Asianet Suvarna News Asianet Suvarna News

ಭಾರತದಲ್ಲಿ ಮಂಚದ ಗಾಡಿ ಸಂಚಲನ, ಕ್ರಿಯಾತ್ಮಕ ಐಡಿಯಾಗೆ ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್!

ಕಬ್ಬಿಣದ ಮಂಚಗಳನ್ನು ರಾತ್ರಿ ವೇಳೆ ನಿದ್ರಿಸಲು ಮಾತ್ರವಲ್ಲ, ಆಸನವಾಗಿ, ವಿಶ್ರಾಂತಿಗಾಗಿ ಸೇರಿದಂತೆ ಹಲವು ಕಾರಣಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ ಇದೇ ಮಂಚ ವಾಹನವಾಗಿ ಉಪಯೋಗಿಸಲು ಸಾಧ್ಯವೆ? ಸಾಧ್ಯವಿದೆ. ಇದೇ ಸಣ್ಣ ಕಬ್ಬಿಣ ರಾಡ್‌ಗಳ ಮಂಚವನ್ನು ವಾಹನವನ್ನಾಗಿ ಮಾಡಿರುವ ಖಾತಿಯಾ ಗಾಡಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

Rajasthan Man innovation Khatiya gaadi viral on social media Anand Mahindra share post ckm
Author
First Published Jun 14, 2023, 3:45 PM IST | Last Updated Jun 14, 2023, 3:49 PM IST

ಮುಂಬೈ(ಜೂ.14) ಭಾರತದಲ್ಲಿ ಕೆಲವು ಕ್ರಿಯಾತ್ಮಕ ಐಡಿಯಾಗಳು ಊಹೆಗೂ  ನಿಲುಕುವುದಿಲ್ಲ. ಕೈಗೆಟುವ ವಸ್ತುಗಳಿಂದ ತಮ್ಮ ಬಳಕೆಗೆ, ದಿನನಿತ್ಯದ ಅಗತ್ಯಕ್ಕೆ ಬೇಕಾದಂತೆ ವಸ್ತುಗಳನ್ನು ಪರಿವರ್ತನ ಮಾಡಿದ ಹಲವು ಉದಾಹರಣೆಗಳಿವೆ. ಇಂಡಿಯನ್ ಜುಗಾಡ್ ಹೆಸರಿನಲ್ಲಿ ಹಲವು ಭಾರಿ ವೈರಲ್ ಆಗಿದೆ. ಹಲವು ವಿಡಿಯೋಗಳನ್ನು ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಇದೀಗ ಆನಂದ್ ಮಹೀಂದ್ರ ಇದೇ ರೀತಿಯ ವಿಡಿಯೋ ಹಂಚಿಕೊಂಡಿದ್ದಾರೆ. ಖಾತಿ ಬೆಡ್ ನೀವು ನೋಡಿರಬಹುದು, ಅಥವಾ ಕೇಳಿಬರವುದು. ರಾಜಸ್ಥಾನ ಸೇರಿದಂತೆ ದೇಶದ ಬಹುತೇಕ ಭಾಗದಲ್ಲಿ ಖಾತ್(ಮಂಚ) ಬೆಡ್ ಬಳಕೆ ಮಾಡುತ್ತಾರೆ. ಇದೀಗ ಇದೇ ಖಾತ್ ಬೆಡ್ ಮೂಲವಾಗಿಟ್ಟುಕೊಂಡು ವಾಹನವೊಂದನ್ನು ತಯಾರಿಸಲಾಗಿದೆ. ಖಾತಿಯಾ ಗಾಡಿ(ಮಂಚದ ಕಾರು) ಎಂಬ ಹೆಸರಿನಲ್ಲಿ ಈ ವಾಹನ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಖಾತಿಯಾ ಗಾಡಿ ವೈರಲ್ ಆಗಿದೆ.

ಈಗಾಗಲೇ ಭಾರತದಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಕೂಟರ್ ಸೇರಿದಂತೆ ಹಲವು ವಾಹನಗಳನ್ನು, ಎಂಜಿನ್‌ಗಳನ್ನು ಪರಿವರ್ತನೆ ಮಾಡಿ ಹೊಸ ವಾಹನವನ್ನಾಗಿ ಬದಲಾಯಿಸಲಾಗಿದೆ. ಆದರೆ ಮಂಚದ ರೀತಿಯಲ್ಲಿ ಒಂದು ವಾಹನ ತಯಾರಿಸಲು ಸಾಧ್ಯವಿದೆ. ಇದನ್ನು ಕಾರ್ಯರೂಪಕ್ಕೆ ಇಳಿಸಲು ಸಾಧ್ಯವಿದೆ ಅನ್ನೋದನ್ನು ಇದೀಗ ಸಾಬೀತುಪಡಿಸಲಾಗಿದೆ. ಈ ಮೂಲಕ ಇನೋವೇಶನ್‌ಗೆ ಗಡಿಗಳಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.

ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ

ರಾಜಸ್ಥಾನದ ಮೂಲದ ವ್ಯಕ್ತಿಯ ಈ ಕ್ರಿಯಾತ್ಮಕ ಐಡಿಯಾಗೆ ಉದ್ಯಮಿ ಆನಂದ್ ಮಹೀಂದ್ರ ಮನಸೋತಿದ್ದಾರೆ. ಈ ಕುರಿತು ವಿಡಿಯೋವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಇದೇ ವೇಳೆ ನನಗೆ 10 ಗೆಳೆಯರು ಈ ವಿಡಿಯೋವನ್ನು ಕಳುಹಿಸಿದ್ದರು. ಆದರೆ ನಾನು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ರೀ ಟ್ವೀಟ್ ಮಾಡಲು ಹೋಗಿಲ್ಲ. ಕಾರಣ ಇದು ನಕಲಿಯಾಗಿರಬಹುದು. ಇದರಿಂದ ಕೆಲ ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಮಾಧ್ಯಮದಿಂದ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂದು ನಿರ್ಲಕ್ಷ್ಯಿಸಿದ್ದೆ. ಆದರೆ ಇದೀಗ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ಕಾರಣ, ಈ ಐಡಿಯಾ, ಈ ವಾಹನ ಹಲವರಿಗೆ ನೆರವಾಗಲಿದೆ. ತುರ್ತು ಆರೋಗ್ಯ ಸಂದರ್ಭದಲ್ಲಿ ಈ ವಾಹನ ಹಲವರ ಜೀವ ಉಳಿಸುವ ಕಾರ್ಯದಲ್ಲಿ ನರೆವಾಗಲಿದೆ. ಗ್ರಾಮೀಣ ಪ್ರದೇಶಗಳಿಗೆ ಈ ವಾಹನ ಅತ್ಯಂತ ಉಪಕಾರಿ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

 

 

ಈ ವಿಡಿಯೋದಲ್ಲಿ ಮಂಚದ ಗಾಡಿ ತಯಾರಿಸಿದ ವ್ಯಕ್ತಿ ಸುಲಭವಾಗಿ ಈ ವಾಹನ ಚಲಾಯಿಸುವ ದೃಶ್ಯವಿದೆ. ಪೆಟ್ರೋಲ್ ಬಂಕ್‌ನಿಂದ ರಸ್ತೆ ಮೂಲಕ ಸಾಗಿ ಮತ್ತೆ ಬಂಕ್‌ಗೆ ಬಂದ ಈತ, ಖಾತಿಯಾ ಗಾಡಿ ಕುರಿತು ಕೆಲ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸಾಮಾನ್ಯ ಕಬ್ಬಿಣದ ಮಂಚ(ಕಾಟ್)ವನ್ನು ವಾಹನವನ್ನಾಗಿ ಪರಿವರ್ತಿಸಲಾಗಿದೆ. ಇದಕ್ಕೆ ನಾಲ್ಕು ಸೈಕಲ್ ಚಕ್ರಗಳನ್ನು ಬಳಸಲಾಗಿದೆ. ಹಿಂಬಾಗದ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಸ್ಟೀರಿಂಗ್ ವ್ಹೀಲ್ ಇಡಲಾಗಿದ್ದು, ಸುಲಭವಾಗಿ ಚಾಲನೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಫ್ಯಾನ್ ಸಹಾಯದಿಂದ ಐಸ್ ಕ್ರೀಂ ಮಾಡಿದ ಮಹಿಳೆ, ಆನಂದ್ ಮಹೀಂದ್ರಾ ವಿಡಿಯೋ ವೈರಲ್

ಸರ್ಕಾರ ಸೈಕಲ್ ರಿಕ್ಷಾಗೆ ಎಲೆಕ್ಟ್ರಿಕ್ ಮೋಟಾರು ಅಳವಡಿಸಲು ಅನುಮತಿ ನೀಡಿದೆ. ಆದರೆ ಸರ್ಕಾರ ಮಂಚವನ್ನು ವಾಹನ್ನಾಗಿ ಮಾಡುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲ್ಲ. ಹೀಗಾಗಿ ಈ ವಾಹನಕ್ಕೆ ಅಧಿಕೃತ ಮಾನ್ಯತೆ ಕುರಿತು ಹಲವು ಪ್ರಶ್ನೆಗಳು ಏಳುವ ಸಾಧ್ಯತೆ ಇದೆ.
 

Latest Videos
Follow Us:
Download App:
  • android
  • ios