ಬೆಂಗಳೂರು(ಅ. 22)  ನವೆಂಬರ್ ನಲ್ಲಿ ಯುಜಿ ಹಾಗೂ ಪಿಜಿ ಕಾಲೇಜು ಪ್ರಾರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ನವೆಂಬರ್ ಎರಡನೇ ವಾರದಲ್ಲಿ ಕಾಲೇಜು ಪ್ರಾರಂಭ ಬಹುತೇಕ ಪಕ್ಕಾ ಆಗಿದೆ. ಸುವರ್ಣ ನ್ಯೂಸ್ ಗೆ ಉನ್ನತ ಶಿಕ್ಷಣ ಇಲಾಖೆ ಮೂಲಗಳು ಈ ವಿವರ ನೀಡಿವೆ.

"

ಕಾಲೇಜು ಪ್ರಾರಂಭದ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯಕ್ತರಿಂದ  ಸಮಗ್ರ ವರದಿ ಸಲ್ಲಿಕೆಯಾಗಿದೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ವರದಿ ಸಲ್ಲಿಕೆಯಾಗಿದ್ದು ಸರ್ಕಾರದ ಮುಂದಿದೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ನೇತೃತ್ವದಲ್ಲಿ ವರದಿ ನೀಡಲಾಗಿದೆ.

ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಬಿಗ್ ಗಿಫ್ಟ್ 

ಕಾಲೇಜು ಪ್ರಾರಂಭಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಯಿಂದ ‌ ಉನ್ನತ ಶಿಕ್ಷಣ ಸಚಿವ  ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮಾಹಿತಿ ಪಡೆದುಕೊಂಡಿದ್ದಾರೆ ಕಾಲೇಜು ಪ್ರಾರಂಭಕ್ಕೂ ಮುನ್ನ ಕೋವಿಡ್ ಮಾರ್ಗಸೂಚಿ ಅಳವಡಿಕೆ ಕಡ್ಡಾಯವಾಗಿರುತ್ತದೆ. ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್, ‌ಹಾಗೂ ಮಾಸ್ಕ್  ಬಳಕೆ ಮಾಡಬೇಕು ಎಂದು ತಿಳಿಸಿಲಾಗುತ್ತದೆ.