ನವದೆಹಲಿ(ಜೂ.05): ಚೀನಾದ ವುಹಾನ್‌ನಿಂದ ಕೊರೋನಾ ವೈರಸ್ ವಿಶ್ವದೆಲ್ಲಡೆ ಹಬ್ಬದ ಬೆನ್ನಲ್ಲೇ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ಚೀನಾ ವಿರುದ್ಧ ತೊಡೆ ತಟ್ಟಿ ನಿಂತಿದೆ. ಚೀನಾ ಜೊತೆಗಿನ ಎಲ್ಲಾ ವ್ಯವಹಾರ ಒಂದೊರ ಮೇಲೊಂದರಂತೆ ಸ್ಥಗಿತಗೊಳ್ಳುತ್ತಿದೆ. ಇತ್ತ ಭಾರತ ಹಾಗೂ ಅಮೆರಿಕಾ ಹಿಂದೆಂದಿಗಿಂತಲೂ ಆತ್ಮೀಯವಾಗಿದೆ. ಇಷ್ಟೇ ಅಲ್ಲ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇದು ಚೀನಾಗೆ ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಗಡಿಯಲ್ಲಿ ಭಾರತದ ಕಾಮಗಾರಿಗೆ ಹೆಸರಿನಲ್ಲಿ ಚೀನಾ ಅತೀಕ್ರಮ ಪ್ರವೇಶ ಮಾಡುತ್ತಿದೆ. ಭಾರತ-ಚೀನಾ  ಗಡಿ ಬಿಕ್ಕಟ್ಟಿನ ಹಿಂದೆ ಅಮೆರಿಕಾದ ಆತ್ಮೀಯತೆಯೂ ಕಾರಣ ಅನ್ನೋದು ಭಾರತದ ಮಾಜಿ ರಾಜತಾಂತ್ರಿಕ ಅಧಿಕಾರಿ ಪಂಚೋಕ್ ಸ್ಟೋಬ್ದನ್ ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್‌ ಮಧ್ಯಸ್ಥಿಕೆಗೆ ಭಾರತ ಬೆನ್ನಲ್ಲೇ ಚೀನಾ ಕೂಡ ವಿರೋಧ!

ಭಾರತೀಯ ಮತ್ತು ಚೀನೀ ಪಡೆಗಳು ಹಿಮಾಲಯದ ಹಿಮನದಿಯ ಸರೋವರದ ಮೂಲಕ   ಗಡಿಯನ್ನು ಹಂಚಿಕೊಂಡಿದೆ.   14,000 ಅಡಿ (4,270 ಮೀಟರ್) ಎತ್ತರದಲ್ಲಿ,  ವಿಶ್ವದ ಅತೀ ಹೆಚ್ಚು  ಜನಸಂಖ್ಯೆ ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಸಂಘರ್ಷ ನಡೆಯುತ್ತಿದೆ.  ಪ್ಯಾಂಗೊಂಗ್ ತ್ಸೂ ಸರೋವರದ ತೀರದಲ್ಲಿ ಭಾರತದ ರಸ್ತೆ ನಿರ್ಮಾಣ ಚೀನಾಗೆ ಯಾವ ನಷ್ಟವೂ ಇಲ್ಲ. ಆತಂಕವೂ ಇಲ್ಲ. ಆದರೆ ಚೀನಾ ಸಮಸ್ಯೆ ಅದಲ್ಲ. ಕೊರೋನಾ ವೈರಸ್‌ನಿಂದ ಚೀನಾ ಬಹುತೇಕ ರಾಷ್ಟ್ರಗಳ ಜೊತೆಗಿನ ಸಂಬಂಧಕ್ಕೆ ಸ್ವತಃ ಹುಳಿ ಹಿಂಡಿದೆ. ಇಷ್ಟೇ ಅಲ್ಲ ನೆರೆಯ ಭಾರತ, ಅಮೆರಿಕಾದ ಆತ್ಮೀಯನಾಗಿ ಮೆರೆಯುತ್ತಿದೆ. ಇದು ಚೀನಾಗೆ ಇನ್ನಿಲ್ಲದಂತೆ ಕಾಡುತ್ತಿದೆ.

ಚೀನಾ ಕ್ಯಾತೆಗೆ ಸಡ್ಡು ಹೊಡೆದ ಭಾರತ; ಮೋದಿ ಮಾಸ್ಟರ್ ಪ್ಲಾನ್‌ಗೆ ಚೀನಾ ತತ್ತರ!

ಕೊರೋನಾ ವೈರಸ್ ಅಪ್ಪಳಿಸದ ಬಳಿಕ ಅಮೆರಿಕ, ಯುರೋಪ್, ಜಪಾನ್, ಆಸ್ಟ್ರೇಲಿಯಾ ಸರ್ಕಾರಗಳು ಚೀನಾ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇತ್ತ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಬಿ ಭಾರತ ಪರಿಕಲ್ಪನೆಯಲ್ಲಿ ವಿದೇಶಿ ವಸ್ತುಗಳಿಗಿಂತ ಭಾರತ, ಇಲ್ಲಿನ ಸ್ಥಳೀಯ ವಸ್ತುಗಳನ್ನು ಬೆಂಬಲಿಸಿ ಎಂದು ಕರೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಚೀನಾ ವಸ್ತುಗಳಿಂದ ದೂರವಿರಲು ಸೂಚಿಸಿದ್ದಾರೆ.  ಇತ್ತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಚೀನಾ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ. ಇದೇ ವೇಳೆ ಪ್ರದಾನಿ ಮೋದಿ ಹಾಗೂ ಟ್ರಂಪ್ ಆತ್ಮೀಯತೆ ಹೆಚ್ಚಾಗಿದೆ. ಇದು ಚೀನಾದ ಕಣ್ಣು ಕಂಪಾಗಿಸಿದೆ. ಭಾರತವು ಅಮೆರಿಕ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ .  ದೀರ್ಘಾವಧಿಯಲ್ಲಿ ಭಾರತಕ್ಕೆ ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ಪಂಚೋಕ್ ಸ್ಟೋಬ್ದನ್ ಹೇಳಿದ್ದಾರೆ.

ಚೀನಾ ವಾಯುನೆಲೆ ವಿಸ್ತರಣೆ, ಯುದ್ಧ ವಿಮಾನ ನಿಯೋಜನೆ!

ಕೋತಿಯನ್ನು ಹೆದರಿಸಲು ಕೋಳಿಯನ್ನು ಕೊಲ್ಲು ಎಂದು ಚೀನಿಯಲ್ಲಿ ಒಂದು ಮಾತಿದೆ. ಇದೇ ರೀತಿ, ಅಮರಿಕವನ್ನು ಹೆದರಿಸಲು ಅಥವಾ ತನ್ನ ನಿಲುವನ್ನು ಸ್ಪಷ್ಟಪಡಿಸಲು ಅಮೆರಿಕಾ ಜೊತೆ ಆತ್ಮೀಯತೆಯಿಂದಿರುವ ಸಣ್ಣ ಶಕ್ತಿಗಳಾಗಿರುವ ಭಾರತ, ಆಸ್ಟ್ರೇಲಿಯಾ ರಾಷ್ಟ್ರಗಳು ಚೀನಾದಿಂದ ರೀತಿಯ ಆಕ್ರಮಣವನ್ನು ನಿರೀಕ್ಷಿಸಬಹುದು. ಇದರಿಂದ ಅಮೆರಿಕ ಭಯಪಡುತ್ತೆ ಎಂದಲ್ಲ. ಆದರೆ ನಷ್ಟ ಭಾರತಕ್ಕೆ ಅನ್ನೋದು ಮರೆಯುವಂತಿಲ್ಲ ಎಂದಿದ್ದಾರೆ.

ಚೀನಾ ಅಧ್ಯಕ್ಷ ಯುದ್ಧ ಕಹಳೆ: ಸನ್ನದ್ಧರಾಗುವಂತೆ ಸೇನೆಗೆ ಜಿನ್‌ಪಿಂಗ್‌ ಸೂಚನೆ!.

ಮೇ 5 ರಂದು ಚೀನಾ ಯೋಧರು, ಭಾರತೀಯ ಯೋಧರ ಜೊತೆ ತಳ್ಳಾಟ-ನೂಕಾಟ ನಡೆಸಿದ್ದಾರೆ. ಬಳಿಕ ಚೀನಾ ಲಡಾಕ್ ಪ್ರಾಂತ್ಯದ 3 ಕಡೆಗಳಲ್ಲಿ ಹೆಚ್ಚುವರಿ ಸೇನೆ, ಯುದ್ದವಿಮಾನ ನಿಯೋಜಿಸಿತ್ತು. ಯೋಧರ ನಡುವಿನ ತಳ್ಳಾಟದ ಮೂಲ ಸ್ಪಷ್ಟವಾಗಿಲ್ಲ. ಗಡಿಯಲ್ಲಿ ಚೀನಾ ನಡೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಇದು ಕೂಡ ಚೀನಾ ಕಣ್ಣು ಕಂಪಾಗಿಸಿತ್ತು. ಕಾರಣ ಚೀನಾ ಆಕ್ರಮಣಶೀಲತೆ ತೋರಿಸಿದಾಗ ಭಾರತ ಮುದುಡಿ ಹಿಂದೆ ಸರಿಯುತ್ತಿತ್ತು ಅನ್ನೋ ವಿಶ್ವಾಸ ಚೀನಾದ್ದಾಗಿತ್ತು. ಆದರೆ ಹಾಗಾಗಲಿಲ್ಲ.

ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್‌ ಬಳಿ ಬಂಕರ್‌ ನಿರ್ಮಾಣ!

ಗಡಿ ಮೂಲಸೌಕರ್ಯ ಕಾರ್ಯಕ್ರಮದ ಭಾಗವಾಗಿರುವ ಲಡಾಖ್‌ನ ಗಾಲ್ವಾನ್ ಸೆಕ್ಟರ್‌ನಲ್ಲಿ ರಸ್ತೆ ಮತ್ತು ಸೇತುವೆಯನ್ನು ಪೂರ್ಣಗೊಳಿಸುವುದರಿಂದ  ಗಡಿಯಲ್ಲಿ  ಉದ್ವಿಘ್ನತೆ  ಸೃಷ್ಟಿಯಾಗಬಹುದು ಎಂದು ಮೋದಿ ಸರ್ಕಾರ ಯೋಜನೆ ಹಾಕಿದಾಗಲೇ ಹೇಳಿತ್ತು.  ಆದರ ಈ ಯೋಜನೆ ಇದು ಯಾವುದೇ ನಿರ್ದಿಷ್ಟ ದೇಶವನ್ನು ಗುರಿಯಾಗಿಸುತ್ತಿಲ್ಲ. ಗಡಿ ಗ್ರಾಮಗಳ ಅಭಿವೃದ್ದಿ,  ಮೂಲಸೌರ್ಯ ನೀಡುವ ಗುರಿ ಹೊಂದಿದೆ ಎಂದು ಮೋದಿ ಸರ್ಕಾರ ಹೇಳಿದೆ.

ಭಾರತ ಹಾಗೂ ಚೀನಾ ಕಮಾಂಡರ್ ಲೆವೆಲ್ ಮಾತುಕತೆಗಳು ವಿಫಲವಾಗಿದೆ.  ಗಡಿಯಲ್ಲಿರುವ ಮಿಲಿಟರಿ ಅಧಿಕಾರಿಗಳು ಜೂನ್ 6 ರಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.  ಚೀನಾ,  ಭಾರತದ ಮೂಲಸೌಕರ್ಯ ಅಭಿವೃದ್ದಿಯನ್ನು ಅತಿಕ್ರಮಣ ಎಂದೇ ಭಾವಿಸಿದೆ.  ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ  ಸ್ಟೇಟಸ್ ಕೂ ಉಲ್ಲಂಘನೆಯಾಗಿದೆ ಎಂದಿದೆ. ಭಾರತದ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದಿದೆ.

ಭಾರತ ಮತ್ತು ಚೀನಾ - ಒಟ್ಟಾಗಿ 2.7 ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಅಂದರೆ ವಿಶ್ವದ ಮೂರನೇ ಒಂದು ಭಾಗದಷ್ಟು ಜನರು ಎರಡು ದೇಶದಲ್ಲಿದ್ದಾರೆ. ಪ್ರತಿಬಾರಿ ಕಾಲು ಕೆರೆದು ಬರುವ ಚೀನಾ 1962 ರಲ್ಲಿ ಭಾರತದ ಮೇಲೆ ಯುದ್ದ ಸಾರಿತ್ತು.  ಈ ವೇಳೆ ಇದ್ದ ವ್ಯವಹಾರ ಸಂಬಂಧಗಳೇ ಬೇರೆ. ಆದರೆ ಇದೀಗ  ಚೀನಾದೊಂದಿ ರಾಜತಾಂತ್ರಿಕ ಸಂಭಂದ ಹೊಂದಿರುವ ಭಾರತ, ಹಲವು ವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿದೆ. ಈ ಮೂಲಕ ಭಾರತದ ಜೊತೆಗೆ ಅಮೆರಿಕ ಬಳಿಕ 2ನೇ ಅತೀ ದೊಡ್ಡ ವ್ಯಾಪಾರ ಪಾಲುದಾರ ಎಂಬ ಖ್ಯಾತಿಗೂ ಪಾತ್ರವಾಗಿದೆ.

ಭಾರತೀಯ ಯೋಧರ ವಶಕ್ಕೆ ಪಡೆದು ಬಿಟ್ಟ ಚೀನಾ ಯೋಧರು! 

ಜಾಗತಿಕ ತಾಪಮಾನ ಕಡಿಮೆ ಮಾಡಲು ಬದಲು ಬೀಜಿಂಗ್  ಹಿಮಾಲಯದ ಗಡಿಗೆ ಹೆಚ್ಚುವರಿ ಸೈನ್ಯ ಮತ್ತು ಫಿರಂಗಿಗಳನ್ನು ಪೂರೈಕೆ ಮಾಡಿ ಉದ್ವಿಘ್ನ ವಾತಾವರಣ ಸೃಷ್ಟಿಸಿದೆ. . 2017 ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿಕ ಸೈನಿಕರ ನಿಯೋಜನೆ ಸೇರಿದಂತೆ ಹಲವು ವಿಷಯಗಳು ಕುರಿತು ಧಾರಣೆಗೆ ಬರಲಾಗಿದೆ.  ಆರೋಗ್ಯಕರ ವ್ಯಾಪಾರ, ವಹಿವಾಟು, ಗಡಿಯಲ್ಲಿ ಶಾಂತಿಗೆ ಚೀನಾ ಒತ್ತು ನೀಡಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಕ್ಟೋಬರ್‌ನಲ್ಲಿಪ್ರಧಾನಿ ಮೋದಿಗೆ ಹೇಳಿದ್ದರು.

ಚೀನಾ ಅಧ್ಯಕ್ಷರ ಭೇಟಿ ಬಳಿಕ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬಂದರು. ಆಮೆರಿಕಾ ಹಾಗೂ ಭಾರತ ಸಂಬಂಧ ಉತ್ತಮವಾದ ಬೆನ್ನಲ್ಲೇ  ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೊರಿಯಾ ಮತ್ತು ವಿಯೆಟ್ನಾಂಗಳನ್ನು ಒಳಗೊಂಡಿರುವ ಯು.ಎಸ್ ನೇತೃತ್ವದ ಇಂಡೋ-ಪೆಸಿಫಿಕ್ ರಾಷ್ಟ್ರಗಳ ಗುಂಪಿನಲ್ಲಿ ಭಾರತ ಪಾಲ್ಗೊಳ್ಳುವಿಕೆಯನ್ನು ಅಮೆರಿಕ ಕಾತರದಿಂದ ಕಾಯುವಂತೆ ಮಾಡಿದೆ.  

ಚೀನಾ ಕ್ಯಾತೆಗೆ ಸಡ್ಡು ಹೊಡೆದ ಭಾರತ; ಮೋದಿ ಮಾಸ್ಟರ್ ಪ್ಲಾನ್‌ಗೆ ಚೀನಾ ತತ್ತರ!.

ಭಾರತ ತನ್ನ ಗಡಿಯಲ್ಲಿ ರಸ್ತೆ ನಿರ್ಮಿಸುತ್ತಿರುವುದನ್ನು ಮುಂದಿಟ್ಟುಕೊಂಡು ಚೀನಾ ಇದೀಗ ದಾಳ ಉರುಳಿಸಲು ಸಜ್ಜಾಗಿ ನಿಂತಿದೆ.  ಒಬ್ಬಂಟಿಯಾಗುತ್ತಿರು ಭೀತಿಯಲ್ಲಿ ಚೀನಾ ಆತೀರೇಖದ ನಿರ್ಧಾರ ತಳೆಯುತ್ತಿದೆ. ಇದಕ್ಕೆ ಸುಲಭ ತುತ್ತಾಗಿರುವುದು ಭಾರತದ ಗಡಿ. ಅಮೆರಿಕ ವಿರುದ್ಧ ಬುಸುಗುಡುತ್ತಿರುವ ಚೀನಾ ಇದೀಗ ಭಾರತದ ಗಡಿ  ಪ್ರದೇಶದಲ್ಲಿ ಅಶಾಂತಿ ಸೃಷ್ಟಿಸುವ ಮೂಲಕ ತನ್ನ ಕಾರ್ಯಸಾಧನೆಗೆ ಮುಂದಾಗಿದೆ.