ಪತ್ನಿ, ಮಕ್ಕಳು ಸಹಿತ ತೆರೆದ ಗುಂಡಿಗೆ ಬಿದ್ದ ಬೈಕ್‌ ಸವಾರ: ಶಾಕಿಂಗ್‌ ವಿಡಿಯೋ ಸಿಸಿವಿಟಿಯಲ್ಲಿ ಸೆರೆ!

 ಪತ್ನಿ, ಮಕ್ಕಳು ಸಹಿತ ತೆರೆದ ಗುಂಡಿಗೆ ಬಿದ್ದ ಬೈಕ್‌ ಸವಾರ: ಶಾಕಿಂಗ್‌ ಘಟನೆ ಸಿಸಿವಿಟಿಯಲ್ಲಿ ಸೆರೆಯಾಗಿದ್ದು, ಅದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 
 

Open Drain tragedy in hyderabad video gone viral Be careful while driving  suc

ತೆರೆದ ಗುಂಡಿ, ಮ್ಯಾನ್‌ ಹೋಲ್‌ಗಳು ಪಡೆದಿರುವ ಬಲಿಗಳು ಅದೆಷ್ಟೋ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಅದೆಷ್ಟೋ ಪ್ರಾಣಗಳು ಹಾರಿ ಹೋಗುತ್ತಿವೆ. ಮಕ್ಕಳು, ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಅಂತೂ ಇಂಥ ಮ್ಯಾನ್‌ಹೋಲ್‌ಗಳು ಯಮಧರ್ಮನ ರೂಪದಲ್ಲಿ ಬಾಯ್ತೆರೆದು ನಿಂತು ಅಸಂಖ್ಯಜೀವವನ್ನು ಬಲಿ ಪಡೆದಿರುವ ಸಾಕಷ್ಟು ಉದಾಹರಣೆಗಳೇ ಇವೆ. ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾದರೆ ಅಂಥ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತದೆ. ಮತ್ತದೇ ಕಳಪೆ ಕಾಮಗಾರಿ, ಅಧಿಕಾರಿಗಳ, ಜನ ಪ್ರತಿನಿಧಿಗಳ ದುಡ್ಡು ತಿನ್ನುವ ಹಪಾಹಪಿ... ಇವುಗಳ ನಡುವೆ ಜನ ಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲದ ಸ್ಥಿತಿ ಬಹುತೇಕ ರಾಜ್ಯಗಳಲ್ಲಿ ನಿರ್ಮಾಣವಾಗಿದೆ. ವೋಟಿನ ಆಸೆಗೆ ಬಿದ್ದು, ಮತದಾರರಿಗೆ ಆಮಿಷ ಒಡ್ಡುವುದು, ಮತದಾರರು ಕೂಡ ಒಂದಿಷ್ಟು ಕಾಸಿಗೆ ಜೊಲ್ಲು ಸುರಿಸುವುದು ಇವುಗಳ ನಡುವೆ ಕೊನೆಗೆ ಬಲಿಯಾಗುವುದು ಮಾತ್ರ ಅದೇ ಮತದಾರ ಎನ್ನುವ ಸತ್ಯ ಮಾತ್ರ ಕಹಿಯಾದದ್ದೇ.

ಇದೀಗ ಅಂಥದ್ದೇ ಒಂದು ಭಯಾನಕ ವಿಡಿಯೋ ವೈರಲ್‌ ಆಗಿದೆ. ಇದು ಅಶೋಕನಗರದ ತಾಜ್‌ ಹೋಟೆಲ್ ಬಳಿ ನಡೆದಿರುವ ಘಟನೆ ಎನ್ನುವ ಕ್ಯಾಪ್ಷನ್‌ ಇದೆ. ಯಾವ ಊರು ಎಂದು ಈ ವೈರಲ್‌ ವಿಡಿಯೋದಲ್ಲಿ ಹೇಳಿಲ್ಲವಾದರೂ, ಹೈದರಾಬಾದ್‌ದು ಇರಬಹುದು ಎನ್ನಲಾಗುತ್ತಿದೆ. ತಾಜ್‌ ಹೋಟೆಲ್‌ನಲ್ಲಿ ರಾತ್ರಿ ಊಟ ಮುಗಿಸಿ ಮಕ್ಕಳ ಸಹಿತ ಬರುತ್ತಿದ್ದ ದಂಪತಿ ಅಲ್ಲಿಯ ಗುಂಡಿಗೆ ಬಿದ್ದಿರುವ ಶಾಕಿಂಗ್‌ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದುರಸ್ತೆ ಎಂದು ತಿಳಿದು ವಾಹನ ಸವಾರ ವೇಗದಲ್ಲಿಯೇ ಹೋಗಿದ್ದು, ಗುಂಡಿಗೆ ಬಿದ್ದಿದ್ದಾನೆ. 

ಪಾಲಕರೇ ಎಚ್ಚರ... ಎಚ್ಚರ... ನಿಮ್‌ ಮಕ್ಕಳು ಹೀಗೂ ಕಿಡ್ನಾಪ್‌ ಆಗ್ಬೋದು: ಶಾಕಿಂಗ್‌ ವಿಡಿಯೋ ವೈರಲ್‌

ಚೀರಾಟ ಕೇಳಿ, ಅಲ್ಲಿದ್ದವರು ಓಡಿ ಬಂದಿದ್ದಾರೆ. ಗುಂಡಿ ಅಷ್ಟೊಂದು ಆಳವಿಲ್ಲದೇ ಇದ್ದುದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಖರ ಮಾಹಿತಿ ಇಲ್ಲ. ಅಲ್ಲಿರುವ ಮಕ್ಕಳಿಗೆ ಏನಾಗಿದೆ ಎನ್ನುವ ಬಗ್ಗೆ ತಿಳಿದಿಲ್ಲ. ಆದರೆ ಈ ವೈರಲ್‌ ವಿಡಿಯೋ ನೋಡಿ ಜನರ ಆಕ್ರೋಶ ಹೆಚ್ಚಾಗಿದೆ. ಸರ್ಕಾರಕ್ಕೆ ಜನರು ಶಾಪ ಹಾಕುತ್ತಿದ್ದಾರೆ. ಮುಖ್ಯ ರಸ್ತೆಯಲ್ಲಿಯೇ ಈ ಪರಿಯ ಗುಂಡಿ ಬಿದ್ದರೂ ಗಮನಿಸದೇ ಇರುವ ಅಧಿಕಾರಿಗಳ ವಿರುದ್ಧ ಜನರು ದನಿ ಎತ್ತಿದ್ದಾರೆ. ಈ ಬಗ್ಗೆ ಮೊದಲೇ ಸೂಚನೆ ನೀಡಲಾಗಿತ್ತು, ಆದರೂ ಕ್ರಮ ತೆಗೆದುಕೊಂಡಿಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮೂಲಕ ತಿಳಿಸಿದ್ದಾರೆ.ಈ ವಿಡಿಯೋ ಅನ್ನು ಆರ್ಯನ್‌ಏಜ್‌ಡೈರಿಯಲ್ಲಿ ಶೇರ್‍‌ ಮಾಡಲಾಗಿದೆ. 

ಇದು ಹೈದರಾಬಾದ್‌ ಮಾತಷ್ಟೇ ಅಲ್ಲ. ಬಹುತೇಕ ಕಡೆಗಳಲ್ಲಿ ಇಂಥ ಅವಾಂತರ ನಡೆಯುತ್ತಲೇ ಇವೆ. ಅದರಲ್ಲಿಯೂ ತೀರಾ ಕಳಪೆ ಕಾಮಗಾರಿಗಳಿಂದ ಮಳೆಯ ಹೊಡೆತಕ್ಕೆ ಹೊಸ ರಸ್ತೆಗಳೇ ಹೊಂಡಗಳಾಗುತ್ತಿವೆ. ರಸ್ತೆ ದುರಸ್ತಿ, ಅಭಿವೃದ್ಧಿ ಕಾರ್ಯ ಮಾಡಲು ಕೆಲವು ಸರ್ಕಾರಗಳ ಬಳಿ ಹಣವಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಬೊಕ್ಕಸ ಖಾಲಿಯಾದ ಕಾರಣ, ರಸ್ತೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಕಾರಣ ಗುತ್ತಿಗೆದಾರರೂ, ಇದಕ್ಕೆ ಮುಂದಾಗುತ್ತಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ದುಡಿಯದೇ ಕೂತಲ್ಲಿಯೇ ದುಡ್ಡು ಬರಬೇಕು, ಸರ್ಕಾರಗಳು ಬ್ಯಾಂಕ್‌ ಖಾತೆಯನ್ನು ಮೇಲಿಂದ ಮೇಲೆ ತುಂಬುತ್ತಿರಬೇಕು ಎಂಬ ಮತದಾರನ ಆಸೆ ಮುಗಿಯದವರೆಗೂ ಅವರ ಆಸೆ ಈಡೇರಿಸಿ ಮತ ಪಡೆಯಲು ಸರ್ಕಾರದ ಬೊಕ್ಕಸ ಖಾಲಿ ಆಗುವವರೆಗೂ ಇಂಥ ದುರಂತ ತಪ್ಪಿದ್ದಲ್ಲ ಎಂದು ಹಲವು ಕಮೆಂಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಬ್ರೇಕ್‌ ಬದ್ಲು ಆಕ್ಸಿಲರೇಟರ್ ಒತ್ತಿದ ವೈದ್ಯ: ಜೀವವೇ ಹೋಯ್ತು- ಸಿಸಿಟಿವಿಯಲ್ಲಿ ಶಾಕಿಂಗ್‌ ಘಟನೆ ಸೆರೆ

 
 
 
 
 
 
 
 
 
 
 
 
 
 
 

A post shared by Aryan Age (@aryanagedaily)

Latest Videos
Follow Us:
Download App:
  • android
  • ios