ನವದೆಹಲಿ (ಅ.22): ದೇಶದ ಪ್ರತಿ ನಾಗರಿಕರಿಗೆ ಕೊರೋನಾ ಲಸಿಕೆ ವಿತರಣೆಗೆ ಡಿಜಿಟಲ್‌ ಆರೋಗ್ಯ ಐಡಿ ಕಾರ್ಡ್‌ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. 

ಇತ್ತೀಚೆಗಷ್ಟೇ ಕೊರೋನಾ ಲಸಿಕೆಯ ವ್ಯವಸ್ಥಿತ ವಿತರಣೆಗಾಗಿ ಡಿಜಿಟಲ್‌ ಆರೋಗ್ಯ ಐಡಿ ಕಾರ್ಡ್‌ ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.

 ಇದರಿಂದ ಹಲವು ಊಹಾಪೋಹ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ, ಪ್ರಸ್ತುತ ಕೊರೋನಾ ಲಸಿಕೆಗೆ ಡಿಜಿಟಲ್‌ ಆರೋಗ್ಯ ಐಡಿ ಅಥವಾ ಕಾರ್ಡ್‌ ಕಡ್ಡಾಯಗೊಳಿಸಿದಲ್ಲಿ ಹಲವರು ಲಸಿಕೆಯಿಂದ ವಂಚಿತರಾಗಲಿದ್ದಾರೆ. 

ಕೊರೋನಾ ಅಟ್ಟಹಾಸ: ಮಾಸ್ಕ್‌ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾರೀ ಸ್ಪಂದನೆ ...

ಹೀಗಾಗಿ ಚುನಾವಣೆಯಲ್ಲಿ ಯಾವುದೇ ದಾಖಲೆ ತೋರಿಸಿ ಮತದಾನ ಮಾಡುವ ರೀತಿಯಲ್ಲೇ ಯಾವುದೇ ದಾಖಲೆ ತೋರಿಸಿ ಲಸಿಕೆ ಪಡೆಯಬಹುದು. ಇದರಿಂದ ಯಾರೊಬ್ಬರೂ ಲಸಿಕೆಯಿಂದ ವಂಚಿತರಾಗಲ್ಲ ಎಂದಿದೆ.