ನವದೆಹಲಿ (ಆ.20): ಪಾಕಿಸ್ತಾನ ಹಾಗೂ ಚೀನಾ ಗಡಿಗೆ ಭಾರತದ ಪಡೆಗಳನ್ನು ಶತ್ರುಗಳಿಗೆ ಕಾಣಿಸದಂತೆ ಕಳಿಸಲು ಭಾರತ ಹೊಸ ರಸ್ತೆ ಯೋಜನೆಯೊಂದನ್ನು ರೂಪಿಸಿದೆ. ಮನಾಲಿಯಿಂದ ಲೇಹ್‌ಗೆ ಹೊಸ ರಸ್ತೆ ನಿರ್ಮಿಸಲು ಭಾರತ ಯೋಜನೆ ಸಿದ್ಧಪಡಿಸಿದ್ದು, ಇದರಿಂದ ಲಡಾಖ್‌ನಂತಹ ಎತ್ತರದ ಪ್ರದೇಶಕ್ಕೆ 3ನೇ ರಸ್ತೆ ಸಂಪರ್ಕ ಲಭಿಸಲಿದೆ.

ಮನಾಲಿಯಿಂದ ನಿಮು-ಪದಂ-ಡಚ್ರಾ ಮಾರ್ಗವಾಗಿ ಲೇಹ್‌ಗೆ ಈ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಈಗಾಗಲೇ ಅಸ್ತಿತ್ವದಲ್ಲಿರುವ 2 ಮಾರ್ಗಗಳಿಗಿಂತ ಬೇಗ ಲೇಹ್‌ ತಲುಪಬಹುದಾಗಿದ್ದು, 4 ತಾಸಿನಷ್ಟುಪ್ರಯಾಣ ಸಮಯ ಉಳಿತಾಯವಾಗಲಿದೆ ಎಂದು ಮೂಲಗಳು ಹೇಳಿವೆ.

ಕಲ್ಲುಗಳಿಂದಲೇ ನಿರ್ಮಾಣ: 1 ಸಾವಿರ ವರ್ಷ ಬಲಿಷ್ಠವಾಗಿರುತ್ತೆ ರಾಮ ಮಂದಿರ.

ಅಲ್ಲದೆ, ಈ ಮಾರ್ಗದ ಮೂಲಕ ಪಡೆಗಳು ಹಾಗೂ ಯುದ್ಧ ಟ್ಯಾಂಕರ್‌ಗಳು ಲಡಾಖ್‌ನತ್ತ ಸಾಗಿದಾಗ ಪಾಕಿಸ್ತಾನ ಹಾಗೂ ಚೀನಾಗಳಿಗೆ ಪಡೆಗಳ ಚಲನವಲನ ಗುರುತಿಸಲೂ ಆಗುವುದಿಲ್ಲ ಎಂದು ಅವು ಹೇಳಿವೆ.

18ನೇ ವಯಸ್ಸಿಗೆ ಸೈನಿಕನಾದ, 24ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧ!

ಈವರೆಗೆ ಈ ಮಾರ್ಗದಲ್ಲಿ ಕೇವಲ ಸರಕು ಸಾಗಣೆ ಮಾಡಲಾಗುತ್ತಿತ್ತು.