Asianet Suvarna News Asianet Suvarna News

ಬಿಡುಗಡೆಗೆ ರೆಡಿ ಆಯ್ತು 'ಮೇ ಅಟಲ್ ಹೂ' : ಮದುವೆ ಆಗದೇ ಉಳಿದಿದ್ದೇಕೆ ಅಟಲ್‌ಜೀ

ಅಟಲ್ ಬಿಹಾರಿ ವಾಜಪೇಯಿ ಜೀವನಾಧರಿತ ಮೇ ಅಟಲ್ ಹೂ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿದೆ. ನಟ ಪಂಕಜ್ ತ್ರಿಪಾಠಿ ಅವರು ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ನಿರ್ವಹಿಸಿದ್ದಾರೆ.

Ready To release Biopic of Former Prime Minister Atal bihari vajpayee's Main Atal Hoon release Why atal stayed permanently single akb
Author
First Published Dec 21, 2023, 5:27 PM IST

ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ದೇಶ ಕಂಡ ಧೀಮಂತ ನಾಯಕ, ಭಾರತದ 10ನೇ ಪ್ರಧಾನಿ, ಭಾರತೀಯ ಜನತಾ ಪಾರ್ಟಿಯ ಸಹ ಸಂಸ್ಥಾಪಕ ಓರ್ವ ರಾಜಕೀಯ ಮುತ್ಸದ್ಧಿ ಮಾತ್ರವಲ್ಲದೇ ಓರ್ವ ಅದ್ಭುತ ಕವಿ. ಅವರ ಹುಟ್ಟುಹಬ್ಬವನ್ನು ಉತ್ತಮ ಆಡಳಿತಗಾರನ ದಿನವಾಗಿ ದೇಶ ಆಚರಿಸುತ್ತಿದೆ. 2018 ರ  ಮಾರ್ಚ್‌ 22 ರಂದು ನಮ್ಮನಗಲಿದ ವಾಜಪೇಯಿ ಅವರಿಗೆ 2015ರಲ್ಲಿ ಭಾರತ ಸರ್ಕಾರ ಭಾರತದ ಸರ್ವಶ್ರೇಷ್ಠ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಿದೆ. 

ಇಂತಹ ಮಹಾನ್ ನಾಯಕ ಓರ್ವ ಬ್ರಹ್ಮಚಾರಿ ಎಂಬುದು ಬಹುತೇಕರಿಗೆ ಗೊತ್ತು.  ಆದರೆ ಕೆಲವೇ ಕೆಲವರಿಗೆ ಮಾತ್ರ ಅವರು ಏಕೆ ಬ್ರಹ್ಮಾಚಾರಿಯಾಗಿ ಉಳಿದರು ಎಂಬುದು ಗೊತ್ತು.  ಸಂದರ್ಶನವೊಂದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ನೇಹಿತರಾಗಿದ್ದ ಗೋರೆ ಲಾಲ್ ತ್ರಿಪಾಠಿಯವರ ಪುತ್ರ ವಿಜಯ್ ಪ್ರಕಾಶ್ ಅವರು ಏಕೆ ಅಟಲ್ ಬಿಹಾರಿ ಬ್ರಹ್ಮಚಾರಿಯಾಗಿಯೇ ಉಳಿದರು ಎಂಬುದನ್ನು ಹೇಳಿಕೊಂಡಿದ್ದಾರೆ.

ಲೋಕಸಭೆಯಲ್ಲಿ ಮಾಜಿ ಪ್ರಧಾನಿಗಳ ಸ್ಮರಣೆ: ಅಟಲ್, ನೆಹರು ಹೊಗಳಿದ ಮೋದಿ

ಅದು 1960ರ ಸಮಯ ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರದ  ಡಿಎವಿ ಕಾಲೇಜಿನಲ್ಲಿ  ಕಲಿಯುತ್ತಿದ್ದರು. ಇದೇ ವೇಳೆ ಅಟಲ್ ಮನೆಯವರು ಅವರಿಗೆ ಮದುವೆ ಮಾಡಲು ಮುಂದಾಗಿದ್ದರು. ಇದು ಆಟಲ್ ಅವರಿಗೆ ತಿಳಿಯುತ್ತಿದ್ದಂತೆ ಮದುವೆ ಬಗ್ಗೆ ಭಯಗೊಂಡ ಅವರು ಮನೆಯಿಂದ ಓಡಿ ಹೋಗಿ ನೇರವಾಗಿ ಸೇರಿದ್ದು, ಸ್ನೇಹಿತ ಗೊರೆ ಲಾಲ್ ತ್ರಿಪಾಠಿ ಅವರ ಮನೆಗೆ. ಆಗ ಅಟಲ್ ಬಿಹಾರಿ ವಾಜಪೇಯಿ ಹಾಗೂ ತ್ರಿಪಾಠಿ ಬಹಳ ಆತ್ಮೀಯ ಸ್ನೇಹಿತಾಗಿದ್ದು, ಆರ್‌ಎಸ್‌ಎಸ್‌ನ ಭಾಗವಾಗಿದ್ದರು. 

ಅಟಲ್ ಸ್ನೇಹಿತ ಗೋರೆ ಲಾಲ್ ಕೃಷಿಕರಾಗಿದ್ದು, ಇತ್ತ ಸ್ನೇಹಿತನ ಮನೆಗೆ ಬಂದ ಅಟಲ್ ಅವರು ಗೋರೆ ಲಾಲ್ ಅವರ ಮನೆ ಸೇರಿಕೊಂಡವರು ಮೂರು ದಿನ ಮನೆಯಿಂದ ಹೊರಗೆ ಬಂದಿರಲಿಲ್ಲವಂತೆ. ಆ ಮೂರು ದಿನ ಅಟಲ್ ಅವರಿಗೆ ಏನಾದರು ಬೇಕಾದರೆ ಅವರು ಕೋಣೆಯ ಬಾಗಿಲನ್ನು ಬಟ್ಟಿಯುತ್ತಿದ್ದರಂತೆ ಈ ವೇಳೆ ಸ್ನೇಹಿತ ತ್ರಿಪಾಠಿಯವರು ಅವರಿಗೆ ಬೇಕಾದನ್ನು ತೆಗೆದುಕೊಂಡು ಹೋಗಿ ನೀಡುತ್ತಿದ್ದರಂತೆ ಇದನ್ನು ತ್ರಿಪಾಠಿ ಪುತ್ರ ವಿಜಯ್ ಪ್ರಕಾಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ವಾಜಪೇಯಿ ಉದಾಹರಿಸಿ ಪ್ರಧಾನಿಗೆ ರಾಜಧರ್ಮ ಪಾಲಿಸಿ ಎಂದ ಕಾಂಗ್ರೆಸ್

ಇದೇ ವೇಳೆ ಏಕೆ ನೀನು ಮದುವೆಗೆ ಒಪ್ಪದೇ ಮನೆಬಿಟ್ಟು ಓಡಿಬಂದೆ ಎಂದು ಕೇಳಿದಾಗ ಅವರು  ತಾನು ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಡಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದ್ದರಂತೆ. ಮದುವೆಯಾಗದೇ ಬ್ರಹ್ಮಚಾರಿಯಾಗಿಯೇ ಉಳಿದ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಆತ್ಮೀಯ ಸ್ನೇಹಿತೆ ರಾಜ್‌ಕುಮಾರಿ ಕೌಲ್ ಹಾಗೂ ಅವರ ಪತಿ ಬಿಎನ್ ಕೌಲ್ ಅವರ ಪುತ್ರಿ ನಮಿತಾ ಅವರನ್ನು ತಮ್ಮ ಮಗಳಂತೆ ಸಾಕಿದ್ದರು. ಅವರು ವಾಜಪೇಯಿ ಅವರ ಸಾಕು ಮಗಳೆಂದೇ ಫೇಮಸ್ ಆಗಿದ್ದು, ಆಟಲ್ ನಿಧನದ ವೇಳೆ ಸ್ವತಃ ಅವರೇ ಕೈಗೊಳ್ಳಬೇಕಾದ ಎಲ್ಲಾ ಜವಾಬ್ದಾರಿಗಳನ್ನು ಅವರೇ ಮುಂದೆ ನಿಂತು ಮಾಡಿದ್ದರು. 

ಇನ್ನು ಅಟಲ್ ಬಿಹಾರಿ ವಾಜಪೇಯಿ ಜೀವನಾಧರಿತ ಮೇ ಅಟಲ್ ಹೂ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿದೆ. ನಟ ಪಂಕಜ್ ತ್ರಿಪಾಠಿ ಅವರು ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಿನಿಮಾ ಎನ್ನುವುದಕ್ಕಿಂತ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಕತೆಯಲ್ಲಿ ನಾನು ನಟಿಸುತ್ತಿರುವುದು  ನನ್ನ ಹೃದಯಕ್ಕೆ ಹತ್ತಿರವೆನಿಸಿದೆ. ಅವರೊಬ್ಬ ಲೆಜೆಂಡ್, ಅವರ ಕತೆಯನ್ನು ಜನ ಮೆಚ್ಚುತ್ತಾರೆ ಎಂಬ ಭರವಸೆ ನನಗಿದೆ ಎಂದು ಹೇಳಿದ್ದಾರೆ ಪಂಕಜ್ ತ್ರಿಪಾಠಿ. ರವಿ ಜಾಧವ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸ್ವತ ರವಿ ಜಾಧವ್ ಹಾಗೂ ರಿಷಿ ವಿರ್ಮಾನಿ ಕತೆ ಬರೆದಿದ್ದಾರೆ.  ಮುಂದಿನ ವರ್ಷ ಜನವರಿ 19 ರಂದು 2024ರಲ್ಲಿ ತೆರೆಗೆ ಬರಲಿದೆ ಸಿನಿಮಾ. 

Follow Us:
Download App:
  • android
  • ios