ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 500 ರು. ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರದ ಬದಲಾಗಿ ಶ್ರೀರಾಮನ ಚಿತ್ರವಿರುವ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಜಾಲತಾಣಗಳಲ್ಲಿ ನಕಲಿ ಸುದ್ದಿಯೊಂದು ವೈರಲ್‌ ಆಗಿದೆ.

ಮುಂಬೈ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 500 ರು. ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರದ ಬದಲಾಗಿ ಶ್ರೀರಾಮನ ಚಿತ್ರವಿರುವ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಜಾಲತಾಣಗಳಲ್ಲಿ ನಕಲಿ ಸುದ್ದಿಯೊಂದು ವೈರಲ್‌ ಆಗಿದೆ.

500 ರು. ನೋಟಿನಲ್ಲಿ ರಾಮನ ಚಿತ್ರವನ್ನು ಎಡಿಟ್‌ ಮಾಡಿರುವ ಪೋಟೋವೊಂದು ಹರಿದಾಡಿದೆ. ಹೀಗಾಗಿ ಮಂದಿರ ಉದ್ಘಾಟನೆ ದಿನದಂದು ಆರ್‌ಬಿಐ ಈ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಹಲವರು ತಮ್ಮ ಜಾಲತಾಣ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ‘ಆದರೆ ಈ ಸುದ್ದಿ ಸುಳ್ಳು ಎಂದು ಗೊತ್ತಾಗಿದ್ದು, ಆರ್‌ಬಿಐ ಶ್ರೀರಾಮ ಚಿತ್ರವಿರುವ ಯಾವುದೇ ನೋಟುಗಳನ್ನು ಮುದ್ರಿಸುತ್ತಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಾಣ ಪ್ರತಿಷ್ಠೆ: ಕೇಂದ್ರದ ಬಳಿಕ ಹಲವು ಬಿಜೆಪಿ ರಾಜ್ಯಗಳಿಂದಲೂ 22ಕ್ಕೆ ರಜೆ


ಅಹ್ಮದಾಬಾದ್‌: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಳಿಕ ಜ.22ರಂದು ಅನೇಕ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ರಜೆ ಘೋಷಿಸಿವೆ. ಗೋವಾ ಪೂರ್ತಿ ದಿನ ರಜೆ ಘೋಷಿಸಿದೆ. ಇನ್ನು ಮಧ್ಯಪ್ರದೇಶ, ಗುಜರಾತ್‌, ಹರ್ಯಾಣ, ಉತ್ತರಾಖಂಡ ಹಾಗೂ ತ್ರಿಪುರಾ ರಾಜ್ಯ ಸರ್ಕಾರಗಳು ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ (ಮಧ್ಯಾಹ್ನ 2 ಗಂಟೆಯವರೆಗೆ) ಪ್ರಕಟಿಸಿವೆ.

ಸಿಪಿಎಂ ವಿರೋಧ:

ಆದರೆ ಈ ರೀತಿ ಒಂದು ನಿರ್ದಿಷ್ಟ ಧರ್ಮದ ಸಮಾರಂಭಕ್ಕೆ ಸಾರ್ವಜನಿಕ ರಜೆ ಘೋಷಣೆ ಸಂವಿಧಾನಬಾಹಿರ ಎಂದು ಸಿಪಿಎಂ ವಿರೋಧ ವ್ಯಕ್ತಪಡಿಸಿದೆ.

ಒಂದು ವರ್ಗದ ಓಲೈಕೆಗೆ ಕಾಂಗ್ರೆಸ್ ರಾಮಮಂದಿರಕ್ಕೆ ವಿರೋಧ: ಶೋಭಾ

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಗುರುವಾರ, ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನವನ್ನು ಬಿಜೆಪಿ ವತಿಯಿಂದ ಸ್ವಚ್ಛಗೊಳಿಸಲಾಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು.

RamLalla Photo: ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ, ಹೀಗಿದ್ದಾನೆ ನೋಡಿ ಶ್ರೀರಾಮ!

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ, ರಾಮಮಂದಿರ ಲೋಕಾರ್ಪಣೆಗೆ ಕಾಂಗ್ರೆಸ್ ನಾಯಕರ ಗೈರು ಹಾಜರಿ ಒಂದು ವರ್ಗವನ್ನು ತೃಪ್ತಿ ಪಡಿಸುವ ಹುನ್ನಾರ ಎಂದರು. ಇಂಡೊನೇಶಿಯಾ ಒಂದು ಮುಸ್ಲೀಂ ದೇಶ, ಅಲ್ಲಿ ಮಹಾಭಾರತ - ರಾಮಾಯಣದ ಮಹಾಪುರುಷರ ಹೆಸರನ್ನು ಅಲ್ಲಿಯ ಮಕ್ಕಳಿಗೆ ಇಡುತ್ತಾರೆ, ಅಲ್ಲಿ ರಾಮಕಥಾ ಆಯೋಜಿಸುತ್ತಾರೆ, ಅಲ್ಲಿನ ರಾಜನಿಗೆ ಹಿಂದೂ ದೇವರ ಹೆಸರು ಇಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಒಂದು ವರ್ಗದ ಓಲೈಕೆಗಾಗಿ ರಾಮನ ತಿರಸ್ಕಾರ ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್ ನಾಯಕರ ಮನೆಗೆ ಹೋದರೆ, ಅವರು ಅಲ್ಲಿ ರಾಮ, ಕೃಷ್ಣ, ಶಿವನ ಪೂಜೆ ಮಾಡುತ್ತಾರೆ, ಮನೆಯಿಂದ ಆಚೆ ಬಂದರೆ ನಾಟಕ ಮಾಡುತ್ತಾರೆ. ಚುನಾವಣೆ ಬಂದಾಗ ರಾಹುಲ್ ಗಾಂಧಿ ಮಂದಿರ ದೇವಸ್ಥಾನ ಸುತ್ತುತ್ತಾರೆ, ಈಗ ರಾಮಮಂದಿರದ ಉದ್ಘಾಟನೆಯನ್ನು ಬಹಿಷ್ಕಾರ ಮಾಡುತ್ತಾರೆ. ಕಾಂಗ್ರೆಸ್‌ನ ಅನೇಕ ನಾಯಕರಿಗೆ ರಾಮಮಂದಿರ ಉದ್ಘಾಟನೆಗೆ ಹೋಗಬೇಕು ಎಂಬ ಆಸೆ ಇದೆ, ಆದರೆ ರಾಜಕೀಯದ ಕಾರಣಕ್ಕೆ ಹೋಗುತ್ತಿಲ್ಲ, ಲೋಕಸಭಾ ಚುನಾವಣೆ ಮುಗಿದ ಕೂಡಲೇ ಎಲ್ಲರೂ ಅಯೋಧ್ಯೆಗೆ ಹೋಗ್ತಾರೆ, ರಾಮನ ದರ್ಶನ ಮಾಡುತ್ತಾರೆ ಎಂದು ಶೋಭಾ ಹೇಳಿದರು.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಬಗ್ಗೆ ಕಾಂಗ್ರೆಸ್ ನಲ್ಲಿ ಆರಂಭದಿಂದಲೂ ಚರ್ಚೆ ಇದೆ. ಅಧಿಕಾರಕ್ಕಾಗಿ ಹೊಡೆದಾಟ ನಡೆಯುತ್ತಿದೆ, ಲೋಕಸಭೆ ಚುನಾವಣೆ ಹೊತ್ತಿಗೆ ಈ ಬಿರುಕು ದೊಡ್ಡದಾಗುತ್ತದೆ, ಅದು ಯಾವ ಹಂತಕ್ಕೆ ತಲುಪುತ್ತದೆ ಎಂದು ಊಹಿಸುವುದು ಕಷ್ಟ. ಕಾಂಗ್ರೆಸ್‌ ನ ಹಲವಾರು ಗೆಳೆಯರು ಸರಕಾರ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಕಾದು ನೋಡೋಣ ಏನೇನಾಗುತ್ತೆ ಅಂತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಶ್ರೀರಾಮನ ಹೊಸ ಮೂರ್ತಿ ಬಾಲರೂಪದಲ್ಲಿಲ್ಲ, ವಿವಾದಿತ ಹೇಳಿಕೆ ನೀಡಿದ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌!