ಕೇರಳ ಸ್ಟೋರಿ ನಟಿ ಅದಾ ಶರ್ಮಾಗೆ ಹೈವ್ಸ್…. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ನಟಿ
ಇತ್ತೀಚೆಗೆ, ಬಾಲಿವುಡ್ ನಟಿ ಅದಾ ಶರ್ಮಾ ಹೈವ್ಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಈ ಸಮಸ್ಯೆಯಿಂದಾಗಿ, ನಟಿ ಸ್ವಲ್ಪ ಸಮಯದವರೆಗೆ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಹೈವ್ಸ್ ಸಾಮಾನ್ಯವಾಗಿ ಪರಿಸರದಲ್ಲಿರುವ ಯಾವುದಕ್ಕಾದರೂ ಅಥವಾ ನೀವು ತಿನ್ನುವ ಯಾವುದೇ ಆಹಾರಕ್ಕೆ ಅಲರ್ಜಿ ಉಂಟಾದ್ರೆ ಸಂಭವಿಸುತ್ತೆ.
ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ತಮ್ಮ ಚಿತ್ರ ದಿ ಕೇರಳ ಸ್ಟೋರಿ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದಿದ್ದರು. ಇದೀಗ ಅವರು ಸಿನಿಮಾದಿಂದ ವಿರಾಮ ತೆಗೆದುಕೊಂಡು ಸುದ್ದಿಯಲ್ಲಿದ್ದಾರೆ. ಅಲರ್ಜಿ ಸಮಸ್ಯೆಯಿಂದಾಗಿ ನಟಿ ಸದ್ಯ ಸಿನಿಮಾಗಳಿಂದ ದೂರವಿರಲು ನಿರ್ಧರಿಸಿದ್ದಾರೆ. ಹೈವ್ಸ್ ಎಂಬ ಚರ್ಮದ ಅಲರ್ಜಿ ಕಾಡುತ್ತಿದೆ ಎಂದು ಅದಾ ಶರ್ಮಾ ಕೆಲವು ದಿನಗಳ ಹಿಂದೆ ತಿಳಿಸಿದ್ದರು, ಇದರಿಂದಾಗಿ ಅವರು ನಟನೆಯಿಂದ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ಈ ಚರ್ಮದ ಅಲರ್ಜಿ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.
ಹೈವ್ಸ್ ಎಂದರೇನು?
ಉರ್ಟಿಕೇರಿಯಾ ಎಂದೂ ಕರೆಯಲ್ಪಡುವ ಹೈವ್ಸ್ (Hives) ಚರ್ಮದಲ್ಲಿ ಉಂಟಾಗುವ ಸಮಸ್ಯೆ. ಇದರಲ್ಲಿ, ಚರ್ಮದ ಮೇಲೆ ಗಾಯಗಳು ಕಾಣಿಸಿಕೊಳ್ಳುತ್ತವೆ. ಈ ಗಾಯಗಳು ಸಾಮಾನ್ಯವಾಗಿ ಕೆಂಪು, ಗುಲಾಬಿ ಅಥವಾ ಚರ್ಮದ ಬಣ್ಣದ್ದಾಗಿರಬಹುದು. ಕೆಲವೊಮ್ಮೆ ಚುಚ್ಚುವಿಕೆ ಅಥವಾ ಕಿರಿಕಿರಿಯ ಭಾವನೆಯೂ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಹೈವ್ಸ್ ಔಷಧಿ ಅಥವಾ ಆಹಾರದ ಅಲರ್ಜಿಯಿಂದ (food allergy) ಉಂಟಾಗುತ್ತವೆ.
ಹೈವ್ಸ್ ಲಕ್ಷಣಗಳು ಯಾವುವು?
ಸಣ್ಣ ಚುಕ್ಕೆಗಳು
ತೆಳುವಾದ, ಎತ್ತರದ ರೇಖೆಗಳು
ಊತ ಮತ್ತು ನೋವು ಜೊತೆಗೆ ದದ್ದುಗಳಲ್ಲಿ ಬರ್ನಿಂಗ್ (burning) ಮತ್ತು ಕೆಂಪಾಗುವಿಕೆ
ಚರ್ಮದ ಮೇಲೆ ಚಪ್ಪಟೆಯಾದ ಅಥವಾ ಬೆಳೆದ ದದ್ದುಗಳು
ದದ್ದುಗಳಲ್ಲಿ ತುರಿಕೆ
ಅವು ಗುಲಾಬಿ, ಕೆಂಪು ಅಥವಾ ಚರ್ಮದ ಬಣ್ಣದ್ದಾಗಿರಬಹುದು.
ಈ ಉಬ್ಬುಗಳು ಸಾಮಾನ್ಯವಾಗಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ, ಆದರೆ ಹೊಸ ದದ್ದುಗಳು ರೂಪುಗೊಳ್ಳಬಹುದು.
ಅವುಗಳ ಗಾತ್ರವು ಸೂಜಿಯ ತುದಿಯಂತೆ ಸಣ್ಣದಾಗಿಯೂ ಇರಬಹುದು ಅಥವಾ ಹಲವಾರು ಇಂಚುಗಳವರೆಗೆ ಇರಬಹುದು.
ಹೈವ್ಸ್ ಗೆ ಕಾರಣಗಳು
ಹೈವ್ಸ್ ಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ, ಆದರೆ ಇದು ಬೇರೆ ಬೇರೆ ಕಾರಣಗಳಿಂದ ಕಾಡುತ್ತದೆ.
ಮಣ್ಣು, ಔಷಧಿ, ಆಹಾರ ಅಥವಾ ಕೀಟಗಳ ಕಡಿತದಿಂದ ಅಥವಾ ಧೂಳಿನಂತಹ ಕೆಲವು ರೀತಿಯ ಅಲರ್ಜಿಯ (allergy) ಪ್ರತಿಕ್ರಿಯೆಯಿಂದಲೂ ಇದು ಉಂಟಾಗಬಹುದು.
ಹೈವ್ಸ್ ಸಮಸ್ಯೆಗೆ ಈ ಕೆಳಗಿನವುಗಳು ಕಾರಣಗಳಾಗಿರಬಹುದು:
ಮೊಟ್ಟೆಗಳು, ಬೆರ್ರಿಗಳು, ಒಣ ಹಣ್ಣು ಅಥವಾ ಮೀನು
ನೋವು ನಿವಾರಕ ಅಥವಾ ಅಧಿಕ ಬಿಪಿ ಔಷಧಿಗಳಂತಹ ಕೆಲವು ರೀತಿಯ ಔಷಧಿಗಳು
ಕ್ಯಾನ್ಸರ್, ಹೆಪಟೈಟಿಸ್ ಅಥವಾ ಥೈರಾಯ್ಡ್ ಕಾಯಿಲೆ (thyroid problem)
ಸೂರ್ಯನ ಬೆಳಕು ಅಥವಾ ಶೀತದಿಂದ ಅಲರ್ಜಿ
ಹೈವ್ಸ್ ತಡೆಗಟ್ಟುವುದು ಹೇಗೆ?
ಈ ಸಮಸ್ಯೆಗಳನ್ನು ತಪ್ಪಿಸಲು ಸುಲಭವಾದ ಮಾರ್ಗವೆಂದರೆ ಅಲರ್ಜಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು. ಈ ಕೆಳಗಿನ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ನೀವು ಅದರಿಂದ ದೂರವಿರಬಹುದು-
ನಿಮಗೆ ಅಲರ್ಜಿ ಇರುವ ವಸ್ತು ಅಥವಾ ಆಹಾರಗಳಿಂದ ಸಾಧ್ಯವಾದಷ್ಟು ದೂರವೇ ಇರಿ.
ನೀವು ಕೆಮಿಕಲ್ ಇಂಡಸ್ಟ್ರಿಯಲ್ಲಿ (chemical industry) ಕೆಲಸ ಮಾಡುತ್ತಿದ್ದರೆ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಸರಿಯಾದ ಸುರಕ್ಷತಾ ಸಾಧನಗಳನ್ನು ಬಳಸಿ.
ಚರ್ಮದಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಉತ್ತಮ ಜೀವನಶೈಲಿಯನ್ನು ಅನುಸರಿಸಿ.