Asianet Suvarna News Asianet Suvarna News

ಅಪರಾಧಿ ಮನೋಭಾವ ಬದಲಿಸಲು ಹಸು ಆರೈಕೆಯ ಜವಾಬ್ದಾರಿ: ಭಾಗವತ್!

ಕೈದಿಗಳಿಗೆ ಹಸುಗಳನ್ನು ಆರೈಕೆ ಮಾಡುವ ಜವಾಬ್ದಾರಿ ನೀಡಿ ಎಂದ ಆರ್‌ಎಸ್‌ಎಸ್‌ ಮುಖ್ಯಸ್ಥ| 'ಕೈದಿಗಳ ಅಪರಾಧಿ ಮನೋಭಾವ ಬದಲಿಸಲು ಹಸುಗಳ ಆರೈಕೆಯ ಜವಾಬ್ದಾರಿ'| 'ಗೋಮಾತೆಯ ಅಹಿಂಸಾ ಮನೋಭಾವ ಕೈದಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ'| ಗೋವು ಮಾನವ ಹೃದಯವನ್ನು ಹೂವಿನಂತೆ ಕೋಮಲಗೊಳಿಸುತ್ತದೆ ಎಂದ ಮೋಹನ್ ಭಾಗವತ್| ಜೈಲುಗಳಲ್ಲಿ ಹಸುಗಳ ಕೊಟ್ಟಿಗೆಯನ್ನು ಸ್ಥಾಪಿಸಲು ಭಾಗವತ್ ಸಲಹೆ|

Rearing Cows Helps Reduce Criminality Of Jail Inmates Says Mohan Bhagwat
Author
Bengaluru, First Published Dec 8, 2019, 3:12 PM IST

ಪುಣೆ(ಡಿ.08): ಜೈಲು ಕೈದಿಗಳ ಅಪರಾಧಿ ಮನೋಭಾವ ಬದಲಿಸಲು ಅವರಿಗೆ ಹಸುಗಳನ್ನು ಆರೈಕೆ ಮಾಡುವ ಜವಾಬ್ದಾರಿ ನೀಡಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ.

ಗೋಮಾತೆಯ ಅಹಿಂಸಾ ಮನೋಭಾವ ಕೈದಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಭಾರತದ ಆರ್ಥಿಕತೆ ಹೇಗಿರಬೇಕು?: ಭಾಗವತ್ ಮಾತು ಮಾತ್ರ ಕೇಳಬೇಕು!

ಗೋವು ವಿಜ್ಞಾನ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಗೋವು ಮಾನವ ಹೃದಯವನ್ನು ಹೂವಿನಂತೆ ಕೋಮಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಜೈಲುಗಳಲ್ಲಿ ಹಸುಗಳ ಕೊಟ್ಟಿಗೆಯನ್ನು ಸ್ಥಾಪಿಸಿ ಅವುಗಳ ಆರೈಕೆಯ ಜವಾಬ್ದಾರಿಯನ್ನು ಕೈದಿಗಳಿಗೆ ವಹಿಸಬೇಕು ಎಂದು ಭಾಗವತ್ ಹೇಳಿದ್ದಾರೆ. ಇದರಿಂದ ಕೈದಿಗಳ ಅಪರಾಧ ಮನೋಸ್ಥಿತಿ ಕ್ಷೀಣಿಸಲು ಸಹಾಯವಾಗುತ್ತದೆ ಎಂಬುದು ಭಾಗವತ್ ಅಭಿಪ್ರಾಯವಾಗಿದೆ.

ಗೋಹತ್ಯೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿ ಹಾನಿಗೆ ಸಂಚು: ಭಾಗವತ್ ಕಿಡಿ

ಹಸುವಿನ ಗುಣಗಳನ್ನು ಜಗತ್ತಿಗೆ ಸಾಬೀತುಪಡಿಸಲು ಅದನ್ನು ದಾಖಲೆಗಳಲ್ಲಿ ಬರೆದಿಡಲು ಪ್ರಾರಂಭಿಸಬೇಕು. ಕೈದಿಗಳ ಮೇಲೆ ಮಾನಸಿಕ ಪ್ರಯೋಗಗಳನ್ನು ನಡೆಸುವುದು ಅವಶ್ಯ ಎಂದು ಭಾಗವತ್ ನುಡಿದರು.

Follow Us:
Download App:
  • android
  • ios