Asianet Suvarna News Asianet Suvarna News

ಮಹಿಳೆಗೆ ಗೊತ್ತಿದ್ದ ಸಂಬಂಧಿಗಳೇ ರೇಪ್‌ ಮಾಡ್ತಾರೆ, ಇಂದಿನ ಅರ್ಧಕ್ಕರ್ಧ ರೇಪ್‌ ಕೇಸ್‌ಗಳು ಸುಳ್ಳು: ಅಶೋಕ್‌ ಗೆಹ್ಲೋಟ್

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2021 ರ ವರದಿಯಲ್ಲಿ ಮಹಿಳೆಯರ ಮೇಲೆ ನಡೆಯುವ ಅಪರಾಧ ಪ್ರಕರಣದಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಇದರ ನಡುವೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗ್ಲೆಹೋಟ್‌,  ರಾಜ್ಯದಲ್ಲಿ ಜಾರಿಗೆ ತಂದ ಕಡ್ಡಾಯ ಎಫ್‌ಐಆರ್ ವ್ಯವಸ್ಥೆಗೆ ಸಂಖ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ, ಅದರಲ್ಲಿ ಅರ್ಧಕ್ಕರ್ಧ ಪ್ರಕರಣಗಳು ಸುಳ್ಳು. ಮಹಿಳೆಯ ಮೇಲೆ ಯಾರೋ ಅಪರಿಚಿತರು ರೇಪ್‌ ಮಾಡೋದಿಲ್ಲ. ಆಕೆಯ ಸಂಬಂಧಿಗಳೇ ರೇಪ್‌ ಮಾಡುತ್ತಾರೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
 

Rajasthan CM Ashok Gehlot insensitive comment on Rape Jalore Dalit Student Death Case CBI san
Author
First Published Sep 3, 2022, 5:03 PM IST

ನವದೆಹಲಿ (ಸೆ.3): ಕಡ್ಡಾಯ ಎಫ್‌ಐಆರ್ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಸುಳ್ಳು. ಅತ್ಯಾಚಾರ ಘಟನೆಗಳನ್ನು ಮಾಡಲು ವಿದೇಶಿಗರು ಬರುತ್ತಾರೆಯೇ? ಹೆಚ್ಚಿನ ಘಟನೆಗಳನ್ನು ಕುಟುಂಬದ ಪರಿಚಯಸ್ಥರು, ಸಂಬಂಧಿಕರೇ ಮಾಡುತ್ತಾರೆ. ಇಲ್ಲವೇ  ಅವರು ಯಾವುದಾದರೂ ಒಂದು ರೀತಿಯಲ್ಲಿ ಭಾಗಿಯಾಗಿರುತ್ತಾರೆ. ಮಹಿಳಾ ಅಪರಾಧ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಶೇಕಡ 56 ರಷ್ಟು ಸುಳ್ಳು ಎಂದು ಸಿಎಂ ಹೇಳಿದ್ದಲ್ಲದೆ, ರಾಜ್ಯದಲ್ಲಿ ಅಪರಾಧ ನಿಯಂತ್ರಣದಲ್ಲಿದೆ ಎಂದಿದ್ದಾರೆ. ಇದರ ಬೆನ್ನಲ್ಲಿಯೇ ಬಿಜೆಪಿ ಹಾಗೂ ಮಹಿಳಾ ಆಯೋಗ ಅಶೋಕ್‌ ಗೆಹ್ಲೋಟ್ ಅವರ ಹೇಳಿಕೆಯನ್ನು ಖಂಡನೆ ಮಾಡಿವೆ. ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕೊಕೊಳ್ಳಲು ಅಶೋಕ್‌ ಗೆಹ್ಲೋಟ್ ಸಂವೇದನಾರಹಿತ ಹೇಳಿಕೆಗಳನ್ನು ನೀಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ಕಿಡಿಕಾರಿದ್ದಾರೆ. ಜೈಪುರದ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಘಟಿಕೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ನಂತರ ಸಿಎಂ ಅಶೋಕ್ ಗೆಹ್ಲೋಟ್ ಮಾಧ್ಯಮಗಳೊಂದಿಗೆ ನಡೆದ ಸಂವಾದದ ವೇಳೆ ಈ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ, ಜಾಲೋರ್‌ನ ಸುರಾನಾದಲ್ಲಿ ಶಿಕ್ಷಕನಿಂದ ಥಳಿತಕ್ಕೆ ಒಳಗಾಗಿ ಸಾವಿಗೀಡಾದ ದಲಿತ ಮಗುವಿನ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಜಾಲೋರ್ ಘಟನೆಯ ಬಗ್ಗೆ ಜನರು ತಪ್ಪು ವಿಷಯಗಳನ್ನು ಹರಡುತ್ತಿದ್ದಾರೆ, ಈಗಲೂ ಜನರು ಕುಟುಂಬವನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಈಗಾಗಲೇ ಪ್ರಕರಣವನ್ನು ಸಿಬಿಐಗೆ ನೀಡಿದ್ದೇವೆ. ನಮ್ಮ ವಿಚಾರ ಏನೆಂದರೆ, ಸರಿಯಾದ ವಿಚಾರವನ್ನು ತಿಳಿಯದೇ ರಾಜಸ್ಥಾನವನ್ನು ದೂಷಣೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದರು.


ರಾಜ್ಯದಲ್ಲಿ(Rajasthan)  ಅತ್ಯಾಚಾರ (Rape case) ಪ್ರಕರಣದ ಬಗ್ಗೆ ಮಾತನಾಡಿದ ಅವರು, "ಅತ್ಯಾಚಾರವನ್ನು ಯಾರು ಮಾಡುತ್ತಾರೆ? ಹೆಚ್ಚಿನ ಪ್ರಕರಣಗಳಲ್ಲಿ, ಸಂಬಂಧಿಕರು ಸೇರಿದಂತೆ ಸಂತ್ರಸ್ತೆಯ ಪರಿಚಯಸ್ಥರೇ ಅಪರಾಧ ಎಸಗುತ್ತಾರೆ. ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಸುಮಾರು 56 ಪ್ರತಿಶತದಷ್ಟು ಸುಳ್ಳು ಪ್ರಕರಣಗಳು ನಕಲಿಯಾಗಿವೆ. ನಾವು ಈ ವಿಷಯದಲ್ಲಿ ಕ್ರಮ ಕೈಗೊಂಡಿದ್ದೇವೆ," ಮುಖ್ಯಮಂತ್ರಿ ಹೇಳಿದರು. ಗೆಹ್ಲೋಟ್, "ಡಿಜಿಪಿ ನನ್ನ ಪಕ್ಕದಲ್ಲಿ ನಿಂತಿದ್ದಾರೆ. ಸುಳ್ಳು ಪ್ರಕರಣಗಳನ್ನು ದಾಖಲಿಸುವವರನ್ನು ಉಳಿಸಬಾರದು ಎಂದು ನಾನು ಹೇಳಲು ಬಯಸುತ್ತೇನೆ. ಇದರಿಂದಾಗಿ ಸುಳ್ಳು ಕೇಸ್‌ (False Case) ದಾಖಲಿಸುವ ಮೂಲಕ ರಾಜ್ಯದ ಹೆಸರು ಕೆಡಿಸುವ ಧೈರ್ಯವನ್ನು ಯಾರೂ ಕೂಡ ಮಾಡುವುದಿಲ್ಲ ಎಂದು ಅವರು ಹೇಳಿದರು. ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದು ಗೆಹ್ಲೋಟ್ (Ashok Gehlot) ಹೇಳಿದ್ದಾರೆ.

2021ರಲ್ಲಿ ಭಾರತದಲ್ಲಿ ಒಟ್ಟು 29,272 ಕೊಲೆ, ಉತ್ತರ ಪ್ರದೇಶ ನಂ.1

ಹಿಂದೆಲ್ಲ ಜನರು ಅವಮಾನವಾಗುತ್ತದೆ ಎನ್ನುವ ಕಾರಣಕ್ಕೆ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರುತ್ತಿರಲಿಲ್ಲ. ಈಗ ನಾವು ಪೊಲೀಸ್ ಠಾಣೆಯಲ್ಲೂ ಸ್ವಾಗತ ಕೊಠಡಿಯನ್ನು ಮಾಡಿದ್ದೇವೆ. ಕಡ್ಡಾಯ ಎಫ್‌ಐಆರ್‌ ನಿಯಮವನ್ನು ಮಾಡಿರುವುದು ಅತ್ಯಂತ ದೊಡ್ಡ ಹೆಜ್ಜೆ ಎಂದು ಹೇಳಿದ್ದರು.ಈಗ ಯಾರೇ ಪೊಲೀಸ್ ಠಾಣೆಗೆ (Police Station) ದೂರು ನೀಡಿದರೂ ಎಫ್‌ಐಆರ್ ದಾಖಲಿಸಬೇಕು. ಈ ಕ್ರಮ ಪ್ರತಿ ರಾಜ್ಯದಲ್ಲೂ ಜಾರಿಯಾಗಬೇಕು. ಎಫ್‌ಐಆರ್ ಕಡ್ಡಾಯಗೊಳಿಸುವುದರಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆವು ಎಂದು ಮುಖ್ಯಮಂತ್ರಿ ಹೇಳಿದರು.

ಕೋವಿಡ್‌ ವೇಳೆ ಆತ್ಮಹತ್ಯೆ ಮಾಡಿಕೊಂಡವರೆಷ್ಟು? ಗಾಬರಿ ಮೂಡಿಸುತ್ತಿದೆ ಕೇಂದ್ರದ ವರದಿ

ಅಪರಾಧ ಪ್ರಮಾಣ ಹೆಚ್ಚಾಗಿದೆ ಎಂದು ವಿರೋಧ ಪಕ್ಷಗಳು ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಗೆಹ್ಲೋಟ್ ಹೇಳಿದರು. "ಆ ನಾಯಕರು ಎನ್‌ಸಿಆರ್‌ಬಿ (NCRB) ವರದಿಯ ಮೊದಲ ಪುಟವನ್ನು ಓದಬೇಕು, ಅದು ಪ್ರತಿ ರಾಜ್ಯವು ವಿಭಿನ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹೇಳುತ್ತದೆ. ನಾವು ಎನ್‌ಸಿಆರ್‌ಬಿಗೆ ಹೋಗುವ ಅಪರಾಧ ಡೇಟಾವನ್ನು ಕಳುಹಿಸುತ್ತೇವೆ. ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆಯ ಘಟನೆಯನ್ನು ನಾವು ನಿರ್ವಹಿಸಿದ ರೀತಿ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ರಾಷ್ಟ್ರೀಯ ದರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಶಿಕ್ಷೆಯ ದರದ ಪ್ರಮಾಣವೂ ಹೆಚ್ಚಿದ್ದು, ಅತ್ಯುತ್ತಮ ಪೊಲೀಸ್ ಸೇವೆ ಸಲ್ಲಿಸಿದ ಕೀರ್ತಿಯೂ ಸಲ್ಲಬೇಕು ಎಂದರು. ಎನ್‌ಸಿಆರ್‌ಬಿ ವರದಿಯ ಪ್ರಕಾರ, ರಾಜಸ್ಥಾನವು 2021 ರಲ್ಲಿ 6,337 ನಲ್ಲಿ ಗರಿಷ್ಠ ಅತ್ಯಾಚಾರ ಪ್ರಕರಣಗಳನ್ನು ವರದಿ ಮಾಡಿದೆ.  ಮಧ್ಯಪ್ರದೇಶ (2,947) ಮತ್ತು ಉತ್ತರ ಪ್ರದೇಶ (2,845) ನಂತರದ ಸ್ಥಾನದಲ್ಲಿವೆ.

Follow Us:
Download App:
  • android
  • ios