Asianet Suvarna News Asianet Suvarna News

ಕಾಶ್ಮೀರದ ದೇವಸ್ಥಾನಕ್ಕೆ ತೆರಳಿದ ಭಕ್ತರ ಬಸ್ ಮೇಲೆ ಉಗ್ರರ ದಾಳಿ, 10 ಯಾತ್ರಾರ್ಥಿಗಳು ಸಾವು!

ಜಮ್ಮು ಮತ್ತು ಕಾಶ್ಮೀರದ ಶಿವಖೋಡಾ ಹಿಂದೂ ದೇವಸ್ಥಾನಕ್ಕೆ ತೆರಳಿದ ಭಕ್ತರ ಬಸ್ ಮೇಲೆ ಉಗ್ರರ ಭೀಕರ ದಾಳಿ ನಡೆದಿದೆ. ದಾಳಿಯ ಪರಿಣಾಮ ಬಸ್ ಪ್ರಪಾತಕ್ಕೆ ಉರುಳಿದೆ. ಈ ಘಟನೆಯಲ್ಲಿ 10 ಯಾತಾರ್ಥಿಗಳು ಮೃತಪಟ್ಟಿದ್ದಾರೆ.

Many Pilgrims died after Terrorist open fire to bus in Jammu and Kashmir ckm
Author
First Published Jun 9, 2024, 8:59 PM IST

ಶ್ರೀನಗರ(ಜೂ.09) ಜಮ್ಮು ಮತ್ತು ಕಾಶ್ಮೀರದ ಕಾತ್ರದಲ್ಲಿರುವ ಶಿವಖೋಡ ದೇವಸ್ಥಾನಕ್ಕೆ ತೆರಳಿದ್ದ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರ ಭೀಕರ ದಾಳಿ ನಡೆದಿದೆ. ಪರಿಣಾಮ ಬಸ್ ಪ್ರಪಾತಕ್ಕೆ ಉರುಳಿದೆ. ಈ ಘಟನೆಯಲ್ಲಿ 10 ಭಕ್ತರು ಮೃತಪಟ್ಟಿದ್ದಾರೆ. ಶಿವಖೋಡ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮರಳುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಭೀಕರ ದಾಳಿಯಲ್ಲಿ ಹಲವು ಗುಂಡುಗಳು ಯಾತ್ರಾರ್ಥಿಗಳ ದೇಹ ಹೊಕ್ಕಿದೆ. ಇತ್ತ ಚಾಲಕನಿಗೂ ಗುಂಡು ತಗುಲಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಕಾತ್ರದಲ್ಲಿರುವ ಪ್ರಸಿದ್ಧ ಶಿವ ದೇವಸ್ಥಾನ ಶಿವಖೊಡ( ಶಿವಖೋರಿ) ಮಂದಿರಕ್ಕೆ ತೆರಳಿದ ಯಾತ್ರಾರ್ಥಿಗಳು ಪೂಜೆ ಸಲ್ಲಿಸಿದ್ದಾರೆ. ವೈಷ್ಣವೋ ದೇವಿ ದೇವಸ್ಥಾನದ ಬೇಸ್ ಕ್ಯಾಂಪ್‌ನಲ್ಲಿರುವ ಕಾತ್ರಾ ಪಟ್ಟಣದಲ್ಲಿ ಈ ದೇವಸ್ಥಾನವಿದೆ. ಕಾಶ್ಮೀರದ ಅತ್ಯಂತ ಪವಿತ್ರ ಹಾಗೂ ಪುರಾತನ ಶಿವ ದೇವಸ್ಥಾನಗಳ ಪೈಕಿ ಇದು ಒಂದಾಗಿದೆ. ದೇವಸ್ಥಾನದಿಂದ ಮರಳುತ್ತಿದ್ದ ವೇಳೆ ಮುಸುಕು ಧರಿಸಿದ ಉಗ್ರರು ಕಾಡಿನಲ್ಲಿ ಅವಿತು ಕುಳಿತಿದ್ದರು. ಹಿಂದೂ ಭಕ್ತರ ಬಸ್ ಟಾರ್ಗೆಟ್ ಮಾಡಿದ ಉಗ್ರರು ಏಕಏಕಿ ಪ್ರತ್ಯಕ್ಷವಾಗಿ ಗುಂಡಿನ ಮಳೆ ಸುರಿಸಿದ್ದಾರೆ.

ಗುಜರಾತ್‌ನಲ್ಲಿ 4 ಶಂಕಿತ ಐಸಿಸ್‌ ಉಗ್ರರ ಬಂಧನ: ಭಾರೀ ದಾಳಿಗೆ ಸಂಚು ರೂಪಿಸಿದ್ದ ಉಗ್ರರು

ಕಾಂದಾ ಚಂಡಿ ಮೊರ್ ಬಳಿ ಈ ಘಟನೆ ನಡೆದಿದೆ. ರೆಸಾಯಿ ಹಾಗೂ ರೌಜರಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಉಗ್ರ ದಾಳಿ ನಡೆದಿದೆ.ಕಳೆದ ಕೆಲ ತಿಂಗಳಿನಿಂದ ಈ ಭಾಗದಲ್ಲಿ ಉಗ್ರರ ಚಲನವಲನಗಳ ಕುರಿತ ಮಾಹಿತಿ ಪಡೆದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಕಾರ್ಯಚರಣೆ ನಡೆಸಿತ್ತು. ಆದರೆ ಉಗ್ರರ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ಏಕಾಏಕಿ ಯಾತ್ರಾರ್ಥಿಗಳ ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 

ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಗುಂಡುಗಳು ಪತ್ತೆಯಾಗಿದೆ. ಸ್ಥಳದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ. ದಟ್ಟ ಕಾಡು ಪ್ರಪಾತವಾಗಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಘಟನೆಯಲ್ಲಿ ಹಲವು ಭಕ್ತರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೌಡಾಯಿಸಿದ್ದಾರೆ. ಇತ್ತ ಭಾರತೀಯ ಸೇನೆ ಇಡೀ ಪ್ರದೇಶ ಸುತ್ತುವರಿದು ಉಗ್ರರ ಹೆಡೆಮುರಿ ಕಟ್ಟಲು ಕೂಂಬಿಂಗ್ ಆರಂಭಿಸಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಗಳು ವರದಿಯಾಗುತ್ತಿದೆ. 

Breaking News ಅಹಮ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಐಸಿಸ್ ಉಗ್ರರು ಅರೆಸ್ಟ್!

Latest Videos
Follow Us:
Download App:
  • android
  • ios