ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಆದರೆ ಹಿರಿಯ ವಕೀಲ ನಾಯಕ ಕಪಿಲ್ ಸಿಬಲ್ ಮತ್ತೆ ಸಿಡಿಮಿಡಿಗೊಂಡಿದ್ದಾರೆ. ರಾಮ ಮಂದಿರ ನಿರ್ಮಾಣವೇ ಒಂದು ಶೋ ಆಫ್ ಎಂದಿದ್ದಾರೆ.  

ನವದೆಹಲಿ(ಡಿ.26) ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಮೂಲಕ ಲೋಕಾರ್ಪಣೆಗೊಳ್ಳಲಿದೆ. 500 ವರ್ಷಗಳ ಸತತ ಹೋರಾಟದ ಫಲವಾಗಿ ಇದೀಗ ರಾಮ ಮಂದಿರ ನಿರ್ಮಾಣವಾಗಿದೆ. ಆದರೆ ಈ ಭವ್ಯ ರಾಮ ಮಂದಿರ ನಿರ್ಮಾಣವೇ ಒಂದು ಶೋ ಆಫ್ ಎಂದು ಹಿರಿಯ ವಕೀಲ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ. ರಾಮನ ಆದರ್ಶಕ್ಕೂ ಬಿಜೆಪಿ ನಡೆಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಯಾವ ಆದರ್ಶವಿಲ್ಲದ ಪಕ್ಷ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಆದರೆ ಕಪಿಲ್ ಸಿಬಲ್ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ನೀವು ಪಾಲ್ಗೊಳ್ಳುತ್ತೀರಾ ಎಂದು ಮಾಧ್ಯಮ ಕಪಿಲ್ ಸಿಬಲ್‌ರನ್ನು ಪ್ರಶ್ನೆ ಮಾಡಿತ್ತು. ರಾಮ ಮಂದಿರ ವಿಚಾರ ಕೇಳುತ್ತಿದ್ದಂತೆ ಕಪಿಲ್ ಸಿಬಲ್ ಉರಿದು ಬಿದ್ದಿದ್ದಾರೆ. ರಾಮ ಮಂದಿರ ನಿರ್ಮಾಣ ಬಿಜೆಪಿ ಮಾಡುತ್ತಿರುವ ಒಂದು ಶೋ ಆಫ್. ರಾಮನ ಯಾವುದೇ ಆದರ್ಶಗಳನ್ನು ಬಿಜೆಪಿ ಪಾಲಿಸುತ್ತಿಲ್ಲ. ಬಿಜೆಪಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಪಕ್ಷವಾಗಿದೆ ಎಂದು ಸಿಬಲ್ ಹೇಳಿದ್ದಾರೆ.

ಸುಪ್ರೀಂ ತೀರ್ಪಿಗೂ ಮುನ್ನ ಸೋಲೊಪ್ಪಿಕೊಂಡಿದ್ದ ಕಪಿಲ್‌ ಸಿಬಲ್ ಪೋಸ್ಟ್‌ ವೈರಲ್; ದುಯೋಧನನಿಗೆ ಹೋಲಿಸಿದ ನೆಟ್ಟಿಗರು!

ನನ್ನ ಹೃದಯದಲ್ಲಿ ರಾಮನಿದ್ದಾನೆ. ನನ್ನ ಕೆಲಕ್ಕೆ ರಾಮ ಪ್ರೇರಣೆ ನೀಡಿದ್ದಾನೆ. ಇದನ್ನು ಶೋ ಆಫ್ ಮಾಡಬೇಕಾದ ಅವಶ್ಯಕತೆ ನನಗಿಲ್ಲ. ರಾಮ ಮಂದಿರ ನಿರ್ಮಾಣದ ಶೋ ಆಫ್ ಮಾಡುತ್ತಿರುವುದು ಬಿಜೆಪಿ. ರಾಮ ನಮ್ಮ ಹೃದಯಲ್ಲಿರಬೇಕು. ಬಿಜೆಪಿಯಲ್ಲಿ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ಈ ಮೂಲಕ ರಾಮ ಮಂದಿರ ಉದ್ಘಾಟನೆಗೆ ತಾವು ತೆರಳುತ್ತಿಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.

2024ರ ಜ.22 ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಕನ್ನಡದ ಖ್ಯಾತ ನಟ ಯಶ್‌ ಸೇರಿ ಭಾರತದ ಚಿತ್ರರಂಗದ ಹಲವರಿಗೆ ಆಹ್ವಾನ ಕಳುಹಿಸಲಾಗಿದೆ. ರಣಬೀರ್‌ ಕಪೂರ್‌, ಆಲಿಯಾ ಭಟ್‌, ಟೈಗರ್‌ ಶ್ರಾಫ್‌, ಅಜಯ್‌ ದೇವಗನ್‌, ಸನ್ನಿ ಡಿಯೋಲ್‌, ಪ್ರಭಾಸ್‌ ಮತ್ತು ಆಯುಷ್ಮಾನ್‌ ಖುರಾನ್‌ ಅವರಿಗೆ ಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ. ಈ ಪೈಕಿ ಪ್ರಭಾಸ್ ಮತ್ತು ಯಶ್‌ ಇಬ್ಬರು ದಕ್ಷಿಣ ಭಾರತದವರಾದರೆ ಉಳಿದವರು ಬಾಲಿವುಡ್‌ ಸ್ಟಾರ್‌ ನಟರು. ಈ ಹಿಂದೆ ಅಮಿತಾಭ್‌ ಬಚ್ಚನ್‌, ಮಾಧುರಿ ದೀಕ್ಷಿತ್‌, ರಿಷಬ್‌ ಶೆಟ್ಟಿ ಸೇರಿ ಹಲವು ಹಿರಿಯ ತಾರೆಯರಿಗೆ ಆಹ್ವಾನ ಕಳುಹಿಸಲಾಗಿತ್ತು. ಈ ಎಲ್ಲ ಬಹುತೇಕ ನಟರು ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಮ ಮಂದಿರ ನಿರ್ಮಾಣ ಹೆಸರಲ್ಲಿ ದೇಣಿಗೆ ಸಂಗ್ರಹ, ವಂಚಕರಿಂದ ದೂರವಿರಲು VHP ಎಚ್ಚರಿಕೆ!