ಅಭಿಮಾನಿಗಾಗಿ ಬೆಂಗಳೂರಿನ ಬಹುಮಹಡಿ ಕಟ್ಟಡ ಹತ್ತಲು ಬಂದ ಭಾರತದ ಮಂಕಿ ಮ್ಯಾನ್ ಜ್ಯೋತಿ ರಾಜ್!

ಭಾರತದ ಮಂಕಿ ಮ್ಯಾನ್ ಖ್ಯಾತಿಯ ಜ್ಯೋತಿ ರಾಜ್ ಅವರು ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸುವುದಕ್ಕಾಗಿ ಬೆಂಗಳೂರಿನ ಬಹುಮಹಡಿ ಕಟ್ಟಡವನ್ನು ಹತ್ತಲು ಆಗಮಿಸಿದ್ದಾರೆ.

Indian real monkey man Jyothi Raj try to climbing Bengaluru multilevel building sat

ಬೆಂಗಳೂರು (ಮೇ 16): ನಮ್ಮ ದೇಶದಲ್ಲಿ ಬರಿಗಾಲಿನಲ್ಲಿ ಕಲ್ಲಿನ ಬೆಟ್ಟ, ಗುಡ್ಡ ಹಾಗೂ ಕಲ್ಲಿನ ಕೋಟೆಗಳನ್ನು ಹತ್ತುತ್ತಿದ್ದ ಮಂಕಿಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿರಾಜ್ ಈಗ ಬೆಂಗಳೂರಿನ ಮೀನಾಕ್ಷಿ ಟೆಂಪಲ್ ಹತ್ತಿರದ ದೊಡ್ಡ ಬಿಲ್ಡಿಂಗ್ ಹತ್ತುವುದಕ್ಕೆ ಆಗಮಿಸಿದ್ದಾರೆ. ಆದರೆ, ಈ ಸಾಹಸವನ್ನು ತಮ್ಮ ಹಾಸಿಗೆ ಹಿಡಿದು ಮೇಲೇಳಲೂ ಸಾಧ್ಯವಾಗದ ಅಭಿಮಾನಿಯ ಆಸೆ ಈಡೇರಿಸಲು ಮಾಡುತ್ತಿದ್ದಾರೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ.

ಚಿತ್ರದುರ್ಗ ಕೋಟೆಯನ್ನು ನೋಡಲು ಹೋದವರಿಗೆ ಸಾಮಾನ್ಯವಾಗಿ ಮಂಗನಂತೆ ಕಲ್ಲಿನ ಕೋಟೆಯನ್ನು ಹತ್ತುವ ಜ್ಯೋತಿರಾಜ್‌ನನ್ನು ನೋಡಿರುತ್ತೀರಿ. ಅವರೊಂದಿಗೆ ಸಾಕಷ್ಟು ಜನರು ಫೋಟೋ ವಿಡಿಯೋ ಕೂಡ ಮಾಡಿಕೊಂಡು ಬಂದಿರುತ್ತೀರಿ. ಇಷ್ಟು ವರ್ಷಗಳ ಕಾಲ ಜ್ಯೋತಿರಾಜ್ ಅವರು ಕಲ್ಲಿನ ಬೃಹತ್ ಬಂಡೆಗಳು, ಕೋಟೆಗಳು, ಏಕ ಶಿಲಾ ಬೆಟ್ಟಗಳನ್ನು ಹತ್ತಿ ಸಾಹಸ ಮಾಡಿದ್ದಾರೆ. ಇನ್ನು ಸಣ್ಣ ಪುಟ್ಟ ಕಟ್ಟಡಗಳನ್ನು ಹತ್ತಿಯೂ ತಾವು ಬಂಡೆ ಹತ್ತುವ ಸಾಹಸಿಗ ಎಂದು ತೋರಿಸಿದ್ದಾರೆ. ಆದರೆ, ಈಗ ಬೆಂಗಳೂರಿನಲ್ಲಿ ಬೃಹತ್ ಬಹುಮಹಡಿ ಕಟ್ಟಡವನ್ನು ಹತ್ತಲು ಬಂದಿದ್ದಾರೆ.

ರಾಮನಗರದ 560 ಮೀ. ಎತ್ತರದ 'ಹಂದಿಗುಂದಿ ಬೆಟ್ಟ' ಹತ್ತಿದ ಮಂಕಿಮ್ಯಾನ್ ಖ್ಯಾತಿಯ 'ಜ್ಯೋತಿರಾಜ್' ಬಂಧನ

ಅಷ್ಟಕ್ಕೂ ಬೆಂಗಳೂರಿಗೆ ಬಂದು ಬಹುಮಹಡಿ ಕಟ್ಟಡ ಹತ್ತುವ ಮೂಲಕ ಸಾಹಸ ಪ್ರದರ್ಶನಕ್ಕೆ ಮುಂದಾಗಿರುವುದಕ್ಕೆ ಪ್ರಮುಖ ಕಾರಣವೂ ಇದೆ. ಅದೇನೆಂದರೆ, ಜ್ಯೋತಿರಾಜ್‌ನ ಸಾಹಸಗಳನ್ನು ಕಳೆದ 11 ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಾ ಅವರನ್ನು ಫಾಲೋ ಮಾಡುತ್ತಿದ್ದ ಅಭಿಮಾನಿಯೊಬ್ಬರ ಆಸೆಯನ್ನು ಈಡೇರಿಸುವುದಕ್ಕೆ ಬೆಂಗಳೂರಿಗೆ ಬಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Jothi Raj (@jothi.raj.564)

ಇನ್ನು ಅವರ ಅಭಿಮಾನಿಗೆ ಪಾಶ್ವವಾಯುವಿನಿಂದ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು, ಹಾಸಿಗೆಯಿಂದ ಮೇಲೆದ್ದು ಓಡಾಡಲಾರದ ಸ್ಥಿತಿಯಲ್ಲಿದ್ದಾರೆ. ಆದರೆ, ಜ್ಯೋತಿರಾಜ್‌ನೊಂದಿಗೆ ಹಲವು ವರ್ಷಗಳಿಂದ ಕರೆ ಮಾಡುತ್ತಾ ಪ್ರೋತ್ಸಾಹ ನೀಡುವ ಅಭಿಮಾನಿಗೆ ಕಣ್ಣಾರೆ ಜ್ಯೋತಿರಾಜ್ ಬೆಟ್ಟ ಅಥವಾ ಕಟ್ಟಡ ಹತ್ತುವುನ್ನು ನೋಡುವ ಆಸೆಯಿದೆಯಂತೆ. ಅವರ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಜ್ಯೋತಿರಾಜ್ ಬಹುಮಹಡಿ ಕಟ್ಟಡ ಹತ್ತುವ ಸಾಹಸಕ್ಕೆ ಕೈ ಹಾಕಿದ್ದಾರೆ.

Jyothi Raj: 25 ಮಹಡಿಗಳನ್ನು 10 ನಿಮಿಷದಲ್ಲಿ ಹತ್ತಿದ ಕೋತಿರಾಜ್‌!

ಸ್ವತಃ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜ್ಯೋತಿರಾಜ್ ಅವರು ಬೆಂಗಳೂರಿನ ಅಕ್ಷಯ ನಗರದ ಅಭಿಮಾನಿ ಮನೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ. ಆದರೆ, ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸಲು ಮೀನಾಕ್ಷಿ ದೇವಾಲಯದ ಬಳಿ ಇರುವ ಬೃಹತ್ ಬಹುಮಹಡಿ ಕಟ್ಟಡವನ್ನು ಹತ್ತುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇನ್ನು ನಾನು ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಾನು ಬಿಲ್ಡಿಂಗ್ ಹತ್ತುತ್ತೇನೆ. ಇದಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆ ಹಾಗೂ ಕಟ್ಟಡಗಳಿಂದ ಅನುಮತಿಯನ್ನೂ ಪಡೆದುಕೊಳ್ಳುತ್ತೇನೆ. ನಮ್ಮ ಈ ಕಾರ್ಯಕ್ಕೆ ಕಟ್ಟಡದ ಮಾಲೀಕರು ಅನುಮತಿಯೂ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios