ಬೆಂಗಳೂರು ಸೇರಿ ದಕ್ಷಿಣ ಭಾರತದಲ್ಲಿ ಪ್ರವಾಹ ಎಚ್ಚರಿಕೆ, ಮೇ17-22ರ ವರೆಗೆ ಭಾರಿ ಮಳೆ!
ಭಾರತೀಯ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮೇ17ರಿಂದ 22ರ ವರೆಗೆ ಬೆಂಗಳೂರು, ಕರ್ನಾಟಕದ ಕೆಲ ಜಿಲ್ಲೆ, ಕೇರಳ ಹಾಗೂ ತಮಿಳುನಾಡಿನಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುವ ಸಾಧ್ಯತೆ ಇದೆ. ಇದು ದಿಢೀರ್ ಪ್ರವಾಹ ಸೃಷ್ಟಿಸಲಿದೆ ಎಂದು ಎಚ್ಚರಿಸಿದೆ.
ಬೆಂಗಳೂರು(ಮೇ.16) ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಆದರೆ ಈ ಬಾರಿ ಒಂದೆ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿ ದಿಢೀರ್ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಕುರಿತು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರು, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದು ದಿಢೀರ್ ಪ್ರವಾಹ ಭೀತಿ ಸೃಷ್ಟಿಸಲಿದೆ. ಹೀಗಾಗಿ ಮೇ17 ರಿಂದ 22ರ ವರೆಗೆ ಅತೀವ ಎಚ್ಚರಿಕೆ ವಹಿಸಲು ಹವಾಮನ ಇಲಾಖೆ ಸೂಚಿಸಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಂತರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡಿಗೆ ರೆಡ್ ಅಲರ್ಡ್ ನೀಡಿರುವ ಹವಾಮಾನ ಇಲಾಖೆ, ಇದರ ಪರಿಣಾಮ ಬೆಂಗಳೂರಿನಲ್ಲೂ ಗೋಚರಿಸಲಿದೆ ಎಂದು ಎಚ್ಚರಿಸಿದೆ. ಮೇ.17ರಿಂದ 22ರ ವರೆಗೆ ಬೆಂಗಳೂರಿನಲ್ಲಿ ಮಳೆ ಸಂಭವ ಹೆಚ್ಚಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತವಾರಣವಿರಲಿದೆ. ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗುಡುಗು ಮಿಂಚು ಸಹಿತ ಮಳೆ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಯಾದಗಿರಿ ಸುತ್ತಮುತ್ತ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಒಂದು ವಾರ ಬೆಂಗಳೂರಿನಲ್ಲಿ ಹವಾಮಾನ 23 ಡಿಗ್ರಿ ಸೆಲ್ಶಿಯಸ್‌ನಿಂದ ಗರಿಷ್ಠ 33 ಡಿಗ್ರಿ ಸೆಲ್ಶಿಯಸ್ ದಾಖಲಾಗಲಿದೆ. ಒಂದು ವಾರದಲ್ಲಿ ಭಾರಿ ಮಳೆ ಸಂಭವ ಹೆಚ್ಚಿರುವ ಕಾರಣ ಬೆಂಗಳೂರು ನಗರದಲ್ಲಿ ಚರಂಡಿಗಳು ತುಂಬಿ ಹರಿಯಲಿದೆ. ಇದು ಮತ್ತಷ್ಟು ಅನಾಹುತಕ್ಕೆ ಕಾರಣಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ತಮಿಳುನಾಡಿಗೆ ರೆಡ್ ಅಲರ್ಡ್ ನೀಡಿರುವ ಹವಾಮಾನ ಇಲಾಖೆ, ಮೇ.18ರಿಂದ ಆರೇಂಜ್ ಅಲರ್ಟ್ ನೀಡಿದೆ. ಇತ್ತ ಕೇರಳದಲ್ಲೂ ಭಾರಿ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.
ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ವರದಿಯಾಗಿದೆ. ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿರುವುದು ವರದಿಯಾಗಿದೆ. ದಕ್ಷಿಣ ಮೇ.31ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜೂನ್ ಆರಂಭದಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ. ಈ ಬಾರಿ ಆರಂಭದಲ್ಲೇ ನಿರೀಕ್ಷೆಗೂ ಮೀರಿ ಸುರಿಯುವ ಮಳೆಯಿಂದ ಅಪಾಯದ ಸಾಧ್ಯತೆಯನ್ನು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ, ಬೆಳೆ ನಾಶ
ಮಳೆ ಸಂದರ್ಭದಲ್ಲಿ ಪ್ರಯಾಣದಿಂದ ದೂರವಿರಲು ಸೂಚಿಸಿದೆ. ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆಗೆ ಹಲವು ಮರಗಳು ಧರೆಗುರುಳಿದೆ. ಹೀಗಾಗಿ ಅಪಾಯದ ಸಂಭವ ಹೆಚ್ಚಿದೆ.