ಅಪಘಾತ ಸಂತ್ರಸ್ತ ಕುಟುಂಬಕ್ಕೆ 6 ತಿಂಗಳು ಉಚಿತ ಪಡಿತರ, ಉದ್ಯೋಗ; ರಿಲಯನ್ಸ್ 10 ಪರಿಹಾರ ಘೋಷಣೆ!
ರೈಲು ದುರಂತ ಸಂತ್ರಸ್ಥ ಕುಟುಂಬಳಿಗೆ 6 ತಿಂಗಳ ಎಲ್ಲಾ ಅಡುಗೆ ಪಡಿತರ ಉಚಿತ, ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ, ಮಹಿಳೆಯರಿಗೆ ಕಿರುಬಂಡವಾಳ, ದುಃಖಿತರ ಕುಟುಂಬದ ಸದಸ್ಯರಿಗೆ ಉಚಿತ ಮೊಬೈಲ್ ಸಂಪರ್ಕ ಸೇರಿದತೆ ಒಡಿಶಾ ರೈಲು ದುರಂತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ 10 ಪರಿಹಾರ ಘೋಷಿಸಿದೆ.
ಮುಂಬೈ(ಜೂ.05): ಒಡಿಶಾ ರೈಲು ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ. ಸಾವು ನೋವುಗಳ ಸಂಖ್ಯೆ ಮನಸ್ಸು ಕದಡುವಂತಿದೆ. ಆಪ್ತರನ್ನು ಕಳೆದುಕೊಂಡ ಆಕ್ರಂದ ಮುಗಿಲು ಮುಟ್ಟಿದೆ. ಇತ್ತ ಸಾವು ಬದುಕಿನ ನಡುವೆ ಹಲವು ಜೀವಗಳ ಹೋರಾಟ. ಹೀಗೆ ಎಲ್ಲೆಡೆ ನೋವು ಮಡುಗಟ್ಟಿದೆ. ಇದರ ನಡುವೆ ಹಲವು ಸಂಸ್ಥೆಗಳು ರೈಲು ದುರಂತದ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದೆ. ಇದೀಗ ರಿಲಯನ್ಸ್ ಫೌಂಡೇಷನ್ ವಿಪತ್ತು ನಿರ್ವಹಣಾ ತಂಡ ನಿಯೋಜನೆ ಜೊತೆಗೆ 10 ಪರಿಹಾರವನ್ನು ಘೋಷಿಸಿದೆ.
ರಿಲಯನ್ಸ್ ಫೌಂಡೇಷನ ವಿಶೇಷ ವಿಪತ್ತು ನಿರ್ವಹಣಾ ತಂಡವನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಈ ತಂಡವು ದಿನದ ಇಪ್ಪತ್ನಾಲ್ಕು ಗಂಟೆಯೂ ಗಾಯಾಳುಗಳಿಗೆ ಅಗತ್ಯ ಇರುವಂಥ ನೆರವು ಹಾಗೂ ಸಹಾಯವನ್ನು ಒದಗಿಸುತ್ತಿದೆ. ಇಂಥ ಘೋರ ದುರಂತದ ಸಂತ್ರಸ್ತರ ನೋವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುವ ಶಕ್ತಿ ನಮಗಿಲ್ಲ. ಆದರೆ ದುಃಖಿತ ಕುಟುಂಬಗಳ ಭವಿಷ್ಯಕ್ಕಾಗಿ ಅಗತ್ಯವಾದದ್ದನ್ನು ಮಾಡುವುದಕ್ಕೆ ಬದ್ಧರಾಗಿದ್ದೇವೆ. ಇದಕ್ಕಾಗಿಯೇ ಹತ್ತು ಅಂಶದ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ ಎಂದು ಫೌಂಡೇಷನ್ ನ ಸಂಸ್ಥಾಪಕಿ ನೀತಾ ಅಂಬಾನಿ ಹೇಳಿದ್ದಾರೆ.
ಒಡಿಶಾ ರೈಲು ದುರಂತ, ಆ್ಯಂಬುಲೆನ್ಸ್‌ನಲ್ಲಿ 230 ಕಿ.ಮೀ ತೆರಳಿ ಶವಗಾರದಲ್ಲಿ ಬಿಸಾಕಿದ್ದ ಮಗನ ಉಳಿಸಿದ ತಂದೆ!
ರಿಲಯನ್ಸ್ ಫೌಂಡೇಷನ್ ಹತ್ತು ಪರಿಹಾರ ಘೋಷಿಸಿದೆ
1. ವಿಪತ್ತನ್ನು ನಿಭಾಯಿಸುವ ಆಂಬ್ಯುಲೆನ್ಸ್‌ಗಳಿಗೆ ಜಿಯೋ-ಬ್ರಿಟಿಷ್ ಪೆಟ್ರೋಲಿಯಂ ಜಾಲದ ಮೂಲಕ ಉಚಿತ ಇಂಧನ.
2. ರಿಲಯನ್ಸ್ ಸ್ಟೋರ್‌ಗಳ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಮುಂದಿನ ಆರು ತಿಂಗಳವರೆಗೆ ಹಿಟ್ಟು, ಸಕ್ಕರೆ, ಬೇಳೆ, ಅಕ್ಕಿ, ಉಪ್ಪು ಮತ್ತು ಅಡುಗೆ ಎಣ್ಣೆ ಸೇರಿದಂತೆ ಉಚಿತ ಪಡಿತರ ಸರಬರಾಜು
3. ಗಾಯಗೊಂಡವರಿಗೆ ಅವರ ತಕ್ಷಣದ ಚೇತರಿಕೆ ಅಗತ್ಯಗಳನ್ನು ಬೆಂಬಲಿಸಲು ಉಚಿತ ಔಷಧಗಳು; ಆಸ್ಪತ್ರೆಯ ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆ.
4. ಭಾವನಾತ್ಮಕ ಮತ್ತು ಮಾನಸಿಕ ಬೆಂಬಲಕ್ಕಾಗಿ ಸಮಾಲೋಚನೆ ಸೇವೆಗಳು.
5. ಅಗತ್ಯದ ಆಧಾರದ ಮೇಲೆ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಜಿಯೋ ಮತ್ತು ರಿಲಯನ್ಸ್ ರೀಟೇಲ್ ಮೂಲಕ ಉದ್ಯೋಗಾವಕಾಶ
6. ಗಾಲಿಕುರ್ಚಿಗಳು, ಕೃತಕ ಅಂಗಗಳು ಸೇರಿದಂತೆ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಬೆಂಬಲ, ಸಹಾಯ
7. ಹೊಸ ಉದ್ಯೋಗಾವಕಾಶಗಳನ್ನು ಹುಡುಕಲು ವಿಶೇಷ ಕೌಶಲ ತರಬೇತಿ
8. ಕುಟುಂಬದಲ್ಲಿ ದುಡಿಯುತ್ತಿದ್ದ ಒಬ್ಬರೇ ಸದಸ್ಯರನ್ನು ಕಳೆದುಕೊಂಡವರಿದ್ದಲ್ಲಿ ಮಹಿಳೆಯರಿಗೆ ಕಿರುಬಂಡವಾಳ ಮತ್ತು ತರಬೇತಿ ಅವಕಾಶಗಳು
9. ಅಪಘಾತಕ್ಕೆ ಈಡಾದ ಗ್ರಾಮೀಣ ಕುಟುಂಬಗಳಿಗೆ ಪರ್ಯಾಯ ಜೀವನೋಪಾಯಕ್ಕಾಗಿ ಹಸು, ಎಮ್ಮೆ, ಮೇಕೆ, ಕೋಳಿ ಮುಂತಾದ ಜಾನುವಾರುಗಳನ್ನು ಒದಗಿಸುವುದು
10. ವಿಪತ್ತಿಗೆ ಗುರಿಯಾದವರ ಜೀವನೋಪಾಯ ಮತ್ತೆ ಸಾಗುವುದಕ್ಕೆ ಒಂದು ವರ್ಷದವರೆಗೆ ದುಃಖಿತರ ಕುಟುಂಬದ ಸದಸ್ಯರಿಗೆ ಉಚಿತ ಮೊಬೈಲ್ ಸಂಪರ್ಕ.
ಒಡಿಶಾ ತ್ರಿವಳಿ ರೈಲು ದುರಂತ: ತುಂಬಿ ತುಳುಕುತ್ತಿರುವ ಶವಾಗಾರಗಳು: ಮೃತರ ಗುರುತು ಪತ್ತೆ ಆಗದೆ ಸಂಕಟ
ಅಪಘಾತ ಸಂಭವಿಸಿದಾಗಿನಿಂದ ಬಾಲಸೋರ್‌ನಲ್ಲಿ ರಿಲಯನ್ಸ್ ಫೌಂಡೇಷನ್‌ನ ವಿಶೇಷ ವಿಪತ್ತು ನಿರ್ವಹಣಾ ತಂಡವು ತುರ್ತು ವಿಭಾಗ, ಕಲೆಕ್ಟರೇಟ್, ಬಾಲಸೋರ್ ಮತ್ತು ರಾಷ್ಟ್ರೀಯ ವಿಪತ್ತು ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಅಪಘಾತದ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಮತ್ತು ಇತರ ಸಿಬ್ಬಂದಿಗೆ ಅಗತ್ಯವಿರುವ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಊಟವನ್ನು ಒದಗಿಸಹಿದೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು.