Asianet Suvarna News Asianet Suvarna News

ಅನಿವಾರ್ಯವಾಗಿ ತೊರೆದಿದ್ದ 1,600 ಕೋಟಿ ರೂ ಅರಮನೆಗೆ ಮರಳಿದ ಪ್ರಿಯಾಂಕಾ-ನಿಕ್ ಜೋಡಿ!

ಈ ವರ್ಷದ ಆರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋಡಿ ಬಲವಂತವಾಗಿ ತಮ್ಮ ಲಾ ಮಾನ್ಶನ್ ಅರಮನೆಯಿಂದ ಸ್ಥಳಾಂತರಗೊಂಡಿದ್ದರು. ಬೇಸರ, ನಿರಾಸೆ, ಆಕ್ರೋಶದಿಂದಲೇ ಮನೆ ತೊರೆದಿದ್ದರು. ಇದೀಗ ಬರೋಬ್ಬರಿ 1,600 ಕೋಟಿ ರೂ ಮನೆಗೆ ಮರಳಿದ್ದಾರೆ.

Priyanka chopra nick jonas return to their rs 1600 crore La mansion house los angeles ckm
Author
First Published May 16, 2024, 10:39 PM IST

ಲಾಸ್ ಎಂಜಲ್ಸ್(ಮೇ.16) ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಜೋಡಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ವರ್ಷದ ಆರಂಭದಲ್ಲಿ ಈ ಜೋಡಿ ತಮ್ಮ ನೆಚ್ಚಿನ ಅರಮನೆ ಲಾ ಮಾನ್ಶನ್ ತೊರೆಯಬೇಕಾಗಿ ಬಂದಿತ್ತು. ಒಲ್ಲದ ಮನಸ್ಸಿನಿಂದಲೇ ಮನೆ ಸ್ಥಳಾಂತರ ಮಾಡಿದ್ದ ಪ್ರಿಯಾಂಕಾ-ನಿಕ್ ಜೋಡಿ ಇದೀಗ ಒಂದು ವರ್ಷಗಳ ಬಳಿಕ ಮತ್ತೆ ತಮ್ಮ ಲಾಸ್ ಎಂಜಲ್ಸ್‌ನಲ್ಲಿರುವ ಲಾ ಮಾನ್ಶನ್ ಹೌಸ್‌ಗೆ ಮರಳಿದ್ದಾರೆ. ಅಂದ ಹಾಗೆ ಈ ಮನೆಯ ಮೌಲ್ಯ ಬರೋಬ್ಬರಿ 1,600 ಕೋಟಿ ರೂಪಾಯಿ.

ಲಾ ಮಾನ್ಶನ್ ಹೌಸ್‌ಗೆ ಮರಳಿರುವ ಕುರಿತು ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಅಪ್‌ಡೇಟ್ ಮಾಡಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ ತಮ್ಮ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹಾಗೂ ಬಾಲ್ಕನಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವರ್ಷದ ಬಳಿಕ ನೆಚ್ಚಿನ ಮನೆಯಲ್ಲಿ ಕಾಲ ಕಳೆಯುತ್ತಿರುವ ಸಂಭ್ರಮ ಹಂಚಿಕೊಂಡಿದ್ದಾರೆ. 

ಬ್ಲೌಸ್ ಇಲ್ಲದೆ ಸೀರೆಯಲ್ಲಿ ಪ್ರಿಯಾಂಕಾ ಚೋಪ್ರಾ ಟ್ರೋಲ್; ಬಿಕಿನಿಲಿ ಕುಣಿಯೋ ದೀಪಿಕಾಗೇಕೆ ಏನೂ ಹೇಳಲ್ಲ ಕೇಳಿದ್ರು ನೆಟಿಜನ್ಸ್

2024ರ ಆರಂಭದಲ್ಲಿ ಪ್ರಿಯಾಂಕಾ-ನಿಕ್ ಜೋಡಿ ತಮ್ಮ ಲಾ ಮಾನ್ಶನ್ ಹೌಸ್ ತೊರೆದಿದ್ದರು. ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ನೀರು ಲೀಕೆಜ್ ಸಮಸ್ಯೆ ಕಾಣಿಸಿಕೊಂಡಿತ್ತು. ಕೆಲ ರಿಪೇರಿ ಕೆಲಸಗಳನ್ನು ಮಾಡಲೇಬೇಕಿತ್ತು. ಸಂಪೂರ್ಣ ಮನೆಯಲ್ಲಿ ರಿಪೇರಿ ಕೆಲಸ ಮಾಡಲು ಕಾಂಟ್ರಾಕ್ಟ್ ನೀಡಲಾಗಿತ್ತು. ಹೀಗಾಗಿ ಪ್ರಿಯಾಂಕಾ -ನಿಕ್ ಜೋಡಿ ತಮ್ಮ ಮುದ್ದಾದ ಪುತ್ರಿಯೊಂದಿಗೆ ಸ್ಥಳಾಂತರಗೊಂಡಿದ್ದರು.

4 ತಿಂಗಳ ಬಳಿಕ ಇದೀಗ ಮನೆ ರೆಡಿಯಾಗಿದೆ. ಇದರ ಬೆನ್ನಲ್ಲೇ ಪ್ರಿಯಾಂಕಾ ಜೋಡಿ ಮತ್ತೆ ಲಾ ಮಾನ್ಶನ್ ಹೌಸ್‌ಗೆ ಮರಳಿದ್ದಾರೆ. ಇದು 7 ಬೆಡ್ ರೂಂ ಹೊಂದಿರುವ ಅರಮನೆ. 9 ಬಾತ್ ರೂಂ, ಚೆಫ್ ಕಿಚನ್, ಟೆಂಪರೇಚರ್ ಕಂಟ್ರೋಲ್ಡ್ ವೈನ್ ರೂಂ, ಒಳಾಂಗಣ ಬಾಸ್ಕೆಟ್ ಬಾಲ್ ಕೋರ್ಟ್, ಹೋಮ್ ಥೀಯೆಟರ್, ಮನೋರಂಜನಾ ಲಾಂಜ್, ಸ್ಪಾ, ಸ್ಟೀಮ್ ಶವರ್, ಸರ್ವೀಸ್ ಜಿಮ್, ಬಿಲಿಯಾರ್ಡ್ ರೂಂ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡಲು ಶಾರೂಖ್ ಜೊತೆಗಿನ ಸಂಬಂಧ ಕಾರಣನಾ?

ಇತ್ತೀಚೆಗೆ ಪ್ರಿಯಾಂಕಾ-ನಿಕ್ ಮನೆ ನವೀಕರಣ ಕಾಮಾಗಾರಿಯ ಫೋಟೋ ಭಾರಿ ವೈರಲ್ ಆಗಿತ್ತು. ಏರಿಯಲ್ ಶಾಟ್ ಫೋಟೋ ಹಾಗೂ ಈ ಮನೆಯ ಬೆಲೆ ನೆಟ್ಟಿಗರ ಗಮನಸೆಳೆದಿತ್ತು. ಈ ಮನೆಯನ್ನು ನಿಕ್ ಹಾಗೂ ಪ್ರಿಯಾಂಕಾ ಜೊತೆಯಾಗಿ ಖರೀದಿಸಿದ್ದಾರೆ. ಮದುವೆಯಾದ ಒಂದೇ ವರ್ಷದಲ್ಲಿ ಈ ಮನೆ ಖರೀದಿಸಿದ್ದರು. 2018ರಲ್ಲಿ ಪ್ರಿಯಾಂಕಾ ಜೋಪ್ರಾ-ನಿಕ್ ಮದುವೆ ನಡೆದಿತ್ತು. ರಾಜಸ್ಥಾನದಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ದುಬಾರಿ ಮನೆ ಖರೀದಿಸಿದ್ದರು.

Latest Videos
Follow Us:
Download App:
  • android
  • ios