Asianet Suvarna News Asianet Suvarna News

ರಜನಿಗೆ ರಕ್ತನಾಳ ಸಂಬಂಧಿ ಶಸ್ತ್ರಚಿಕಿತ್ಸೆ, ಶೀಘ್ರ ಬಿಡುಗಡೆ

  • 2 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್‌ಸ್ಟಾರ್‌ ರಜನೀಕಾಂತ್‌
  •  ಕುತ್ತಿಗೆಯಲ್ಲಿರುವ ರಕ್ತನಾಳದ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ
Rajinikanth admitted to hospital in Chennai snr
Author
Bengaluru, First Published Oct 30, 2021, 8:37 AM IST

ಚೆನ್ನೈ (ಅ.30):2 ದಿನದ ಹಿಂದೆ ಆಸ್ಪತ್ರೆಗೆ (Hospital) ದಾಖಲಾಗಿದ್ದ ಸೂಪರ್‌ಸ್ಟಾರ್‌ (SuperStar) ರಜನೀಕಾಂತ್‌ (RajiniKanth) ಅವರು ಶುಕ್ರವಾರ ಕುತ್ತಿಗೆಯಲ್ಲಿರುವ ರಕ್ತನಾಳದ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದರಿಂದ ಅವರ ಮಿದುಳಿಗೆ ರಕ್ತ ಪೂರೈಕೆ ಸರಾಗವಾಗಲಿದೆ. ಶೀಘ್ರ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ಸಂಬಂಧ ಶುಕ್ರವಾರ ಚೆನ್ನೈನ (chennai) ಕಾವೇರಿ (Cauvery Hospital) ಆಸ್ಪತ್ರೆ ಹೇಳಿಕೆ ನೀಡಿದ್ದು, ‘ರಜನಿ ಅವರು ಕಾರೋಟಿಡ್‌ ಆರ್ಟರಿ ರಿವಾಸ್ಕುಲರೈಸೇಶನ್‌ ಪ್ರಕ್ರಿಯೆಗೆ (Carotid Artery revitalization) (ಕುತ್ತಿಗೆಯಲ್ಲಿರುವ ರಕ್ತನಾಳದ ಮರುಜೋಡಣೆ ಸರ್ಜರಿ) ಒಳಗಾಗಿದ್ದಾರೆ. ಸರ್ಜರಿ ಯಶಸ್ವಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ’ ಎಂದು ಸ್ಪಷ್ಟಪಡಿಸಿದೆ.

ರಜನಿಕಾಂತ್ 'ಅಣ್ಣಾತ್ತೆ' ಟ್ರೇಲರ್ ರಿಲೀಸ್: ದೀಪಾವಳಿಗೆ ತೆರೆಗೆ

ಇನ್ನು ಪ್ರಮುಖ ವೈದ್ಯರೊಬ್ಬರು (Doctor) ಈ ಬಗ್ಗೆ ಮಾತನಾಡಿ, ‘ಇದು ಮಿದುಳಿಗೆ ಸರಾಗವಾಗಿ ರಕ್ತ ಪರಿಚಲನೆ ಆಗುವಂತಹ ಶಸ್ತ್ರಚಿಕಿತ್ಸೆಯಾಗಿದೆ’ ಎಂದು ಹೇಳಿದ್ದಾರೆ.

ಆರೋಗ್ಯ ಸ್ಥಿರ, ವದಂತಿಗಳನ್ನು ನಂಬಬೇಡಿ: ರಜನೀಕಾಂತ್‌ ಪಿಆರ್‌ ಮ್ಯಾನೇಜರ್‌ ರಿಯಾಜ್‌ ಕೆ ಅಹ್ಮದ್‌ ಈ ಬಗ್ಗೆ ಪ್ರತಿಕ್ರಿಯಿಸಿ, ‘ತಲೈವರ್‌ ಚೆನ್ನಾಗಿದ್ದಾರೆ, ಸುಳ್ಳು ವದಂತಿಗಳನ್ನು ನಂಬಬೇಡಿ’ ಎಂದು ಧ್ವನಿ ಸಂದೇಶದ ಮೂಲಕ ತಿಳಿಸಿದ್ದಾರೆ.

ಸುರಕ್ಷತೆಗೆ ಪೋಲಿಸರ ನಿಯೋಜನೆ:  ಸುರಕ್ಷತೆಯ ದೃಷ್ಟಿಯಿಂದ ಸುಮಾರು 30 ಪೊಲೀಸ್‌ (Police) ಸಿಬ್ಬಂದಿಗಳನ್ನು ಕಾವೇರಿ ಆಸ್ಪತ್ರೆಯ ಹೊರಗಡೆ ನೇಮಕ ಮಾಡಲಾಗಿದೆ. ಇಬ್ಬರು ಸಬ್‌ ಇನ್ಪೆಕ್ಟರ್‌ ಹಾಗೂ ನಾಲ್ಕು ಮಹಿಳಾ ಕಾನ್‌ಸ್ಟೇಬಲ್‌ಗಳು ಪರಿಚಯ ಪತ್ರವನ್ನು ಪರಿಶೀಲಿಸಿದ ನಂತರ ಜನರನ್ನು ಆಸ್ಪತ್ರೆಗೆ ಪ್ರವೇಶಿಸಲು ಅನುಮತಿ ನೀಡುತ್ತಿದ್ದಾರೆ.

ಅಣ್ಣಾತ್ತೆ ರಿಲೀಸ್‌ಗೂ ಮುನ್ನಾ ಡಿಸ್ಚಾರ್ಜ್ ಆಗ್ತಾರಾ

 

ಸೌತ್ ಸೂಪರ್‌ಸ್ಟಾರ್(Superstar) ರಜನಿಕಾಂತ್(Rajinikamth) ಗುರುವಾರ ರಾತ್ರಿ ತಮಿಳುನಾಡಿನ(Tamilnadu) ಚೆನ್ನೈನಲ್ಲಿರುವ(Chennai) ಕಾವೇರಿ ಆಸ್ಪತ್ರೆಗೆ(Kauvery Hospital) ದಾಖಲಾಗಿದ್ದಾರೆ. ಅಣ್ಣಾತ್ತೆ ಟ್ರೈಲರ್ ರಿಲೀಸ್ ಬೆನ್ನಲ್ಲೇ ನಟ ಆಸ್ಪತ್ರೆಗೆ ದಾಖಲಾಗಿರುವ ಅವರ ಅಭಿಮಾನಿಗಳಿಗೆ ಅತಂಕ ಉಂಟುಮಾಡಿದೆ. ಆದರೆ ಇತ್ತೀಚಿನ ಅಪ್ಡೇಟ್ ಪ್ರಕಾರ ನಟ ರಜನಿಕಾಂತ್ ಅವರು ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಸಂಬಂಧಿ ಹಾಗೂ ನಟ ವೈ.ಜೀ ಮಹೇಂದ್ರನ್ ಖಚಿತಪಡಿಸಿದ್ದಾರೆ.

ಗುರುವಾರ ರಾತ್ರಿ ರಜನಿಕಾಂತ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಕಾಮನ್ ಆರೋಗ್ಯ ತಪಾಸಣೆ ಎಂದು ಅವರ ಪತ್ನಿ ಲತಾ ಮಾಧ್ಯಮಗಳಿಗೆ ಹೇಳಿದ್ದು, ಕೆಲವರು ನಟನಿಗೆ ಎದೆನೋವು ಮತ್ತು ಅಸ್ವಸ್ಥತೆ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಿದ್ದಾರೆ. ರಜನಿಕಾಂತ್ ಅವರ ಅಣ್ಣಾತ್ತೆ ಸಿನಿಮಾ ಬಿಡುಗಡೆಗೂ ಮುನ್ನ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಅವರು ಖಚಿತಪಡಿಸಿದ್ದಾರೆ.

ತಲೈವಾ ರಜನಿಕಾಂತ್ ಅಭಿನಯದ 'ಅನ್ನತ್ತೆ' ಟೀಸರ್ ರಿಲೀಸ್

ಆಸ್ಪತ್ರೆಯಲ್ಲಿ ರಜನಿಕಾಂತ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವೈ.ಜಿ ಮಹೇಂದ್ರನ್, ರಜನಿ ಅವರು ಇದೀಗ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಪಡೆಯುತ್ತಿರುವ ಚಿಕಿತ್ಸೆಯ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ, ಆದರೆ ಅವರು ಚೆನ್ನಾಗಿದ್ದಾರೆ. ಅಣ್ಣಾತ್ತೆ ಬಿಡುಗಡೆಗೂ ಮುನ್ನ ಅವರನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ರಜನಿಕಾಂತ್ ಅವರ ಅಣ್ಣಾತ್ತೆ ದೀಪಾವಳಿ, ನವೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್, ಮೀನಾ ಮತ್ತು ಖುಷ್ಭು ಸುಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಡಿ.ಇಮ್ಮಾನ್ ಸಂಗೀತ ನೀಡಿದ್ದಾರೆ.

ಹಳ್ಳಿಯ ಕಥಾ ಹಂದರ ಇರುವ ಈ ಚಿತ್ರ ಪಕ್ಕಾ ಕೌಟುಂಬಿಕ ಸಿನಿಮಾದಂತೆ ಕಾಣುತ್ತದೆ. ಹಾಗೂ ಕೀರ್ತಿ ಸುರೇಶ್‌ (Keerthi Suresh), ರಜನಿಕಾಂತ್ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತಿಚೆಗಷ್ಟೇ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಪಾಲ್‌ಸಾಮಿಯಾಗಿ ರಜನಿಕಾಂತ್ ಅವರು ಭರ್ಜರಿ ಆಕ್ಷನ್‌ನೊಂದಿಗೆ ಮಾಸ್ ಎಂಟ್ರಿ ಕೊಟ್ಟಿದ್ದರು.

Follow Us:
Download App:
  • android
  • ios