ಜೈಪುರ(ಆ.20): ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರಿಗೆ ಹೊಟ್ಟೆ ತುಂಬಿಸಲು ಕೈಗೆಟಕುವ ದರದಲ್ಲಿ ಊಟ ಸಿಗುವಂತೆ ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ ರಾಜಸ್ಥಾನದ ಕಾಂಗ್ರೆಸ್ ಸರಕಾರವೂ ಯೋಜನೆಯೊಂದು ಜಾರಿಗೊಳಿಸದೆ. ಆಗಸ್ಟ್‌ 20ರಿಂದ ರಾಜಸ್ಥಾನದಲ್ಲಿ ಇಂದಿರಾ ರಸೋಯ್ ಯೋಜನೆ ಜಾರಿಯಾಗಿದ್ದು. ಈ ಯೋಜನೆಯಡಿಯಲ್ಲಿ ಬಡ ಜನರಿಗೆ 8 ರೂಪಾಯಿಗೆ ಪೌಷ್ಟಿಕ ಆಹಾರ ನೀಡಲು ಉದ್ದೇಶಿಲಾಗಿದೆ.

ಒಂದು ಥಾಲಿಯಲ್ಲಿ 100 ಗ್ರಾಂ ಕಾಳು, 100 ಗ್ರಾಂ ತರಕಾರಿ, 250 ಗ್ರಾಂ ಚಪಾತಿ ಹಾಗು ಉಪ್ಪಿನಕಾಯಿ ಇರಲಿದೆ. ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಜಿಲ್ಲಾ ಸಮಿತಿ ಆಹಾರ ಮೆನುವಿನಲ್ಲಿ ಬದಲಾವಣೆ ಮಾಡಿಕೊಳ್ಳಬಹುದೆಂದು ಸರ್ಕಾರ ತಿಳಿಸಿದೆ. ಗುರುವಾರ ಸಿಎಂ ಅಶೋಕ್ ಗೆಹ್ಲೋಟ್ ಇಂದಿರಾ ರಸೋಯ್ ಯೋಜನೆ ಉದ್ಘಾಟಿಸಲಿದ್ದಾರೆ.

ರಾಮನಿಗೆ ಪೂಜೆ ಮಾಡಿದ ಮುಸ್ಲಿಂ ಮಹಿಳೆಯರಿಗೆ ಜೀವ ಬೆದರಿಕೆ ಕರೆ

ಯೋಜನೆ 213 ಪ್ರದೇಶದಗಳಲ್ಲಿ ಆರಂಭವಾಗಲಿದ್ದು, ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆ ಹಾಗೂ 5 ಗಂಟೆಯಿಂದ 8 ಗಂಟೆಯ ವರೆಗೆ ಇರಲಿದೆ. ಜೈಪುರ ಜಿಲ್ಲೆಯ 12 ಮುನ್ಸಿಪಾಲಿಟಿಗಳಲ್ಲಿ ಯೋಜನೆ ಲಭ್ಯವಾಗಲಿದೆ ಎಂದು ಜೈಪುರ ಡಿಸಿ ಅಂತರ್ ಸಿಂಗ್ ನೆಹ್ರಾ ತಿಳಿಸಿದ್ದಾರೆ.

ಈ ಯೋಜನೆ ಪ್ರಯೋಜನ ಪಡೆಯಲು ಯಾವುದೇ ದಾಖಲೆ ನೀಡಬೇಕಿಲ್ಲ, ಯಾರು ಬೇಕಿದ್ದರೂ 8 ರೂಪಾಯಿ ಕೊಟ್ಟು ಊಟ ಮಾಡಬಹುದು. ಸರ್ಕಾರ ಒಂದು ಥಾಲಿಗೆ 12 ರೂಪಾಯಿಯಂತೆ 100 ಕೋಟಿಯನ್ನು ಯೋಜನೆಗಾಗಿ ನೀಡಲಿದೆ.

ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಲಿ: ಪ್ರಿಯಾಂಕ ಗಾಂಧಿ

ಈಗಾಗಲೇ ಹಲವು ರಾಜ್ಯದಲ್ಲಿ ಬಡವರಿಗೆ ಕಡಿಮೆ ಬೆಲೆಗೆ ಆಹಾರ ನೀಡುವ ಯೋಜನೆಗಳಿವೆ. ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಇದ್ದು, ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ 2016ರಲ್ಲಿ ಯೋಜನೆ ಆರಂಭಿಸಿದ್ದರು. ನಂತರದಲ್ಲಿ ಕರ್ನಾಟಕ ಹಾಗೂ ಒಡಿಶಾದಲ್ಲಿಯೂ ಇದೇ ರೀತಿ ಯೋಜನೆ ಆರಂಭವಾಗಿದೆ. ಕರ್ನಾಟಕದಲ್ಲಿ ಅಪ್ಪಾಜಿ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್ ಇದೆ.

ಪಾಕ್-ಚೀನಾ ಕಣ್ತಪ್ಪಿಸಿ ಲಡಾಖ್‌ಗೆ ಭಾರತದಿಂದ ರಹಸ್ಯ ರಸ್ತೆ ಮಾರ್ಗ

ದೆಹಲಿಯಲ್ಲಿ ಆಮ್ ಆದ್ಮಿ ಕ್ಯಾಂಟೀನ್ ಮೂಲಕ ಬಡವರಿಗಾಗಿ ಆಹಾರ ಒದಗಿಸಲಾಗುತ್ತದೆ. ಮಧ್ಯಪ್ರದೇಶದಲ್ಲಿ ದೀನ ದಯಾಳ್ ರಸೋಯ್ ಯೋಜನೆಯಡಿ ಬಡವರಿಗೆ ಕಡಿಮೆ ಬೆಲೆಗೆ ಆಹಾರ ಒದಗಿಸಲಾಗುತ್ತಿದೆ. ಛತ್ತೀಸ್‌ಗಡ್‌ನಲ್ಲಿ 5 ರೂಪಾಯಿಗೆ ಆಹಾರ ಒದಗಿಸಲಾಗುತ್ತಿದೆ.