ಚುನಾವಣಾ ಅಭ್ಯರ್ಥಿಯಾಗಿ ಶ್ರೀರಾಮನ ಘೋಷಿಸುವುದು ಬಾಕಿ, ಬಿಜಿಪಿ ಕುಟುಕಿ ಟೀಕೆಗೆ ಗುರಿಯಾದ ಶಿವಸೇನೆ!
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರಾಮ ಮಂದಿರ ನಿರ್ಮಿಸಿ ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಆದರೆ ಶ್ರೀರಾಮ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಅನ್ನೋ ಆರೋಪವನ್ನು ವಿಪಕ್ಷಗಳು ಮಾಡುತ್ತಿದೆ. ಇದೀಗ ಬಿಜೆಪಿಯನ್ನು ಕುಟುಕಲು ಹೋದ ಶಿವಸೇನೆ ಭಾರಿ ವಿವಾದ ಮೈಮೇಲೆ ಎಳೆದುಕೊಂಡಿದೆ.
ಮುಂಬೈ(ಡಿ.30) ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಆಯೋಧ್ಯಾ ಧಾಮ ಜಂಕ್ಷನ್ ನವೀಕೃತ ರೈಲು ನಿಲ್ದಾಣದ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ವಂದೇ ಭಾರತ್ ರೈಲಿಗೂ ಚಾಲನೆ ನೀಡಿದ್ದಾರೆ. ಇಡೀ ಆಯೋಧ್ಯೆಯಲ್ಲಿ ಗತವೈಭವ ಮರುಕಳಿಸಿದೆ. ಆದರೆ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಅನ್ನೋ ಆರೋವನ್ನು ವಿಪಕ್ಷಗಳು ಮಾಡುತ್ತಲೇ ಇದೆ. ಇಷ್ಟೇ ಅಲ್ಲ ಇದೇ ಕಾರಣ ನೀಡಿ ರಾಮ ಮಂದಿರ ಉದ್ಘಾಟನೆಯಿಂದ ಹಿಂದೆ ಸರಿದಿದೆ. ಇದೀಗ ಶಿವಸೇನೆ ನಾಯಕ ಸಂಜಯ್ ರಾವತ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜಪಿಯನ್ನು ಟೀಕಿಸಲು ಹೋಗಿ ಶ್ರೀರಾಮನಿಗೆ ಅಗೌರವ ತೋರಿದ್ದಾರೆ. ಶ್ರೀರಾಮ ಮಂದಿರ ವಿಚಾರವನ್ನು ಬಿಜೆಪಿ ಸಂಪೂರ್ಣವಾಗಿ ರಾಜಕೀಯಕ್ಕೆ ಬಳಸಿಕೊಂಡಿದೆ ಎಂದಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ಶ್ರೀರಾಮನನ್ನು ಚುನಾವಣಾ ಅಭ್ಯರ್ಥಿಯಾಗಿ ಘೋಷಿಸುವುದೊಂದೆ ಬಾಕಿ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹತ್ತಿರವಾಗುತ್ತಿದ್ದಂತೆ ದೇಶದೆಲ್ಲಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಿಂದೆಂದೂ ಕಾಣದಂತಹ ಕಳೆ ಇದೀಗ ಎಲ್ಲೆಡೆ ಕಾಣುತ್ತಿದೆ. ಇಡೀ ದೇಶವೇ ಶ್ರೀರಾಮ ಮಂದಿರ ಉದ್ಘಾಟನೆಗೆ ಕಾಯುತ್ತಿದೆ. ಆಯೋಧ್ಯೆ ಸಂಪೂರ್ಣವಾಗಿ ಕಂಗೊಳಿಸುತ್ತಿದೆ. ದೇಶದ ಹಿಂದೂ ಭಕ್ತರು ತೋರಿಸುತ್ತಿರುವ ಆಸಕ್ತಿ, ಮುತುವರ್ಜಿ, ಭಕ್ತಿ ಭಾವ ಇದೀಗ ಶಿವಸೇನೆ ಸೇರಿದಂತೆ ವಿಪಕ್ಷಗಳ ಕಂಗೆಡೆಸಿದೆ. ಕಾರಣ ಇದೇ ಸಂಜಯ್ ರಾವತ್, ರಾಮ ಮಂದಿರ ಉದ್ಘಾಟನೆ ಕುರಿತು ಈ ಹಿಂದೆ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಶ್ರೀರಾಮ ಮಂದಿರ ಉದ್ಘಾಟನೆ ಯಾವುದೇ ರಾಷ್ಟ್ರೀಯ ಕಾರ್ಯಕ್ರಮವಲ್ಲ, ಇದು ಬಿಜೆಪಿ ಕಾರ್ಯಕ್ರಮ ಎಂದಿದ್ದರು. ಇದೀಗ ಶ್ರೀರಾಮ ಮಂದರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ ಅನ್ನೋ ಆರೋಪ ಮಾಡಿದ್ದಾರೆ.
ರಾಮ ಮಂದಿರ ನಿರ್ಮಾಣವೇ ಶೋ ಆಫ್, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿಕೆಗೆ ಆಕ್ರೋಶ!
ಶ್ರೀರಾಮನನ್ನು ಚುನಾವಣಾ ಅಭ್ಯರ್ಥಿ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ರಾಮಸೇತು ಒಡೆದು ಜಲ ಮಾರ್ಗ ರಚಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮುಂದಾಗಿತ್ತು. ಈ ವೇಳೆ ಯುಪಿಎ ಮಿತ್ರ ಪಕ್ಷ, ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಯೋಜನೆಗೆ ಎಲ್ಲಾ ಸಿದ್ಧತೆ ಮಾಡಿತ್ತು. ಆದರೆ ರಾಮ ಸೇತು ಒಡೆಯುವ ಯೋಜನೆಗೆ ರಾಮ ಭಕ್ತರ ವಿರೋಧ ವ್ಯಕ್ತವಾಗುತ್ತಿದ್ದಂತೆ, ರಾಮ ಯಾವ ಎಂಜಿನೀಯರಿಂಗ್ ಕಾಲೇಜಿನಲ್ಲಿ ಓದಿದ್ದ ಎಂದು ಅಂದಿಮ ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಪ್ರಶ್ನಿಸಿದ್ದರು.
ಇತ್ತ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಬಿಜೆಪಿ ಪಕ್ಷದ ರ್ಯಾಲಿ, ಶೋ ಗಳು ಮುಗಿದ ಬಳಿಕ ನಾನು ತೆರಳುತ್ತೇನೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆಯಿಂದ CPI(M) ದೂರ, ಅಸುರರು ದೇವಲೋಕ ಪ್ರವೇಶಿಸಲ್ಲ ಎಂದ ಜನ!