ಕೇರಳ ಸ್ಟೋರಿ ಚಿತ್ರವನ್ನು ಟೀಕಿಸಿ ಮುಸ್ಲಿಂ ವ್ಯಕ್ತಿಯ ಮದುವೆಯಾಗಿದ್ದ ಹಿಂದು ಹುಡುಗಿ ಬದುಕು ನರಕ!
ಕೇರಳ ಸ್ಟೋರಿ ಚಿತ್ರ ರಿಲೀಸ್ ಆಗಿದ್ದ ಸಮಯದಲ್ಲಿ ಕೇರಳದ ಯುವತಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದ ಆತುಲ್ಯ ಅಶೋಕನ್ ಅವರು ಸಾಕಷ್ಟು ಸುದ್ದಿಯಾಗಿದ್ದರು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ಆಕೆ, ಚಿತ್ರವನ್ನು ಟೀಕಿಸಿ ಮಾತನಾಡಿದ್ದರು.
ನವದೆಹಲಿ (ನ.22): ಕೇರಳದ ಯುವತಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅತುಲ್ಯ ಅಶೋಕನ್, ಈ ವರ್ಷದ ಆರಂಭದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಸಲುವಾಗಿ ಇಸ್ಲಾಂಗೆ ಮತಾಂತರಗೊಂಡು ಆಲಿಯಾ ಆಗಿದ್ದರು. ಈಗ ಇದೇ ಅತುಲ್ಯ ಅಶೋಕನ್ ತನ್ನ ಮದುವೆಯ ಬಗ್ಗೆ ಸಂಕಷ್ಟದ ಸಂದೇಶವನ್ನು ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಇನ್ಸ್‌ಟಾಗ್ರಾಮ್‌ನಲ್ಲಿ ಈ ಪೋಸ್ಟ್‌ಅನ್ನು ಅಳಿಸಿ ಹಾಕಲಾಗಿದೆ. ಇದರಲ್ಲಿ ತನ್ನ ಪತಿಯನ್ನು ಟ್ಯಾಗ್ ಮಾಡಿರುವ ಆಕೆ, 'ನನಗೇನಾದರೂ ಆದಲ್ಲಿ, ನನ್ನ ಕುಟುಂಬದ ಯಾರೊಬ್ಬರೂ ಇದಕ್ಕೆ ಜವಾಬ್ದಾರರಲ್ಲ. ಕೇವಲ ಈತ ಮಾತ್ರವೇ ಜವಾಬ್ದಾರಿ' ಎಂದು ಬರೆದಿದ್ದರು. ಅದರೊಂದಿಗೆ ತನ್ನ ಪತಿ ರೈಸಲ್ ಮನ್ಸೂರ್ ಜೊತೆಗಿನ ಎಲ್ಲಾ ಚಿತ್ರಗಳನ್ನು ಅತುಲ್ಯ ಅಶೋಕನ್ ಆರ್ಕೈವ್ ಮಾಡಿದ್ದಾರೆ. ಇದರಲ್ಲಿ ಆಕೆಯ ಮದುವೆಯ ಚಿತ್ರಗಳೂ ಸೇರಿವೆ. ಇದು ನೆಟ್ಟಿಗರ ಆತಂಕಕ್ಕೆ ಕಾರಣವಾಗಿದೆ.
ಅತುಲ್ಯ ಅಶೋಕನ್ ಸ್ಟೋರಿ ಯಾಕೆ ಮುಖ್ಯ?: ಈ ವರ್ಷದ ಮೇ ತಿಂಗಳಿನಲ್ಲಿ ದೇಶಾದ್ಯಂತ ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾಗಿತ್ತು. ಅದಕ್ಕಿಂತ ಕೆಲವೇ ತಿಂಗಳು ಮುನ್ನ ಅತುಲ್ಯ ಅಶೋಕನ್ ಮುಸ್ಲಿಂಗೆ ಮತಾಂತರವಾಗಿ ಆಲಿಯಾ ಆಗಿ ಬದಲಾಗುವ ಮೂಲಕ ರೈಸಲ್ ಮನ್ಸೂರ್‌ನನ್ನು ಮದುವೆಯಾಗಿದ್ದರು. ಕೇರಳ ಸ್ಟೋರಿ ಚಿತ್ರದ ಟ್ರೇಲರ್ ಕಥಾವಸ್ತುವು ಇತರ ಧರ್ಮಗಳ 32,000 ಮಹಿಳೆಯರನ್ನು ಇಸ್ಲಾಮ್‌ಗೆ ಸಾಮೂಹಿಕವಾಗಿ ಮತಾಂತರಗೊಳಿಸುವುದು ಮತ್ತು ಅಂತಿಮವಾಗಿ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಅವರನ್ನು ಸೇರಿಸುವ ಅಂಶ ಒಳಗೊಂಡಿತ್ತು. ಮೊದಲಿಗೆ 332 ಸಾವಿರ ಮಹಿಳೆಯರು ಎಂದಿದ್ದ ಚಿತ್ರದ ನಿರ್ದೇಶಕರು, ಇನ್ನೇನು ಚಿತ್ರ ಬಿಡುಗಡೆ ಆಗುವ ಸಮಯದಲ್ಲಿ ಇದು ಮೂರು ಹುಡುಗಿಯರ ನೈಜ ಕಥೆಗಳು ಎಂದು ಬದಲಾಯಿಸಿದ್ದರು. ಈ ವೇಳೆ ಅತುಲ್ಯ ಅಶೋಕನ್ ಇದನ್ನು ಪ್ರಾಪಗಂಡಾ ಸಿನಿಮಾ ಅಂದರೆ ಕೆಲ ಸಿದ್ಧಾಂತಗಳ ಬಿತ್ತಲು ಮಾಡಿರುವ ಚಿತ್ರ ಎಂದು ಟೀಕೆ ಮಾಡಿದ್ದರು. ಚಿತ್ರದಲ್ಲಿ ತೋರಿಸಿದ್ದ ಅಂಶಗಳನ್ನು ಅಪಹಾಸ್ಯ ಮಾಡಿದ್ದ ಅತುಲ್ಯ ಅಶೋಕನ್, ಇದನ್ನು ಸಾಬೀತು ಮಾಡುವಂತೆ ನಿರ್ದೇಶಕರಿಗೆ ಸವಾಲು ಹಾಕಿದ್ದರು. ಇದಕ್ಕೆ ಆಕೆಯ ಉದಾರವಾದಿ ಸ್ನೇಹಿತರು ಕೂಡ ಬೆಂಬಲಿಸಿದ್ದರು. ರೈಸಲ್ ಮನ್ಸೂರ್‌ನನ್ನು ಮದುವೆಯಾದ ಬಳಿಕ ತಮ್ಮ ಸಂತೋಷದ ಹಾಗೂ ಪ್ರಗತಿಪರ ಮದುವೆ ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಈಗ ಅತುಲ್ಯ ಅಶೋಕನ್ ಅವರು ಈ ಮದುವೆಯಿಂದ ತಾವು ಕಷ್ಟದಲ್ಲಿದ್ದೇನೆ ಎನ್ನುವ ಅರ್ಥದ ಸ್ಟೋರಿ ಹಂಚಿಕೊಂಡಿದ್ದಾರೆ. ಆಕೆಯ ಫಾಲೋವರ್‌ಗಳು ಇದನ್ನು ಹಲವವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿರುವ ಕೆಲವು ವ್ಯಕ್ತಿಗಳು, 'ದ ಕೇರಳ ಸ್ಟೋರಿ ಎನ್ನುವುದು ನಿಜ' ಎಂದು ಬರೆದಿದ್ದಲ್ಲದೆ, ಈ ಪ್ರಕರಣವನ್ನು ಕೇರಳ ಪೊಲೀಸ್ ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
2023ರಲ್ಲಿ ಅತ್ಯಧಿಕ ಕೋಟಿ ಗಳಿಸಿದ ಸಿನಿಮಾ ಇದು; ಜವಾನ್, ಗದರ್-2, ಜೈಲರ್ ಯಾವ್ದೂ ಅಲ್ಲ!
ಏಪ್ರಿಲ್ ಅಂತ್ಯದಲ್ಲಿ, ಅತುಲ್ಯ ಅಶೋಕನ್ ಅವರು ಮನ್ಸೂರ್ ಅವರೊಂದಿಗೆ ಮದುವೆಯಾಗಿರುವುದಾಗಿ ಘೋಷಿಸಿದ್ದರು. ಆತನ ಬಗ್ಗೆ ಮಾಹಿತಿ ವಿರಳವಾಗಿದ್ದು, Instagram ಪ್ರೊಫೈಲ್ ಪ್ರಕಾರ, ಕೇರಳದ ಪೆರುಂಬವೂರ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್, ಫುಟ್‌ಬಾಲ್ ಉತ್ಸಾಹಿ ಮತ್ತು ಟ್ರಾನ್ಸ್‌ಪೋರ್ಟರ್ ಎಂದು ತಿಳಿಸುತ್ತದೆ. ಅತುಲ್ಯ ಹಾಗೂ ಮನ್ಸೂರ್ ಮದುವೆಯ ಆಮಂತ್ರಣದಲ್ಲಿ, "ನಮ್ಮ ಆರಂಭಕ್ಕೆ ಸುಸ್ವಾಗತ... ರೈಸಲ್ ಮನ್ಸೂರ್ ಮತ್ತು ಆಲಿಯಾ," ಅವರು ಮದುವೆಯಾಗುವ ಮೊದಲು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ತಿಳಿಸಿದ್ದರು.
ಕೇರಳ ಸ್ಟೋರಿ ನಟಿ ಅದಾ ಶರ್ಮಾಗೆ ಹೈವ್ಸ್…. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ನಟಿ