ಡೆಲ್ಲಿ ಮಂಜು

ನವದೆಹಲಿ(ಅ.22): ಕೋವಿಡ್-19 ನಿಯಂತ್ರಣ ಹೆಸರಿನಲ್ಲಿ ಆಗಿರುವ ಮಹಾ ಯಡವಟ್ಟುಗಳೇ ಕರ್ನಾಟಕದಲ್ಲಿ ಸೋಂಕು ಹೆಚ್ಚಲು ಕಾರಣ- ಹೀಗಂಥ ಕೇಂದ್ರ ತಂಡ ಸ್ಪಷ್ಟವಾಗಿ ರಾಜ್ಯಸರ್ಕಾರಕ್ಕೆ ಹೇಳಿದೆ.

ಕೋವಿಡ್-19 ಸೋಂಕು ಪ್ರಕರಣಗಳು ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ಮತ್ತು ಕೇಂದ್ರದ ಸೂಚನೆಗಳನ್ನು ಸರಿಯಾಗಿ ಪಾಲನೆಯಾಗಿದೆಯೇ ಇಲ್ಲವೇ ಅಂಥ ಪರಿಶೀಲನೆ ಮಾಡಲು ಕರ್ನಾಟಕಕ್ಕೆ ಮೂರು ದಿನಗಳು ಭೇಟಿಗಾಗಿ ಕೇಂದ್ರ ತಂಡ ಬಂದಿತ್ತು. ಪ್ರಮುಖವಾಗಿ ಬೆಂಗಳೂರು, ಕಲಬುರಗಿ ಹಾಗು ಬಳ್ಳಾರಿ ಜಿಲ್ಲೆಗಳಿಗೆ ಭೇಟಿ ನೀಡಿ, ರಾಜ್ಯ ಸರ್ಕಾರದ ಕ್ರಮಗಳನ್ನು ಪರಿಶೀಲನೆ ಮಾಡಿತು. ಹತ್ತಾರು ಲೋಪಗಳನ್ನು ಹುಡುಕಿದ ಕೇಂದ್ರ ತಂಡ, ಹತ್ತಾರು ಸಲಹೆಗಳನ್ನು ಕೊಟ್ಟು, ವ್ಯವಸ್ಥೆ ರಿಪೇರಿ ಮಾಡಿಕೊಳ್ಳಿ ಅಂತ ಖಾರವಾಗಿ ಹೇಳಿ ಬಂದಿದೆ.

ಕೊರೋನಾ ನಡುವೆ ಕಾಲೇಜು ಆರಂಭ; ಡೇಟ್ ಕೊಟ್ಟ ಉನ್ನತ ಶಿಕ್ಷಣ ಇಲಾಖೆ?

ಯಡವಟ್ಟುಗಳೇನು ?

ಕಂಟೈನ್‍ಮೆಂಟ್ ಜೋನ್ ನಿಯಮ ಬದಲಿಸಿ : 20 ಸೋಂಕಿತರು ಇದ್ದರೇ ಮಾತ್ರ ಅದನ್ನು ಕಂಟೈನ್‍ಮೆಂಟ್ ಜೋನ್ ಅಂಥ ಪರಿಗಣಸಿ, ಕ್ರಮಗಳು ತೆಗೆದುಕೊಳ್ಳುತ್ತಿದ್ದ ಬಿಬಿಎಂಪಿ ಕೆಲಸಕ್ಕೆ ಕೇಂದ್ರ ತಂಡ ಚೀಮಾರಿ ಹಾಕಿದೆ.  ಕಂಟೈನ್‍ಮೆಂಟ್ ಜೋನ್‍ಗಳ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದ್ದು, ಅದರಂತೆ ಕ್ರಮ ಕೈಗೊಳ್ಳಿ ಎಂದಿದೆ.

ಸೋಂಕಿನ ಹರಡುವ ಪ್ರಮಾಣ, ಸೋಂಕು ಆವರಿಸಿಕೊಳ್ಳುತ್ತಿರುವ ಪರಿ, ಸೋಂಕಿತನ ಸ್ಥಿತಿ ಗಮನದಲ್ಲಿ ಇಟ್ಟು ಕಂಟೈನ್‍ಮೆಂಟ್ ಜೋನ್ ನಿರ್ಧರಿಸಬೇಕು. ಇದರ ಹೊಣೆಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, 20 ಸೋಂಕಿತರಿಗಾಗಿ ಕಾಯದೆ, ಎದುರಾಗಿರುವ ಪರಿಸ್ಥಿತಿಗೆ ತಕ್ಕಂತ ನಿಯಮಗಳು ಬದಲಾವಣೆಗಳು ಮಾಡಿಕೊಂಡು ಕಂಟೈನ್‍ಮೆಂಟ್ ಜೋನ್ ನಿರ್ಧಾರ ಮಾಡಿ. ಬದಲಿಗೆ ಹಳೇ ನಿಯಮಗಳಲ್ಲೇ ಮುಂದುವರೆದರೇ ಸೋಂಕು ನಿಯಂತ್ರಣಕ್ಕೆ ಬರೋದಿಲ್ಲ ಎಂದಿದೆ.

ಕೊರೋನಾ ಲಸಿಕೆ ಸ್ವೀಕಾರಕ್ಕೆ ಈ ಐಡಿ ಕಡ್ಡಾಯವೇ..?

ಕರ್ನಾಟಕದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಶೇ.40ರಷ್ಟು ಇವೆ. ಇನ್ನು ಶೇ.60 ರಷ್ಟು ಆಕ್ಟೀವ್ ಕೇಸುಗಳ ಇವೆ. ಇದು ನಿಯಂತ್ರಣಕ್ಕೆ ಬರಬೇಕಾದರೆ ಕೇಂದ್ರದ ನಿಯಮಗಳನ್ನು ಪಾಲಿಸಿ ಎಂದು ತಂಡ ಸೂಚಿಸಿದೆ.

ಡೆತ್ ಆಡಿಟ್‍ನಲ್ಲಿ ಗೊಂದಲ :

ಕೊರೊನಾ ಸಿಮ್ಟಾಮ್ಯಾಟಿಕ್ ಮತ್ತು ಅಸಿಮ್ಟಾಮ್ಯಾಟಿಕ್ ಈ ಎರಡು ಸೋಂಕಿತರ ಸಾವುಗಳು ಕೊರೊನಾ ಸಾವು ಎಂದು ತೀರ್ಮಾನ ಮಾಡಬೇಕಾ ಬೇಡ್ವಾ ? ಅನ್ನೋದೇ ಗೊಂದಲ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಮಾಡಿ ಸಾವಿನ ಲೆಕ್ಕಾ ಹಾಕಲಾಗುತ್ತಿದೆ. ಇವೆರಡು ಒಂದೇ ಅಂಥ ಲೆಕ್ಕಾ ಮಾಡುತ್ತಿರುವ ಕಾಣರಕ್ಕೆ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಅನ್ನೋದು ಕರ್ನಾಟಕದ ವಾದ. ಇದನ್ನು ಕೇಂದ್ರದ ನಿಯಮಗಳ ರೀತಿ ಸರಿಪಡಿಸಿಕೊಳ್ಳಿ ಅಂಥ ಕೇಂದ್ರ ತಂಡ ಸೂಚನೆ.

ಕರ್ನಾಟಕದಲ್ಲೂ ಕೂಡ ಡೆತ್ ಆಡಿಟ್ ಮಾಡುವಾಗ ಕೆಲವು ಕಡೆ ಪ್ರತ್ಯೇಕ ಸಾವಿನ ಪ್ರಕರಣಗಳು ಅಂಥ ನೋಡಿದ್ದೂ ಎರಡೂ ಒಂದೇ ಅಂಥ ಸರಿಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಕೊರೋನಾ ಲಸಿಕೆ ಸ್ವೀಕಾರಕ್ಕೆ ಈ ಐಡಿ ಕಡ್ಡಾಯವೇ..?

ಪ್ರೋಟೋಕಾಲ್ ರೂಪಿಸಿ : ಸೋಂಕಿನಿಂದ ಗುಣಮುಖರಾಗಿ ಹೊರಬಂದ ಸೋಂಕಿತರ ಮೇಲಿನ ಆಗುವ ಪರಿಣಾಮಗಳ ಬಗ್ಗೆ ಕುರಿತು ತಿಳಿಯಲು ಹಾಗು ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ಪ್ರೋಟೋಕಾಲ್ ವ್ಯವಸ್ಥೆಯೊಂದನ್ನು ರೂಪಸಿಸಿ ಅಂಥ ಕೇಂದ್ರ ತಂಡ ರಾಜ್ಯಕ್ಕೆ ಸೂಚನೆ ನೀಡಿದೆ.

ಪ್ರೇಮರಿ ಕಾಂಟ್ಯಾಕ್ಟಿಗೆ ಅದ್ಯತೆ ನೀಡಿ : ಸೋಂಕು ಅಥವಾ ಸೋಂಕಿತರ ಪ್ರಮಾಣ ಹೆಚ್ಚಳಾಗಲಿಕ್ಕೆ ಪ್ರಮುಖ ಕಾರಣ ಪ್ರೇಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್‍ಗಳ ಪತ್ತೆ ಹಚ್ಚದಿರುವುದು ಅನ್ನೋ ಅಂಶವನ್ನು ಕೇಂದ್ರ ತಂಡ ಪತ್ತೆ ಹಚ್ಚಿದೆ. ಮೊದಲ ಆದ್ಯತೆಯಾಗಿ ಸೋಂಕಿತರ ಪ್ರೇಮರಿ ಕಾಂಟ್ಯಾಕ್ಟ್‍ಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು ಆಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿದೆ ಅಂಥ ಕೇಂದ್ರ ತಂಡ ತಿಳಿಸಿದೆ.

ಮೂರು ದಿನಗಳ ಕಾಲ, ಮೂವರ ಅಧಿಕಾರಿಗಳ ತಂಡ ಕೋವಿಡ್ ಕೇರ್ ಸೆಂಟರ್, ಕೋವಿಡ್ ಚಿಕಿತ್ಸಾ ಕೇಂದ್ರಗಳು, ಖಾಸಗಿ ಆಸ್ಪತ್ರೆಗಳು, ಕೊರೊನಾಗೆ ಚಿಕಿತ್ಸೆ ನೀಡುವ ಸರ್ಕಾರಿಯ ಕೆಲವು ಆಸ್ಪತ್ರೆಗಳು ಹೀಗೆ ಹಲವು ಕಡೆ ಭೇಟಿ ನೀಡಿದ ಕೇಂದ್ರ ತಂಡ, ಹಲವು ಲೋಪದೋಷಗಳನ್ನು ಪಟ್ಟಿ ಮಾಡಿ ರಾಜ್ಯದ ಮುಖ್ಯಕಾರ್ಯದರ್ಶಿಯವರಿಗೆ ವರದಿ ನೀಡಿ, ಕೇಂದ್ರದ ಸೂಚನೆಗಳನ್ನು ಪಕ್ಕಾ ಪಾಲಿಸುವಂತೆ ಹೇಳಿ ಬಂದಿದೆ.