Asianet Suvarna News Asianet Suvarna News

ಶಾಲಾ ಆವರಣದಲ್ಲೇ ಗಲಾಟೆ : ಬ್ಲೇಡ್‌ನಿಂದ ಬಾಲಕಿಯ ಕೆನ್ನೆ ಕುಯ್ದ ಸಹಪಾಠಿಗಳು

ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಕಿತ್ತಾಟ ನಡೆದು ವಿದ್ಯಾರ್ಥಿನಿಯೋರ್ವಳ ಕೆನ್ನೆ ಮೇಲೆ ಬ್ಲೇಡ್‌ನಿಂದ ಕುಯ್ದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, ಪೋಷಕರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಪೋಷಕರನ್ನು ಆತಂಕಕ್ಕೀಡು ಮಾಡಿದೆ.

School girl Attacked by blade from another girl in school premises at national Capital Akb
Author
First Published May 1, 2024, 3:02 PM IST

ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಕಿತ್ತಾಟ ನಡೆದು ವಿದ್ಯಾರ್ಥಿನಿಯೋರ್ವಳ ಕೆನ್ನೆ ಮೇಲೆ ಬ್ಲೇಡ್‌ನಿಂದ ಕುಯ್ದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, ಪೋಷಕರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಪೋಷಕರನ್ನು ಆತಂಕಕ್ಕೀಡು ಮಾಡಿದೆ. ದೆಹಲಿಯ ಗುಲಾಬಿ ಬಾಘ್ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳಪಡುವಂತೆ ಆಗಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಶಾಲಾ ಆಡಳಿತಕ್ಕೆ ಸ್ಥಳೀಯಾಡಳಿತ ಸೂಚನೆ ನೀಡಿದೆ. 

ವೈರಲ್ ಆಗಿರುವ ವೀಡಿಯೋದಲ್ಲಿ ಶಾಲೆಯ ಆವರಣದಲ್ಲಿ ಸಮವಸ್ತ್ರದಲ್ಲಿರುವ ಮಕ್ಕಳ ಮಧ್ಯೆ ಮೊದಲಿಗೆ ಬಾಯ್ಮಾತಿನಲ್ಲೇ ಕಿತ್ತಾಟ ನಡೆದಿದ್ದು, ಬಳಿಕ ಕೈ ಕೈ ಮಿಲಾಯಿಸಿದ್ದು, ನೂಕಾಟ ತಳ್ಳಾಟ ನಡೆದಿದೆ. ಸ್ವಲ್ಪ ಹೊತ್ತಿನಲ್ಲೇ ಒರ್ವ ಬಾಲಕಿಯ ಕೆನ್ನೆಯಲ್ಲಿ ರಕ್ತ ಸೋರುತ್ತಿದ್ದು, ಬ್ಲೇಡ್‌ನಲ್ಲಿ ಗೀರಿರುವಂತೆ ಕಾಣಿಸುತ್ತಿದೆ.  ಮಕ್ಕಳೆಲ್ಲರೂ ಜೊತೆಯಿರುವಾಗಲೇ ಈ ಹೊಡೆದಾಟ ನಡೆದಿದ್ದು, ಯಾರು ಜಗಳ ಬಿಡಿಸುವುದಕ್ಕೆ ಹೋಗಿಲ್ಲ.

ಕಲಾಸಿಪಾಳ್ಯ ಮರ್ಡರ್: ಬ್ಲೇಡ್‌ನಿಂದ ಕತ್ತುಕೊಯ್ದು ತರಕಾರಿ ಮೂಟೆಯಲ್ಲಿ ತುಂಬಿಟ್ಟು ಹೋದ ಕಿರಾತಕ

ಗುಲಾಬು ಬಾಗ್‌ನಲ್ಲಿರುವ ಸರ್ವೋದಯ  ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಆದರೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೋಷಕರಲ್ಲಿ ಆತಂಕ ವ್ಯಕ್ತವಾಗಿದೆ.  ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಈ ವೀಡಿಯೋವನ್ನು ವಾಯುವ್ಯ ಡಿಸಿಪಿ ಹಾಗೂ ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದು,  ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.  ಅಲ್ಲದೇ ಕೆಲವರು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಆದರೆ ಈ ಘಟನೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ.

Kolar: ಪ್ರೀತಿ ನಿರಾಕರಿಸಿದ ಯುವತಿಗೆ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದ ಪಾಗಲ್‌ ಪ್ರೇಮಿ!

 

Latest Videos
Follow Us:
Download App:
  • android
  • ios