Asianet Suvarna News Asianet Suvarna News

ರಜನಿಕಾಂತ್ 'ಅಣ್ಣಾತ್ತೆ' ಟ್ರೇಲರ್ ರಿಲೀಸ್: ದೀಪಾವಳಿಗೆ ತೆರೆಗೆ

ರಜನಿಕಾಂತ್ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ರಜನಿಕಾಂತ್‌ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ ನೀಡಿದ್ದಾರೆ. 
 

tamil movie annaatthe official trailer out starred rajinikanth
Author
Bangalore, First Published Oct 28, 2021, 1:48 PM IST
  • Facebook
  • Twitter
  • Whatsapp

ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ (Rajinikanth)ಅಭಿನಯದ ಬಹು ನಿರೀಕ್ಷಿತ ಚಿತ್ರ 'ಅಣ್ಣಾತ್ತೆ' (Annaatthe) ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದ್ದು, ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ (YouTube Trending) ನಂಬರ್ 1 ಸ್ಥಾನದಲ್ಲಿದೆ. ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ (Fans) ಕುತೂಹಲ ಹೆಚ್ಚಿದ್ದು, ಸಿನಿಮಾ ಬಿಡುಗಡೆಗೆ ಕಾತುರರಾಗಿದ್ದಾರೆ. ರಜನಿಕಾಂತ್ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ರಜನಿಕಾಂತ್‌ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ (Mass Look) ನೀಡಿದ್ದಾರೆ. 
 


ಹಳ್ಳಿಯ ಕಥಾ ಹಂದರ ಇರುವ ಈ ಚಿತ್ರ ಪಕ್ಕಾ ಕೌಟುಂಬಿಕ ಸಿನಿಮಾದಂತೆ ಕಾಣುತ್ತದೆ. ಹಾಗೂ ಕೀರ್ತಿ ಸುರೇಶ್‌ (Keerthi Suresh), ರಜನಿಕಾಂತ್ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತಿಚೆಗಷ್ಟೇ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಪಾಲ್‌ಸಾಮಿಯಾಗಿ ರಜನಿಕಾಂತ್ ಅವರು ಭರ್ಜರಿ ಆಕ್ಷನ್‌ನೊಂದಿಗೆ ಮಾಸ್ ಎಂಟ್ರಿ ಕೊಟ್ಟಿದ್ದರು. ರಜನಿ ಸ್ಲೋ ಮೋಷನ್ ವಾಕ್, ಪಂಚಿಂಗ್ ಡೈಲಾಗ್‌ ನೋಡುಗರಿಗೆ ಸಖತ್ ಕಿಕ್ ಕೊಟ್ಟಿತ್ತು. ಮತ್ತು  ರಜನಿಕಾಂತ್  ಡಬಲ್ ಶೇಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಹಿಂಟ್ ನೋಡುಗರಿಗೆ ಕಾಣಿಸಿತ್ತು. 2020 ರಲ್ಲಿ ಎ.ಆರ್.ಮುರುಘದಾಸ್ (A.R.Murugadoss) ನಿರ್ದೇಶನದ 'ದರ್ಬಾರ್' (Darbar) ಬಿಡುಗಡೆಯಾದ ನಂತರ ರಜನಿಕಾಂತ್ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ.

ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿದ ರಜನಿಕಾಂತ್

'ಅಣ್ಣಾತ್ತೆ' ಚಿತ್ರ ಕೋವಿಡ್ ಮತ್ತು ನಿರ್ಮಾಣ ಕಾರ್ಯಗಳಿಂದ ವಿಳಂಬವಾಗಿದ್ದರಿಂದ ಬಿಡುಗಡೆಯ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿತ್ತು. ಇದೀಗ 'ಅಣ್ಣಾತ್ತೆ' ಚಿತ್ರ ನವೆಂಬರ್ 4 ದೀಪಾವಳಿ (Diwali) ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಇದರ ಹಕ್ಕುಗಳನ್ನು ಪ್ರಮುಖ ವಿತರಣಾ ಕಂಪನಿ ಏಷ್ಯನ್ ಸಿನಿಮಾಸ್ (Asian Cinemas) ಖರೀದಿಸಿದೆ.  ಸನ್ ಪಿಕ್ಚರ್ಸ್ (Sun Pictures) ನಿರ್ಮಾಣದಲ್ಲಿ ಮೂಡಿಬಂದಿರುವ 'ಅಣ್ಣಾತ್ತೆ' ಚಿತ್ರದ ಟೈಟಲ್ ಟ್ರ್ಯಾಕ್ (Title Track) ಇತ್ತೀಚೆಗಷ್ಟೇ ಬಿಡುಗಡೆಯಾಗಿ, ರಜನಿಕಾಂತ್ ವೈಟ್ ಆ್ಯಂಡ್ ವೈಟ್ ಪಂಚೆ-ಶರ್ಟ್ ಧರಿಸಿ, ಕನ್ನಡಕ ಧರಿಸಿ ಟ್ರೆಡಿಷನಲ್ ಲುಕ್​ನಲ್ಲಿ ಮಾಸ್ ಆಗಿ ಹಾಡಿನಲ್ಲಿ ಮಿಂಚಿದ್ದರು. ಈ ಹಾಡನ್ನು ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ (SP.Balasubramaniam) ಹಾಡಿದ್ದರು.

ಅಣ್ಣಾತ್ತೆ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್ ರಿಲೀಸ್!

ಎಸ್‌ಪಿಬಿ ಅವರು ಹಾಡಿದ ಕೊನೆಯ ಹಾಡು ತಲೈವಾ ಸಿನಿಮಾ 'ಅಣ್ಣಾತ್ತೆ'ಯಲ್ಲಿದೆ.  'ಅಣ್ಣಾತ್ತೆ' ಸಿನಿಮಾದ ಟೈಟಲ್ ಸಾಂಗ್‌ಗೆ ಧ್ವನಿ ಕೊಟ್ಟಿದ್ದು ಎಸ್‌ಪಿಬಿ. ವಿಶೇಷತೆ ಎಂದರೆ ಇದು ಎಸ್‌ಪಿಬಿ (SPB) ಅವರು ಹಾಡಿದ ಕೊನೆಯ ಹಾಡೂ ಹೌದು. 'ಅಣ್ಣಾತ್ತೆ' ಆಕ್ಷನ್ ಚಿತ್ರವನ್ನು ಶಿವ (Siva) ನಿರ್ದೇಶಿಸುತ್ತಿದ್ದು, ರಜನಿಕಾಂತ್ ಜೊತೆ ನಟಿಯರಾದ ನಯನತಾರಾ (Nayanthara), ಮೀನಾ (Meena), ಖುಷ್ಬೂ (Kushbu), ಕೀರ್ತಿ ಸುರೇಶ್ (Keerthi Suresh) ಕಾಣಿಸಿಕೊಂಡರೆ ಟಾಲಿವುಡ್ ನಟ ಜಗಪತಿ ಬಾಬು (Jagapathi Babu) ಮತ್ತು ಪ್ರಕಾಶ್ ರಾಜ್ (Prakash Raj) ಸೇರಿದಂತೆ ಇತರ ನಟರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಡಿ. ಇಮ್ಮಾನ್ (D.Imman)  ಸಂಗೀತ ಸಂಯೋಜಿಸಿದ್ದು, ವೆಟ್ರಿ  ಪಳನಿಸಾಮಿ (Vetri Palanisamy) ಕ್ಯಾಮೆರಾ ಕೈಚಳಕವಿದೆ. 

ಇನ್ನು, ರಜನಿಕಾಂತ್ ಅವರು ಅಕ್ಬೋಬರ್ 25ರಂದು ದೆಹಲಿಯ ವಿಜ್ಞಾನ ಭವನದಲ್ಲಿ 2019ನೇ ಸಾಲಿನ 51ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ರಂಗದವರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke award).

"

Follow Us:
Download App:
  • android
  • ios