ಬೆಂಗಳೂರು, (ಮೇ.28): ಸಾಧನೆ ಯಾರೊಬ್ಬರ ಸೊತ್ತು ಅಲ್ಲ. ಅದು ಸಾಧಕರ ಸೊತ್ತು ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಅದಕ್ಕೆ ಛಲವೊಂದಿದ್ದರೇ ಸಾಕು.

ಹೌದು....ದೆಹಲಿ ಪೊಲೀಸ್‌ ಕಾನ್ಸ್‌ಸ್ಟೇಬಲ್ ಒಬ್ಬರು ಯುಪಿಎಸ್‌ಸಿ ಪಾಸ್ ಮಾಡಿ ಗಮನಸೆಳೆದಿದ್ದಾರೆ.  ಉತ್ತರ ಪ್ರದೇಶದ  ಪಿಲ್ಖುವಾ ಜಿಲ್ಲೆಯ ಹಾಪುರ್ ಮೂಲದ ಫಿರೋಜ್ ಆಲಂ ದೆಹಲಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದರು. ಇದೀಗ ಅವರು ಪಟ್ಟಪರಿಶ್ರಮದಿಂದ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿದ್ದಾರೆ. 

ಕೋಚಿಂಗ್ ಗೆ ಲಕ್ಷಗಟ್ಟಲೇ ಖರ್ಚು ಮಾಡದೇ UPSC ಪಾಸ್ ಆಗಲು ಇಲ್ಲಿದೆ ಉತ್ತಮ ಸಲಹೆಗಳು

 12ನೇ ತರಗತಿ ಪೂರ್ಣಗೊಳಿಸಿದ ಆಲಂ, 2010ರಲ್ಲಿ ದೆಹಲಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆದರು. ಬಳಿಕ ವೃತ್ತಿ ನಿರ್ವಹಿಸುತ್ತಲ್ಲೇ ಅವರು ತಮ್ಮ ವಿದ್ಯಾಭ್ಯಾಸವನ್ನು ಬಿಡಲಿಲ್ಲ. ಡ್ಯೂಟಿಯೊಂದಿಗೆ ಬಿಡುವಿನ ಸಮಯದಲ್ಲಿ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದರು. 

ಫಿರೋಜ್ ಆಲಂ ಸತತ ಪ್ರಯತ್ನದ ಬಳಿಕ ರಲ್ಲಿ ಆರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಕ್ಲಿಯರ್ ಮಾಡಿಕೊಂಡರು. 645 ರ್ಯಾಂಕ್ ಪಡೆಯುವ ಮೂಲಕ ಭಾರತೀಯ ಪೊಲೀಸ್ ಸೇವೆಯನ್ನು ಆಯ್ಕೆ ಮಾಡಿಕೊಂಡರು. ಸದ್ಯ ದೆಹಲಿ ಪೊಲೀಸ್ ತರಬೇತಿ ಕೇಂದ್ರದ ಖಡೋದಕಲದಲ್ಲಿ ತರಬೇತಿ ಪಡೆಯುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಸಿಪಿ ಕ್ಯಾಪ್ ತೊಡಲಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಲಂ 2010ರಲ್ಲಿ ದೆಹಲಿ ಪೊಲೀಸ್‌ ಕ್ಯಾಂಪ್‌ಗೆ ಸೇರಿದ ನಂತರ ನನ್ನ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸಿದ ರೀತಿ ಮತ್ತು ಅವರ ಸ್ಥಾನಮಾನದ ಬಗ್ಗೆ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರನ್ನು ನೋಡಿದ ಬಳಿಕ ನಾನು ಕೂಡ ಅಧಿಕಾರಿಯಾಗಬೇಕೆಂದು ನಿರ್ಧರಿಸಿದ್ದೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.