SSLC ಪರೀಕ್ಷೆಯಲ್ಲಿ ಶೇ.99 ಅಂಕ ಪಡೆದ ವಿದ್ಯಾರ್ಥಿನಿ, ಸಂಭ್ರಮದ ನಡುವೆ ಬ್ರೈನ್ ಹ್ಯಾಮರೇಜ್‌ಗೆ ಬಲಿ!
10ನೇ ತರಗತಿ ಪರೀಕ್ಷೆಯಲ್ಲಿ ಆಕೆ ಶೇಕಡಾ 99ರಷ್ಟು ಅಂಕ ಪಡೆದು ಕೀರ್ತಿ ತಂದಿದ್ದಾಳೆ. ಆದರೆ ಫಲಿತಾಂಶ ಬಂದರೂ ಸಂಭ್ರಮ ಪಡಲು ಸಾಧ್ಯವಾಗಲಿಲ್ಲ. ಕಾರಣ 16 ವರ್ಷದ ವಿದ್ಯಾರ್ಥಿನಿ ಬ್ರೈನ್ ಹ್ಯಾಮರೇಜ್ ಸಮಸ್ಯೆಯಿಂದ ನಿಧನಳಾಗಿದ್ದಾಳೆ. ಇತ್ತ ಪೋಷಕರು ವಿದ್ಯಾರ್ಥಿನಿಯ ಅಂಗಾಂಗ ದಾನ ಮಾಡಿದ್ದಾರೆ.
ಮೊರ್ಬಿ(ಮೇ.15) ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡು ಕೆಲ ದಿನಗಳು ಉರುಳಿದೆ. ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸಂಭ್ರಮ ಆಚರಿಸುತ್ತಿದ್ದಾರೆ. ಹೀಗೆ 16 ವರ್ಷದ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿದ್ದಾಳೆ. ಆದರೆ ಈ ಸಂಭ್ರಮ ಆಚರಿಸಲು ಇದೀಗ ವಿದ್ಯಾರ್ಥಿನಿಯೇ ಇಲ್ಲ. ಬ್ರೈನ್ ಹ್ಯಾಮರೇಜ್‌ನಿಂದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ನಡೆದಿದೆ.
ಮೊರ್ಬಿಯ 16 ವರ್ಷದ ವಿದ್ಯಾರ್ಥಿನಿ ಹೀರ್ ಘೆತಿಯಾ ಓದಿನಲ್ಲಿ ಸದಾ ಮುಂದು. ಇಷ್ಟೇ ಅಲ್ಲ ಪಠ್ಯೇತರ ಚಟುವಟಿಕೆಯಲ್ಲೂ ಎತ್ತಿದ ಕೈ. 10ನೇ ತರಗತಿ ಪರೀಕ್ಷಗಾಗಿ ಸತತ ಪರಿಶ್ರಮ, ಓದು, ಪೋಷಕರು, ಶಿಕ್ಷಕರ ಮಾರ್ಗದರ್ಶನದ ಮೂಲಕ ಪಠ್ಯಾಭ್ಯಾಸ ಮಾಡಿದ್ದಾಳೆ. ಪರೀಕ್ಷೆ ಬರೆದ ಬೆನ್ನಲ್ಲೇ ವಿದ್ಯಾರ್ಥಿನಿಯ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ.
10ನೇ ತರಗತಿ ಪಾಸ್ ಆದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಹತ್ಯೆ! ರುಂಡಕ್ಕಾಗಿ ಪೊಲೀಸರ ತೀವ್ರ ಹುಡುಕಾಟ
ಪರೀಕ್ಷೆ ಬಳಿಕ ಪೋಷಕರು ಮಗಳನ್ನು ಆಸ್ಪತ್ರೆ ದಾಖಲಿಸಿದ್ದಾಳೆ. ಬ್ರೈನ್ ಹ್ಯಾಮರೇಜ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರಾಜ್‌ಕೋಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಳಿಕ 15 ದಿನ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾಳೆ. ನಿಧಾನವಾಗಿ ಚೇತರಿಸಿಕೊಳ್ಳುತ್ತದ್ದಂತೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾಳೆ.
ಮನೆಗೆ ಆಗಮಿಸಿದ ವಿದ್ಯಾರ್ಥಿನಿಗೆ ಉಸಿರಾಟದ ಸಮಸ್ಸೆ ಹಾಗೂ ಇತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಕಳೆದ ಒಂದು ವಾರದ ಹಿಂದೆ ಮತ್ತೆ ವಿದ್ಯಾರ್ಥಿನಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಮೇ.11ರಂದು ಗುಜರಾತ್‌ನಲ್ಲಿ ಸೆಕೆಂಡರಿ ಹಾಗೂ ಹೈಯರ್ ಸೆಕೆಂಡರ್ ಎಜುಕೇಶನ್ ಬೋರ್ಡ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದೆ. ಹೀರ್ ಘೆತಿಯಾ ಶೇಕಡಾ 99.70 ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾಳೆ.
ಫಲಿತಾಂಶ ಪ್ರಕಟಗೊಂಡಾದ ಹೀರ್ ಘೆತಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಎಂಆರ್‌ಐ ಸ್ಕ್ಯಾನ್‌ನಲ್ಲಿ ವಿದ್ಯಾರ್ಥಿನಿಯ ಮದೆಳು 80 ರಿಂದ 90 ಶೇಕಡಾ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವುದು ಪತ್ತೆಯಾಗಿತ್ತು. ವೈದ್ಯರ ತಪಾಸಣೆ, ಚಿಕಿತ್ಸೆಯಲ್ಲಿ ವಿದ್ಯಾರ್ಥಿನಿಗೆ ಬ್ರೈನ್ ಹ್ಯಾಮರೇಜ್ ಸಮಸ್ಯೆ ಅತೀವವಾಗಿರುವುದು ಬಹಿರಂಗವಾಗಿದೆ. ಇತ್ತ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದರೂ ಸಂಭ್ರಮ ಪಡುವ ಸ್ಥಿತಿಯಲ್ಲಿ ವಿದ್ಯಾರ್ಥಿನಿಯೂ ಇರಲಿಲ್ಲ, ಪೋಷಕರೂ ಇರಲಿಲ್ಲ. ಸತತ ಹೋರಾಟ ನಡೆಸಿದ ವಿದ್ಯಾರ್ಥಿನ ನಿಧನಳಾಗಿದ್ದಾಳೆ.
SSLC Result: ಪಾಸಾಗಿದ್ದರೂ, ಫೇಲ್ ಆಗಿದ್ದೇನೆಂದು ಭಾವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ವೈದ್ಯೆ ಆಗಬೇಕು ಎಂದು ಕನಸು ಇಟ್ಟುಕೊಂಡಿದ್ದ ಹೀರ್ ಘೆತಿಯಾ ದುರಂತ ಅಂತ್ಯಕಂಡಿದ್ದಾಳೆ. ಪೋಷಕರು ಆಕೆಯ ಅಂಗಾಂಗ ದಾನ ಮಾಡಿದ್ದಾರೆ. ಮಗಳು ವೈದ್ಯೆಯಾಗಿ ಎಲ್ಲರ ಸೇವೆ ಮಾಡಬೇಕು ಎಂದುಕೊಂಡಿದ್ದಳು. ವಿಧಿ ಆಟ ಬೇರೆ ಆಗಿತ್ತು. ನಾವು ಆಕೆಯ ಅಂಗಾಂಗ ದಾನ ಮಾಡಿದ್ದೇವೆ, ಕೆಲ ಜೀವಗಳನ್ನು ಈ ಮೂಲಕ ಉಳಿಸಲಾಗಿದೆ ಎಂದು ಪೋಷಕರು ನೋವಿನಿಂದ ಹೇಳಿದ್ದಾರೆ.