ಷೇರುದಾರರ ಹಿತಕ್ಕೆ ಸಮಿತಿ ರಚನೆಗೆ ಸಿದ್ಧ: ಸುಪ್ರೀಂಕೋರ್ಟ್‌ಗೆ ಕೇಂದ್ರ
ಅದಾನಿ ಸಮೂಹ ಕಂಪನಿಗಳ ಷೇರು ಕುಸಿತದ ಬೆನ್ನಲ್ಲೇ, ಷೇರುಪೇಟೆ ಹೂಡಿಕೆದಾರರ ಹಿತ ಕಾಯಲು ಸಮಿತಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್(Supreme Court) ನೀಡಿದ್ದ ನಿರ್ದೇಶನಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಲು ಸಿದ್ಧ ಎಂದು ಹೇಳಿದೆ.
ನವದೆಹಲಿ: ಅದಾನಿ ಸಮೂಹ ಕಂಪನಿಗಳ ಷೇರು ಕುಸಿತದ ಬೆನ್ನಲ್ಲೇ, ಷೇರುಪೇಟೆ ಹೂಡಿಕೆದಾರರ ಹಿತ ಕಾಯಲು ಸಮಿತಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್(Supreme Court) ನೀಡಿದ್ದ ನಿರ್ದೇಶನಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಲು ಸಿದ್ಧ ಎಂದು ಹೇಳಿದೆ. ಹಿಂಡನ್‌ಬರ್ಗ್ ವರದಿಯ ಕುರಿತಾಗಿ ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು, ಹಿಂಡನ್‌ಬರ್ಗ್ (Hindenburg) ಸಂಸ್ಥಾಪಕನ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ.ಡಿ.ವೈ.ಚಂದ್ರಚೂಡ್ (Chandrachud)ಅವರ ನೇತೃತ್ವದ ಪೀಠದ ಎದುರು ಸರ್ಕಾರ ಈ ಮಾಹಿತಿ ನೀಡಿದೆ.
ಸರ್ಕಾರ ಹಾಗೂ ಸೆಬಿಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ(Tushar Mehta), ಸಮಿತಿ ರಚನೆ ಮಾಡುವುದಕ್ಕೆ ಸರ್ಕಾರದಿಂದ ಯಾವುದೇ ಆಕ್ಷೇಪಗಳಿಲ್ಲ. ಆದರೆ ಸಮಿತಿಯ ತಜ್ಞರ ಹೆಸರನ್ನು ಮೊಹರು ಮಾಡಲಾದ ಕವರ್‌ನಲ್ಲಿ ನೀಡುತ್ತೇವೆ ಎಂದರು. ಬಂಡವಾಳ ಭಾರತದ ಒಳಗೆ ಮತ್ತ ಹೊರಗೆ ಮನಬಂದಂತೆ ಚಲಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಲು ಬಲಿಷ್ಠ ನಿಯಂತ್ರಣ ಸಮಿತಿ ರಚಿಸಬೇಕು ಎಂದು ಸುಪ್ರೀಂಕೋರ್ಟ್, ಶುಕ್ರವಾರ ಸೆಬಿ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಹೊಸ ವರ್ಷದಲ್ಲಿ ಹೂಡಿಕೆ ಮಾಡಲು ಹೊರಟಿರೋರಿಗೆ ಇಲ್ಲಿದೆ 8 ಟಿಪ್ಸ್
ಅದಾನಿ ಕಂಪನಿಯಲ್ಲಿ ಹೂಡಿಕೆ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ
ಅದಾನಿ ಸಮೂಹ (Adani Group)ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಮಾರಿಷಸ್ ಕಂಪನಿಗಳು ಕಾನೂನು ಉಲ್ಲಂಘನೆ ಮಾಡಿವೆ ಎಂಬ ಆರೋಪಗಳ ಬೆನ್ನಲ್ಲೇ ತನಿಖೆ ನಡೆಸಿರುವ ಅಲ್ಲಿನ ಆರ್ಥಿಕ ಸೇವಾ ಆಯೋಗ (ಎಫ್‌ಎಸ್‌ಸಿ)(Financial Services Commission), ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ. ಆಂತರಿಕ ತನಿಖೆ ನಡೆಸಿರುವ ದ ಫೈನಾನ್ಸಿಯಲ್ ಸರ್ವೀಸ್ ಕಮೀಶನ್ (ಸೆಬಿಗೆ ಸಮನಾದ ಸಂಸ್ಥೆ), ಮಾರಿಷಸ್ ಮೂಲದ 48 ಗ್ಲೋಬಲ್ ಸರ್ವೀಸ್ ಕಂಪನಿಗಳು ಮತ್ತು 11 ಇತರ ಹೂಡಿಕೆದಾರರು ಅದಾನಿ ಸಮೂಹದಲ್ಲಿ ಹೂಡಿಕೆ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ನಮ್ಮದು ಆಂತರಿಕ ವರದಿಯಾಗಿದ್ದು, ಇದನ್ನು ಸೆಬಿಯ ಜೊತೆಗೆ ಹಂಚಿಕೊಂಡಿಲ್ಲ ಎಂದು ಹೇಳಿದೆ.
ಸೆಬಿ ನಿರ್ದಿಷ್ಟವಾದ ಮಾಹಿತಿಗಳನ್ನು ಆಗಾಗ್ಗೆ ಕೇಳಿದೆ. ಇದನ್ನು ಸೆಬಿಗೆ ನೀಡಲಾಗುವುದು ಎಂದು ಎಫ್‌ಎಸ್‌ಸಿಯ ಸಿಇಒ ಧನೇಸ್ವರನಾಥ್ ವಿಕಾಸ್ ಠಾಕೂರ್ (Dhaneswarnath Vikas Thakur) ಹೇಳಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಕಂಪನಿಯ ವರದಿ, ಅದಾನಿ ಸಮೂಹವು ವಿದೇಶದಲ್ಲಿರುವ ಹೂಡಿಕೆದಾರರ ಮೂಲಕ ಅಕ್ರಮ ಎಸಗಿದೆ ಎಂದು ಆರೋಪಿಸಿತ್ತು. ಈ ಆರೋಪದ ಬೆನ್ನಲ್ಲೇ ಅದಾನಿ ಕಂಪನಿ 82 ಲಕ್ಷ ಕೋಟಿ ರು. ನಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿತ್ತು.
2025ಕ್ಕೆ ಮತ್ತೆ ಹೂಡಿಕೆದಾರರ ಸಮಾವೇಶ: ಸಿಎಂ ಬೊಮ್ಮಾಯಿ