Asianet Suvarna News Asianet Suvarna News

ತಾನೇ ಉಗ್ರರ ಗುಂಡೇಟಿಗೆ ಬಲಿಯಾಗಿ ಭಕ್ತರ ಕಾಪಾಡಿದ ಬಸ್ ಚಾಲಕನಿಗೆ ತಿರಂಗ ಗೌರವ ನಮನ!

ಎಲ್ಲಾ ಯಾತ್ರಾರ್ಥಿಗಳನ್ನು ಬಸ್‌ನಿಂದ ಇಳಿಯುವಂತೆ ಉಗ್ರರು ಚಾಲಕನಿಗೆ ತಾಕೀತು ಮಾಡಿದ್ದಾರೆ. ಗನ್ ಹಿಡಿದ ಉಗ್ರರು ಎದಿರಿಗೆ ಇದ್ದರೂ ಯಾರೂ ಇಳಿಯದಂತೆ ಸೂಚನೆ ನೀಡಿದ ಬಸ್ ಚಾಲಕ, ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಆದರೆ ಬಸ್‌ನಲ್ಲಿದ್ದ ಹಲವು ಭಕ್ತರ ಜೀವ ಉಳಿಸಿದ ಬಸ್ ಚಾಲಕನಿಗೆ ತಿರಂಗ ಗೌರವ ನಮನ ಸಲ್ಲಿಸಲಾಗಿದೆ.
 

Reasi bus attack Driver body wrapped with National flag giver martyr Salute for saving Many lives ckm
Author
First Published Jun 12, 2024, 5:17 PM IST

ಶ್ರೀನಗರ(ಜೂ.12) ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರ ಗುಂಡಿನ ದಾಳಿ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದರೆ, 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಖೋರಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್ ಟಾರ್ಗೆಟ್ ಮಾಡಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಸ್‌ನಲ್ಲಿದ್ದ ಯಾತ್ರಾರ್ಥಿಗಳನ್ನು ಉಳಿಸಲು ಬಸ್ ಚಾಲಕ ತಾನೇ ಉಗ್ರರ ಗುಂಡಿಗೆ ಬಲಿಯಾಗಿದ್ದ. ಉಗ್ರರು ಬಸ್ ಪ್ರವೇಶಿದಂತೆ ಮಾಡಿದರೂ ಬಸ್ ಪ್ರಪಾತಕ್ಕೆ ಬಿದ್ದಿತ್ತು. ಆದರೆ ಇದರಿಂದ ಹಲವರು ಪ್ರಾಣ ಉಳಿಸಿಕೊಂಡಿದ್ದಾರೆ. ಉಗ್ರರಿಂದ ಹಲವರ ಜೀವ ಉಳಿಸಿದ ಬಸ್ ಚಾಲಕ ವಿಜಯ್ ಕುಮಾರ್ ಮೃತದೇಹಕ್ಕೆ ತಿರಂಗ ಮೂಲಕ ಗೌರವ ನಮನ ಸಲ್ಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಸತತ ಉಗ್ರ ದಾಳಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅತ್ತ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿತ್ತು. ಯಾತ್ರಾರ್ಥಿಗಳು ಶಿವಖೋಡಿಯ ಗುಹಾ ದೇವಾಲಯದಿಂದ ವೈಷ್ಣೋದೇವಿಯ ಕ್ಷೇತ್ರವಾದ ಕಟ್ರಾಗೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿತ್ತು.

ಕಾಶ್ಮೀರದ ದೇವಸ್ಥಾನಕ್ಕೆ ತೆರಳಿದ ಭಕ್ತರ ಬಸ್ ಮೇಲೆ ಉಗ್ರರ ದಾಳಿ, 10 ಯಾತ್ರಾರ್ಥಿಗಳು ಸಾವು!

ರಸ್ತೆಯ ಇಕ್ಕೆಲಗಳಲ್ಲಿದ್ದ ಅರಣ್ಯದಲ್ಲಿ ಅವಿತಿದ್ದ ಉಗ್ರರು ಬಸ್ ಮೇಲೆ ದಾಳಿ ನಡೆಸಿದ್ದಾರೆ. ಹಿಂದೂ ಭಕ್ತರನ್ನು ಟಾರ್ಗೆಟ್ ಮಾಡಿದ್ದ ಉಗ್ರರು ಬಸ್ ಮೇಲೆ ದಾಳಿ ನಡೆಸಿದ್ದರೆ. ಬಸ್ ಎದುರೇ ನಿಂತಿದ್ದ ಉಗ್ರರು ಚಾಲಕ ವಿಜಯ್ ಕುಮಾರ್‌ಗೆ ವಾರ್ನಿಂಗ್ ನೀಡಿದ್ದಾರೆ. ಜೊತೆಗೆ ಬಸ್ ಪ್ರವೇಶಿಸಲು ಮುಂದಾಗಿದ್ದಾರೆ. ಇತ್ತ ಬಸ್‌ನಲ್ಲಿದ್ದ ಯಾತ್ರಾರ್ಥಿಗಳಿಗೆ ಬಸ್ ಚಾಲಕ ಸೂಚನೆ ನೀಡಿದ್ದಾನೆ. ಯಾರೂ ಇಳಿಯದಂತೆ ಸೂಚನೆ ನೀಡಿ ಉಗ್ರರ ಗನ್ ಟಾರ್ಗೆಟ್ ನಡುವೆಯೇ ಬಸ್ ವೇಗವಾಗಿ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದಾನೆ.

ಉಗ್ರರು ಬಸ್ ಚಾಲಕನ ತಲೆಗೆ ಗುಂಡಿಟ್ಟಿದ್ದಾರೆ. ಆದರೂ ಉಗ್ರರನ್ನು ಬಸ್ ಒಳಗೆ ಪ್ರವೇಶಿಸಲು ಅನುಮತಿಸದ ಚಾಲಕ, ಪ್ರಪಾತದತ್ತ ಬಸ್ ಇಳಿಸಿದ್ದಾನೆ. ಇತ್ತ ಬಸ್ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿದೆ. ಮೇಲಿನಿಂದ ಬಸ್ ಮೇಲೆ ಉಗ್ರರು ಸತತ ದಾಳಿ ನಡೆಸಿದ್ದಾರೆ. ಬಸ್ ಪ್ರಪಾತಕ್ಕೆ ಬಿದ್ದ ಪರಿಣಾಮ ಹಲವರು ಬದುಕುಳಿದಿದ್ದಾರೆ. ಬಸ್ ಚಾಲಕ ತೋರಿದ ಧೈರ್ಯ, ಹಲವರ ಜೀವ ಕಾಪಾಡಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಸ್ ಚಾಲಕನ ಪಾರ್ಥಿವ ಶರೀರಕ್ಕೆ ಭಾರತದ ತ್ರಿವರ್ಣ ಧ್ವಜ ಹೊದಿಸಿ ಗೌರವ ನಮನ ಸಲ್ಲಿಸಲಾಗಿದೆ. 

ಜಮ್ಮುದಲ್ಲಿ ಬಸ್ ಮೇಲೆ ದಾಳಿಗೆ ಬಳಸಿದ್ದು ಅಮೆರಿಕನ್ ಗನ್: ಮಣಿಪುರದಲ್ಲೂ ಸಿಎಂ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ

370ನೇ ವಿಧಿ ರದ್ದಾದ ಬಳಿಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.ಸುಂದರ ತಾಣಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿರುವ ಶತ ಶತಮಾನಗಳ ಹಳೆಯ ಹಿಂದೂ ದೇವಸ್ಥಾನಗಳಿಗೆ ತೆರಳುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರ ನಡುವೆ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿರುವುದು ಆತಂಕ ಹೆಚ್ಚಿಸಿದೆ.  
 

Latest Videos
Follow Us:
Download App:
  • android
  • ios