ಜೈಪುರ್(ಜ.25): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ ಹಾಗೂ ಪಂಜಾಬ್ ರಾಜ್ಯಗಳು ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ, ರಾಜಸ್ಥಾನ ವಿಧಾನಸಭೆ ಕೂಡ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದೆ.

ಸಿಎಎ ವಿರೋಧಿ ನಿರ್ಣಯ ಅಂಗೀಕಾರದ ಕುರಿತು ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ದಾರಿವಾಲ್ ಸದನದಲ್ಲಿ ನಿರ್ಣಯ ಮಂಡಿಸಿದರು.

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!

ಬಳಿಕ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಧ್ವನಿಮತದ ಮೂಲಕ ಸಿಎಎ ವಾಪಸ್ ಪಡೆಯುವಂತೆ ನಿರ್ಣಯ ಅಂಗೀಕರಿಸಲಾಯಿತು.

ಸಿಎಎ ಜಾರಿಯಿಂದ ಸಂವಿಧಾನದ ಮೂಲವನ್ನೇ ಪ್ರಶ್ನಿಸಿದಂತಾಗುತ್ತದೆ ಎಂದಿರುವ ರಾಜಸ್ಥಾನ ವಿಧಾನಸಭೆ, ಸಿಎಎ, ಎನ್’ಸಿಆರ್ ಹಾಗೂ ಎನ್’ಪಿಆರ್ ಕುರಿತು ಜನರಲ್ಲಿ ಆತಂಕವಿದೆ ಎಂದು ಅಭಿಪ್ರಾಯಪಟ್ಟಿದೆ.

ಕೇರಳ ಬೆನ್ನಲ್ಲೇ ಕೇಂದ್ರಕ್ಕೆ ಸೆಡ್ಡು ಹೊಡೆದ ಮತ್ತೊಂದು ರಾಜ್ಯ!

ಎನ್‌ಪಿಆರ್‌ನ ಹೊಸ ನಿಬಂಧನೆಗಳನ್ನು ಹಿಂತೆಗೆದುಕೊಂಡ ನಂತರವೇ ಜನಗಣತಿ ಕಾರ್ಯಗಳನ್ನು ಮಾಡಬೇಕು.ಪೌರತ್ವ ತಿದ್ದುಪಡಿ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳು ಜನರನ್ನು ಧಾರ್ಮಿಕ ಆಧಾರದ ಮೇಲೆ ಪ್ರತ್ಯೇಕಿಸುತ್ತವೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.