ಅಸಹಿಷ್ಣುತೆ ಕೇವಲ ಟಿವಿಯಲ್ಲಿ ಮಾತ್ರ ಇದೆ: ಸದ್ಗುರು

ಕಳೆದೊಂದು ದಶಕದಿಂದ ದೇಶದಲ್ಲಿ ಅಂತಹ ಯಾವುದೇ ದೊಡ್ಡ ಕೋಮು ಸಂಘರ್ಷಗಳು ನಡೆದಿಲ್ಲ. ಕೇವಲ ಟಿವಿ ಸ್ಟುಡಿಯೋಗಳಲ್ಲಿ ಮಾತ್ರ ಅಸಹಿಷ್ಣುತೆ ಇದೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಟಿವಿ ಚಾನೆಲ್‌ಗಳು ಉತ್ಪೇಕ್ಷೆ ಮಾಡುತ್ತಿವೆ ಎಂದು ಇಶಾ ಫೌಂಡೇಶನ್‌ ಸಂಸ್ಥಾಪಕ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಹೇಳಿದ್ದಾರೆ.

religious intolerance only in tv sadhguru jaggi vasudev akb

ಕಳೆದೊಂದು ದಶಕದಿಂದ ದೇಶದಲ್ಲಿ ಅಂತಹ ಯಾವುದೇ ದೊಡ್ಡ ಕೋಮು ಸಂಘರ್ಷಗಳು ನಡೆದಿಲ್ಲ. ಕೇವಲ ಟಿವಿ ಸ್ಟುಡಿಯೋಗಳಲ್ಲಿ ಮಾತ್ರ ಅಸಹಿಷ್ಣುತೆ ಇದೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಟಿವಿ ಚಾನೆಲ್‌ಗಳು ಉತ್ಪೇಕ್ಷೆ ಮಾಡುತ್ತಿವೆ ಎಂದು ಇಶಾ ಫೌಂಡೇಶನ್‌ ಸಂಸ್ಥಾಪಕ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಹೇಳಿದ್ದಾರೆ. ಸುದ್ದಿಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತನ್ನ ಕಾಲೇಜು ದಿನಗಳಲ್ಲಿ, ದೇಶದಲ್ಲಿ ದೊಡ್ಡ ಗಲಭೆಗಳು ನಡೆದಿದ್ದವು. ಆದರೆ ಕಳೆದ 10 ವರ್ಷಗಳಿಂದ ದೇಶದಲ್ಲಿ ಯಾವುದೇ ಪ್ರಮುಖ ಕೋಮು ಗಲಭೆಗಳು ನಡೆದಿಲ್ಲ ಎಂದು ಹೇಳಿದ್ದಾರೆ. 

ಮಣ್ಣು ಉಳಿಸಿ ಎಂಬ ಅಭಿಯಾನವನ್ನು ಆರಂಭಿಸಿದ ಸದ್ಗುರು ಜಗ್ಗಿ ವಾಸುದೇವ್‌ 27 ದೇಶಗಳಲ್ಲಿ ಏಕಾಂಗಿಯಾಗಿ ಸುಮಾರು 30 ಸಾವಿರ ಕಿಲೋ ಮೀಟರ್ ಅನ್ನು ಕ್ರಮಿಸಿ ಇತ್ತೀಚೆಗಷ್ಟೇ ಭಾರತಕ್ಕೆ ಆಗಮಿಸಿದ್ದರು. ನಾವು ಇರುವ ವಿಚಾರವನ್ನು ಹೆಚ್ಚು ಉತ್ಪ್ರೇಕ್ಷೆ ಮಾಡುತ್ತಿದ್ದೇವೆ. ಕೆಲವು ವಿಚಾರಗಳು ಚರ್ಚೆಗೆ ಬರಬೇಕಿದೆ. ಆದರೆ ಟಿವಿ ಚಾನೆಲ್‌ಗಳಲ್ಲಿ ಕಾಣ ಬರುವಂತಹ ಸ್ಥಿತಿ ಇತರ ಬೀದಿಗಳಲ್ಲಿ ಇಲ್ಲ. ನೀವು ದೆಹಲಿಯಲ್ಲೇ ಹೋಗಿ ಅಥವಾ ದೇಶದ ಇತರ ಭಾಗದ ನಗರಗಳಿಗೆ ಭೇಟಿ ನೀಡಿ, ಆದರೆ ಅಲ್ಲೆಲ್ಲೂ ನೀವು ಆ ರೀತಿಯ ಕೋಮು ಸಂಘರ್ಷ ಅಸಹಿಸ್ಣುತೆ ಕಾಣಲು ಸಾಧ್ಯವಿಲ್ಲ. 

ಕಳೆದ 25 ವರ್ಷದಲ್ಲಿ 10% ಭೂಮಿ ಮರುಭೂಮಿಯಾಗಿದೆ: ಸದ್ಗುರು

ಧರ್ಮಕ್ಕೆ ಸಂಬಂಧಿಸಿದಂತೆ ವಿವಾದವನ್ನು ಟಿವಿ ಚಾನೆಲ್‌ಗಳಲ್ಲಾಗಲಿ, ಅಥವಾ ಇತರ ವೇದಿಕೆಗಳಲ್ಲಾಗಲಿ  ಉತ್ಪ್ರೇಕ್ಷೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ವರದಿಯಾದ ಹಿಂಸಾತ್ಮಕ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು  ಸದ್ಗುರುಗಳ ಈ ಮಾತು ಬಂದಿದೆ. ಇತ್ತೀಚೆಗೆ, ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ (Antony Blinken) ಅವರು ಭಾರತದಲ್ಲಿ ಪೂಜಾ ಸ್ಥಳಗಳಲ್ಲಿ ಜನರ ಮೇಲೆ ದಾಳಿ ಹೆಚ್ಚುತ್ತಿದೆ ಎಂದಿದ್ದರು. 

Save Soil ಮಣ್ಣು ಸಂರಕ್ಷಣೆ ನಮ್ಮ ಬದ್ಧತೆ, ಮೋದಿ ಬೆಂಬಲದಿಂದ ಹೊಸ ಹುರುಪು, ಸದ್ಗುರು!

ತಮ್ಮ ಕಾಲೇಜು ದಿನಗಳಲ್ಲಿ ಕೋಮು ಸಂಘರ್ಷಗಳು ಸಾಮಾನ್ಯವಾಗಿದ್ದವು ಎಂಬುದನ್ನು ಹೇಳಿದ ಅವರು ಆದರೆ ಕಳೆದ 25 ವರ್ಷಗಳಲ್ಲಿ ಕೋಮು ಹಿಂಸಾಚಾರ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ವಿಶ್ವವಿದ್ಯಾನಿಲಯದಲ್ಲಿದ್ದಾಗ, ದೇಶದಲ್ಲಿ ಯಾವುದೇ ದೊಡ್ಡ ಕೋಮುಗಲಭೆ ನಡೆಯದ ಒಂದೇ ಒಂದು ವರ್ಷ ಇರಲಿಲ್ಲ. ಪ್ರತಿ ವರ್ಷ, ಎಲ್ಲೋ, ಪ್ರಮುಖ (ಗಲಭೆಗಳು) ನಡೆಯುತ್ತಿದ್ದವು. ಆದರೆ ನಾನು 5-6 ವರ್ಷಗಳಲ್ಲಿ ಅಥವಾ ಬಹುಶಃ 10 ವರ್ಷಗಳಲ್ಲಿ (ಕೋಮು ಹಿಂಸಾಚಾರದ) ಬಗ್ಗೆ ಕೇಳಿಲ್ಲ. ದುರದೃಷ್ಟವಶಾತ್ ಕೆಲವು ಸಣ್ಣಸಣ್ಣ ಗಲಾಟೆಗಳು ನಡೆಯುತ್ತವೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios