡಿ ಹಾಗೂ ರಮೇಶ್ ಚೆನ್ನಿಥಾಲಾ ಬಳಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪ್ರದೇಶಿಕ ಎಲೆಕ್ಷನ್ ಕಮಿಟಿ ಜೊತೆ ಚರ್ಚಿಸಿದ್ದೀರಾ ಎಂದು ಕೇಳಿ. ಅವರೇನಾದರೂ ಚರ್ಚೆ ನಡೆದಿದೆ ಎಂದರೆ, ನಾನು ಕುಳಿತುಕೊಳ್ಳುತ್ತೇನೆ ಎಂದೆ. ಈ ವಿಚಾರ ಸೋನಿಯಾ ಗಾಂಧಿವರೆಗೂ ತಲುಪಿತು. ಹೀಗಿರುವಾಗ ಸೋನಿಯಾ ಈ ಪ್ಯಾನೆಲ್ ಹೇಗೆ ಸಿದ್ಧವಾಯ್ತು? ಇಲ್ಲಿರುವ ಹೆಸರುಗಳ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚೆ ನಡೆದಿದೆಯಾ? ಅವರ ಅನುಮತಿ ಸಿಕ್ಕಿದೆಯೇ ಎಂದು ವಿಚಾರಿಸಿದರು. ರಾಹುಲ್ ಗಾಂಧಿ ಕೂಡಾ ಇದರಲ್ಲಿ ಹಸ್ತಕ್ಷೇಪ ಮಾಡಿ ಕೇರಳ ನಾಯಕರೊಂದಿಗೆ ವಿಸ್ಕೃತವಾಗಿ ಚರ್ಚಿಸುವುದಾಗಿ ತಿಳಿಸಿದರು. ಎಲ್ಲರೂ ಇದಕ್ಕೆ ಸಿದ್ಧವಾಗಿದ್ದರು, ಆದರೆ ಏನೂ ನಡೆಯಲಿಲ್ಲ.

ಪಕ್ಷದಲ್ಲಿ ಸುಮಾರು ಐವತ್ತು ವರ್ಷದಿಂದಿದ್ದು ಅನುಭವ ಇರುವ ನನ್ನಂತಹ ನಾಯಕರೆಲ್ಲರೂ ಎಲ್ಲವನ್ನೂ ನೋಡುತ್ತಲೇ ಬಾಕಿಯಾದರು. ಉಳಿದರು ಯೋಗ್ಯವಲ್ಲದ ಅಭ್ಯರ್ಥಿಗಳ ಪಟ್ಟಿ ಹಿಡಿಯಲಾರಂಭಿಸಿದರು. ಇಂತಹ ಸ್ಥಿತಿಯಲ್ಲಿ ಯಾರೇ ಆಗಲಿ ಏನು ಮಾಡಲು ಸಾಧ್ಯ? ನಾನು ಅಭ್ಯರ್ಥಿಯಾಗಿರಲಿಲ್ಲ, ಕಣಕ್ಕಿಳಿಯುವ ಇಚ್ಛೆಯೂ ಇರಲಿಲ್ಲ. ನನ್ನ ಬಳಿ ಯಾರಿಗೂ ಸಲಹೆ ನಿಡಲು ಏನೂ ಉಳಿದಿರಲಿಲ್ಲ. ನನ್ನ ಬೆಂಬಲಿಗರೂ ಇರಲಿಲ್ಲ. ಕಾಂಗ್ರೆಸ್‌ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಹಾಗೂ ಎಡ ಪಕ್ಷಗಳಿಗೆ ಇದರ ಲಾಭವಾಗುತ್ತಿದೆ ಎಂಬುವುದು ವಾಸ್ತವ. ಹೀಗಾಗಿ ರಾಜೀನಾಮೆ ಕೊಡುವುದು ಬಿಟ್ಟು ನನ್ನ ಬಳಿ ಬೇರೆ ದಾರಿ ಇರಲಿಲ್ಲ ಎಂದಿದ್ದಾರೆ. 

* ನಿಮ್ಮಂತೆಯೇ ಇನ್ನೂ 23 ಹಿರಿಯ ನಾಯಕರು ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಆರೋಪಿಸಿ ಪಕ್ಷ ವಿರೋಧಿಸುವ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದು ನಿಜವಾದ ವಿಚಾರ. ಆದರೆ ನಾನು 23 ಸದಸ್ಯರಿರುವ ಆ ಗುಂಪಿನ ಸದಸ್ಯ ಅಲ್ಲ. ಆದರೆ ಆ ನಾಯಕರ ಹಸ್ತಾಕಕ್ಷರ ಪಡೆಯುವ ವೇಳೆ ನನ್ನನ್ನೂ ಸಂಪರ್ಕಿಇಸಿದ್ದರು. ಅಅವರೆಲ್ಲರೂ ನನ್ನ ಮಿತ್ರರು. ಆದರೆ ನಾನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದೆ. ಸಾಮಾಣ್ಯವಾಗಿ ಇಂತಹ ಅಭಿಯಾನವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಅವರು ಅಭಿಯಾನ ಆರಂಭಿಸಿದ ವಿಚಾರವೂ ಕಾಂಗ್ರೆಸ್‌ ನಾತಯಕತ್ವದ ಬಗ್ಗೆ ಸವಾಲೆತ್ತಿತ್ತು. ಅವರು ಕಾಂಗಗ್ರೆಸ್‌ ಕಾರ್ಯಕಾರಿ ಸಮಿತಿಯ ಚುನಾವಣೆ ಮಾಡಲಿಚ್ಛಿಸಿದ್ದರು. ಅಲ್ಲದೇ ಪ್ರತೀ ವರ್ಷ AICC ಸಮ್ಮೇಳನ ನಡೆಯಬೇಕೆಂಬ ಬೇಡಿಕೆಯೂ ಇತ್ತು. ಆದರೆ ಪಕ್ಷದ ಸಂವಿಧಾನದಲ್ಲಿ ಇಂತಹ ನಿಯಮವಿದೆ. ಆದರೆ ಇದು ತಪ್ಪಲ್ಲ. ಇನ್ನು ಅವರ ಅಭಿಯಾನದಲ್ಲಿ ಸೋನಿಯಾ ಆಗಲಿ, ರಾಹುಲ್ ಬಗ್ಗೆಯಾಗಲೀ ವಿರೋಧಿಸುವ ಮಾತುಗಳಿರಲಿಲ್ಲ. ನಾಯಕತ್ವಕ್ಕೂ ಸವಾಲೆಸೆದಿರಲಿಲ್ಲ. ಅವರೆಲ್ಲರೂ ಕಾಂಗ್ರೆಸ್‌ ಸಂವಿಧಾನದಲ್ಲಿರುವ ವಿಚಾರವನ್ನೇ ಉಲ್ಲೇಖಿಸಿದ್ದರು. ಕೆಲವರು ಈ ನಾಯಕರು ಪಕ್ಷ ಬಿಡುತ್ತಾರೆಂದು ಭಾವಿಸಿದ್ದರು, ಆದರೆ ಸೋಣಿಯಾ ಗಾಂಧಿ 23 ನಾಯಕರನ್ನು ಚರ್ಚೆಗೆ ಆಹ್ವಾನಿಸಿದರು. ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಹಾಗೂ ಇತರ ನಾಯಕರು ಪಕ್ಷ ವಿರೋಧಿಗಳಲ್ಲ. ಆದರೆ ಕಾಂಗಗ್ರೆಸ್‌ ವರ್ಕಿಂಗ್ ಕಮಿಟಿಯ ಚುನಾವಣೆ ನಡೆಯಬೇಕು ಎಂಬುವುದು ಅವರ ಕೋರರಿಕೆ. ಸದ್ಯ ಕಾಂಗಗ್ರೆಸ್‌ನಲ್ಲಿ ಕಿರಿಯ ಹಾಗೂ ಪರ್ಸನಲ್ ಸ್ಟಾಫ್‌ಗಳು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಒಂದೂವರೆ ವರ್ಷದಿಂದ ಅಧ್ಯಕ್ಷ ಸ್ಥಾನ ಖಾಲಿ ಇದೆ. ರಾಷ್ಟ್ರೀಯ ಹಾಗೂ ಮಹತ್ವಪೂರರ್ಣ ವಿಚಾರಗಳಲ್ಲಿ ಕೋ ಆರ್ಡಿನೇಷನ್ ಕೂಡಾ ಇಲ್ಲ. ರೈತ ಪ್ರತಿಭಟನೆ ನಡೆಯುತ್ತಿದ್ದರೂ, ಪಕ್ಷದ ನಿಲುವು ಇನ್ನೂ ಬಹಿರಂಗಗೊಂಡಿಲ್ಲ. ಕಾಂಗ್ರೆಸ್‌ ಮತ್ತಷ್ಟು ಸಕ್ರಿಯಗೊಳ್ಳಬೇಕು ಎಂಬುವುದು ವಿರೋಧ ಪಕ್ಷಗಳ ಅಭಿಪ್ರಾಯವಾಗಿದೆ ಎಂದಿದ್ದಾರೆ.

* ನಿಮ್ಮನ್ನು ಎಲ್ಲಿ ಪ್ರತ್ಯೇಕವಾಗಿಡಲಾಯ್ತು? ಪಮಾನ್ ಚಾಂಡಿ ಹಾಗೂ ರಮೇಶ್ ಚೆನ್ನಿಥಾಲಾರಿಗೆ ಹೆಚ್ಚಿನ ಮಹತ್ವ ನೀಡಲಾಯ್ತು ಎಂದು ನೀವೇ ಹೇಳಿದ್ರಿ?

ಕೇವಲ ನಾನು ಮಾತ್ರವಲ್ಲ, ಸುಧೀರನ್, ಕೆ. ಸುಧಾಕರನ್‌ರಂತಹ ನಾಯಕರಿಗೂ ಯಾವುದೇ ಮಹತ್ವ ಕೊಡಲಿಲ್ಲ. ನಾನು ಇವರೊಂದಿಗೆ ಮಾತನಾಡಿದೆ. ನನ್ನನ್ನು ಮಾತ್ರ ಪ್ರತ್ಯೇಕವಾಗಿಟ್ಟಿದ್ದಲ್ಲ. ನಾನು ರಾಜೀನಾಮೆ ಕೊಟ್ಟಿದ್ದೇನೆ, ಹಾಗಂತ ಎಲ್ಲರೂ ಹೀಗೇ ನಡೆದುಕೊಳ್ಳಬೇಕೆಂದು ಇಲ್ಲವಲ್ಲಾ?. ಕುರಿಯನ್ ಹಾಗೂ ಸುಧೀರನ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ರಾಮಚಂದ್ರನ್ ಕೂಡಾ ಈ ಬಗ್ಗೆ ಚರ್ಚೆ ನಡೆಯಬೇಕು ಎಂದಿದ್ದಾರೆ. ಇದರ ಅರ್ಥವೇನು? ಯಾರೂ ನನ್ನನ್ನು ವಿರೋಧಿಸಲಿಲ್ಲ ಎಂಬ ಅರ್ಥ ಮಾತ್ರ ಸಿಗುತ್ತದೆ. ಅನೇಕ ಹಿರಿಯ ನಾಯಕರನ್ನು ನಿರ್ಲಕ್ಷಿಸಿದ್ದಾರೆ. ಕೇವಲ ಓಮನ್‌ ಚಾಂಡಿ, ರಮೇಶ್ ಚೆನ್ನಿಥಾಲಾ ಹಾಗೂ ಅವರ ಬೆಂಬಲಿಗರಿಗಷ್ಟೇ ಮಣೆ ಹಾಕಲಾಗಿದೆ ಎಂದಿದ್ದಾರೆ.

* ನೀವು ರಾಜೀನಾಮೆ ಸಲ್ಲಿಸುವ ಮೊದಲು ಕಾಂಗ್ರೆಸ್‌ ಹೈಕಮಾಂಡ್ ಸಂಪರ್ಕಿಸುವ ಯತ್ನ ನಡೆಸಿದ್ರಾ?

ಇಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ರಾಹುಲ್ ಗಾಂಧಿಗೆ ತಿಳಿಸಿದ್ದೆ.  ನಾಗರ್‌ಕೋಯಿಲ್‌ನಿಂದ ದೆಹಲಿಗೆ ಮರಳುವಾಗ ಅವರನ್ನು ಭೇಟಿಯಾಗಿದ್ದೆ. ವಿಮಾನ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ಅವರೊಂದಿಗೆ ಮಾತುಕತೆ ನಡೆಸಿದ್ದೆ. ಈ ಬಗ್ಗೆ ಕೇರಳದಲ್ಲಿ ಚರ್ಚೆ ನಡೆಸುವಂತೆಯೂ ಮನವಿ ಮಾಡಿದ್ದೆ. ಇದಕ್ಕೆ ಅವರು ತಯಾರಿದ್ದರು. ಆದರೆ ಇದಾದ ಬಳಿಕ ಅವರಿಗೆ ಸಮಯ ಸಿಗಲಿಲ್ಲ. ಈ ವಿಚಾರವಾಗಿ ಯಾರೂ ಇನ್ನೂ ಗಂಭೀರವಾಗಿಲ್ಲ ಎಂದಷ್ಟೇ ಹೇಳಬಹುದು ಎಂದಿದ್ದಾರೆ.

* ಕಾಂಗ್ರೆಸ್‌ಗೆ ಹಿಂದಿನ ಚುನಾವಣೆಯಲ್ಲಿ ಭಾರಿ ಹೊಡೆತ ಬಿದ್ದಿದೆ. ಹೀಗಿರುವಾಗ ಪಕ್ಷ ಮತ್ತೆ ಜಯಗಳಿಸುವ ಸ್ಥಿತಿಗೆ ಮರಳುತ್ತದೆ ಎಂದು ನಿಮಗನಿಸುತ್ತಾ?

ಇದನ್ನು ಯೋಚಿಸುವುದು ನನ್ನ ಕೆಲಸವಲ್ಲ. ಅಧಿಕಾರದಲ್ಲಿದ್ದು, ಪಕ್ಷದ ಮಹತ್ವದ ಸ್ಥಾನ ವಹಿಸಿಕೊಂಡವರು ಯೋಚಿಸಬೇಕಾದ ವಿಚಾರವಿದು. ಕಾಂಗ್ರೆಸ್‌ ಅಧ್ಯಕ್ಷರ ಮಹತ್ವವಾದದ್ದು. ಪಕ್ಷದ ಅಧ್ಯಕ್ಷರಾಗಿರುವವರು ಪಕ್ಷವನ್ನು ಎತ್ತ ಕೊಂಡೊಯ್ಯಬೇಕು ಎಂದು ಯೋಚಿಸಬೇಕಾಗುತ್ತದೆ. ಪರಿಸ್ಥಿತಿ ಅವಲೋಕಿಸುವ ಕ್ಷಮತೆ ಅವರಿಗಿರಬೇಕು. ಸದ್ಯ ನಾನಂತೂ ಹೊರಗಿನವ ಎಂದು ನುಡಿದಿದ್ದಾರೆ.

* ಎಲ್ಲಾ ನಾಯಕರಂತೆ ನೀವೂ ಕೇರಳ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೀರಾ?

ಇಲ್ಲ, ಸಾಧ್ಯವೇ ಇಲ್ಲ. ನಾನು ಜಾತ್ಯತೀತ ರಾಜಕೀಯಕ್ಕೆ ಬದ್ಧನಾಗಿರುವವನು. ನಾನು ಸೆಕ್ಯುಲರ್ ಪಾಲಿಟಿಕ್ಸ್‌ನಲ್ಲಿದ್ದವನು. ಹೀಗಿರುವಚಾಗ ನಾನು ಯಾವತ್ತೂ ಬಿಜೆಪಿಯಂತಹ ಸಾಂಪ್ರದಾಯಿಕ ಸಂಘಟನೆ ಜೊತೆ ಸಂಬಂಧವಿಟ್ಟುಕೊಳ್ಳುವುದಿಲ್ಲ. 

* ನೀವು ಕೇರಳದಲ್ಲಿ ಎನ್‌ಸಿಪಿಗೆ ಸೇರ್ಪಡೆಗೊಳ್ಳುತ್ತಿರೆಂಬ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್‌ ಮತ್ತೆ ಪಕ್ಷಕ್ಕೆ ಮರಳುವಂತೆ ಮನವಿ ಮಾಡಿಕೊಂಡರೆ ಮತ್ತೆ ಹಿಂತಿರುಗುವ ಮನಸ್ಸು ಮಾಡುತ್ತೀರಾ?

ನನ್ನೆದುರು ಅನೇಕ ಆಯ್ಕೆಗಳಿವೆ. ಈ ಬಗ್ಗೆ ನಾನು ನಿರ್ಧರಿಸಬೇಕಿದೆ. ಈವರೆಗೂ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನನಗೆ ಯಾವುದೇ ಆತುರಲಿಲ್ಲ. ನಾನು ನನ್ನ ಗೆಳೆಯರ ಸಂಪರ್ಕದಲ್ಲಿದ್ದೇನೆ. ಕಾಂಗ್ರೆಸ್‌ ಜೊತೆ ಯಾವುದೇ ರೀತಿಯ ಮಾತುಕತೆಯಾಗುವುದು ನನಗಿಷ್ಟವಿಲ್ಲ. ಅನೆಕ ಹಿರಿಯ ನಾಯಕರು ನನ್ನನ್ನು ಭೇಟಿಯಾಗಲು ಇಚ್ಛಿಸಿದಾಗ ನಾನು ನಿರಾಕರಿಸಿದ್ದೇನೆ. ಕರೆ ಮಾಡಿದಾಗ, ನಾನದನ್ನು ಸ್ವೀಕರಿಸಿಲ್ಲ. ನಾನು ಕಾಂಗ್ರೆಸ್‌ ಮೇಲೆ ಒತ್ತಡ ಹೇರಲು ರಾಜೀನಾಂಎ ನೀಡಿಲ್ಲ ಎಂದಿದ್ದಾರೆ. 

Follow Us:
Download App:
  • android
  • ios