Asianet Suvarna News Asianet Suvarna News

ಬೆಂಗಳೂರು: ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿ ನೇಣು ಹಾಕೊಳೋ ನಾಟಕ ಮಾಡ್ತಿದ್ದ ಜಿಮ್ ಟ್ರೈನರ್ ಸತ್ತೇ ಹೋದ!

ಮನೆ ಬಿಟ್ಟು ಹೋದ ಹೆಂಡತಿಯಲ್ಲಿ ವಾಪಸ್ ಕರೆಸಲು ವಿಡಿಯೋ ಕಾಲ್‌ನಲ್ಲಿ ನೇಣು ಹಾಕಿಕೊಳ್ಳುವ ನಾಟಕವಾಡ್ತಿದ್ದ ಜಿಮ್ ಟ್ರೈನರ್ ಆಯತಪ್ಪಿ ನೇಣು ಬಿಗಿದು ಸತ್ತೇ ಹೋಗಿದ್ದಾನೆ.

Bihar based Gym trainer self died on live video calling with wife in Bengaluru sat
Author
First Published May 16, 2024, 6:55 PM IST

ಬೆಂಗಳೂರು (ಮೇ 16): ಮನೆ ಬಿಟ್ಟು ಹೋದ ಹೆಂಡತಿಯನ್ನು ಮನೆಗೆ ಮರಳಿ ಬರುವಂತೆ ಎಷ್ಟೇ ಕರೆದರೂ ಬಾರದ ಹಿನ್ನೆಲೆಯಲ್ಲಿ ಜಿಮ್‌ ಟ್ರೈನರ್ ಗಂಡ ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲಿಯೇ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಆದರೆ, ಈತನ ದುರಾದ್ಋಷ್ಟವೋ ಏನೋ, ನೇಣಿನ ಕುಣಿಕೆಗೆ ಕೊರಳೊಡ್ಡಿ ನಾಟಕವಾಡುವ ವೇಳೆ ಕೆಳಗಿನ ಚೇರ್ ತಪ್ಪಿಹೋಗಿ ನೇಣು ಬಿಗಿದು ಸತ್ತೇ ಹೋಗಿದ್ದಾನೆ.

ಹೌದು, ಹೆಂಡತಿ ಹೆಸರಿಸಲು ಹೋಗಿ ದುರಂತ ಸಾವಿಗೀಡಾದ ವ್ಯಕ್ತಿಯನ್ನು ಬಿಹಾರ ಮೂಲದ ಅಮಿತ್ ಕುಮಾರ್ (28) ಎಂದು ಗುರುತಿಸಲಾಗಿದೆ. ಈತ ಮೂಲತಃ ಬಿಹಾರದವನಾಗಿದ್ದು, ಕಳೆದ 10 ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದನು. ಉತ್ತಮ ದೇಹದಾರ್ಢ್ಯತೆ ಹೊಂದಿದ್ದ ಅಮಿತ್ ಜಿಮ್ ಟ್ರೈನರ್ ಆಗಿದ್ದನು. ಇನ್ನು ಜಿಮ್ ಮಾಡುತ್ತಲೇ ತಾನು ಕೆಲಸ ಮಾಡುತ್ತಿದ್ದ ಜಿಮ್‌ನ ಬಳಿಯಿದ್ದ ಮನೆಯ ಹುಡುಗಿಯನ್ನು ಪ್ರೀತಿಸಿದ್ದನು. ಕಳೆದ ವರ್ಷ ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಇತ್ತೀಚೆಗೆ ಸಂಸಾರದ ಬಂಡಿ ಹಳಿ ತಪ್ಪಿತ್ತು.

ಬೆಂಗಳೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಗಿಣಿಯಂತೆ ಸಾಕಿದ್ದ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ-ತಾಯಿ

ಅಮಿತ್ ಜಿಮ್ ಟ್ರೈನಿಂಗ್‌ನಿಂದ ಉತ್ತಮ ಸಂಪಾದನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರೂ ಆತನ ಹೆಂಡತಿ ಕೂಡ ಮನೆಯಲ್ಲಿರದೇ ಏನಾದರೂ ಮಾಡಬೇಕು ಎಂಬ ತವಕದಲ್ಲಿದ್ದಳು. ಹೀಗಾಗಿ, ಅಮಿತ್ ತನ್ನ ಹೆಂಡತಿಯಲ್ಲಿ ನರ್ಸಿಂಗ್ ಕೋರ್ಸ್ ಮಾಡಿಸಲು ದಾಖಲು ಮಾಡಿದ್ದನು. ಆದರೆ, ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ಪತಿಗೆ ಹೆಚ್ಚಿನ ಸಮಯ ನೀಡುತ್ತಿರಲಿಲ್ಲ. ಜೊತೆಗೆ, ಪತ್ನಿ ಹೆಚ್ಚಿನ ಸಮಯವನ್ನು ಫೋನಿನಲ್ಲಿ ಮಾತನಾಡುವುದು ಹಾಗೂ ಚಾಟಿಂಗ್‌ನಲ್ಲಿಯೇ ಕಳೆಯುತ್ತಿದ್ದಳು. ಯಾರ ಬಳಿ ಮಾತನಾಡುತ್ತೀಯ ಎಂದು ಕೇಳಿದರೆ ಫ್ರೆಂಡ್ಸ್ ಎಂದು ಹೇಳುತ್ತಿದ್ದಳು.

ತಾನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರೂ ತನಗೆ ಸಮಯ ಕೊಡದೇ ಫೋನಿನಲ್ಲಿ ಬ್ಯೂಸಿ ಇರುತ್ತಿದ್ದ ಹೆಂಡತಿಯೊಂದಿಗೆ ಆಗಿಂದಾಗ್ಗೆ ಜಗಳ ಮಾಡಿಕೊಂಡಿದ್ದಾನೆ. ಇನ್ನು ಗಂಡ ತನಗೆ ಕಿರುಕುಳ ಕೊಡ್ತಾನೆ ಎಂದೇಳಿ ಪತ್ನಿ ಈತನನ್ನು ತೊರೆದು ಬೇರೊಂದು ಮನೆಯಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದಳು. ಆದರೆ, ಹೆಂಡತಿ ಇಲ್ಲದೇ ಬೇಸತ್ತಿದ್ದ ಅಮಿತ್ ಮನೆಗೆ ವಾಪಸ್ ಬರುವಂತೆ ಗೋಗರೆದಿದ್ದಾನೆ. ಬೆದರಿಕೆಯನ್ನೂ ಹಾಕಿದ್ದಾನೆ. ಒಂದು ಹೆಜ್ಜೆ ಮುಂದೆ ಹೋಗಿ ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲಿ ನೀನು ಬಾರದಿದ್ದರೆ ಸತ್ತು ಹೋಗ್ತೇನೆ ಎಂದು ನಾಟಕ ಮಾಡುತ್ತಿದ್ದ ಅಮಿತ್ ನೇಣಿನ ಕುಣಿಕೆಯೊಳಗೆ ಕೊರಳೊಡ್ಡಿ ಹೆದರಿಸುತ್ತಿದ್ದನು.

ಹಾಸನದಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

ಆತನ ಹಣೆಬರದಲ್ಲಿ ಇಷ್ಟೇ ಜೀವಿತಾವಧಿ ಎಂದು ಬರೆದಿತ್ತು ಎನಿಸುತ್ತದೆ. ನೇಣು ಕುಣಿಕೆಯೊಳಗೆ ಕೊರಳೊಡ್ಡಿದಾಗ ತಾನು ನಿಂತಿದ್ದ ಚೇರಿನ ಬ್ಯಾಲೆನ್ಸ್ ತಪ್ಪಿ ಕುಣಿಕೆ ಬಿಗಿಯಾಗಿದೆ. ಆತ ಹಿಡಿದುಕೊಂಡಿದ್ದ ಫೋನ್ ಕೆಳಗೆ ಬಿದ್ದಿದೆ. ಅಲ್ಲಿ ಏನಾಗುತ್ತಿದೆ, ಏನೋ ಅವಘಡ ನಡೆಯಬಾರದ್ದು ನಡೆದಿದೆ ಎಂದು ಹೆಂಡ್ತಿ ಕೂಗುತ್ತಿರುವಾಗಲೇ ಅಮಿತ್ ಸಾವನ್ನಪ್ಪಿದ್ದಾನೆ. ನರ್ಸಿಂಗ್ ಮಾಡುತ್ತಿದ್ದ ಪತ್ನಿ ಗಂಡನನ್ನು ನೋಡಲು ಬಾಗಲಗುಂಟೆ ಮನೆಗೆ ಬಂದು ನೋಡಿದರೆ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಹೆಣವಾಗಿದ್ದನು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಗಲಗುಂಟೆ ಠಾಣೆ ಪೊಲೀಸರು ಬಂದು ಸ್ಥಳ ಭೇಟಿ ಮಾಡಿ ಪರಿಶೀಲಿಸಿದ್ದಾರೆ. ನಂತರ, ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳಿಹಿಸಿದ್ದು, ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios