ತಿರುವನಂತಪುರಂ[ಜ.14]: ಪೌರತ್ವ ಕಾಯ್ದೆ 2019ನ್ನು ವಿರೋಧಿಸುತ್ತಿರುವ ಕೇರಳ ಸರ್ಕಾರ ಒಂದಾದ ಬಳಿಕ ಮತ್ತೊಂದರಂತೆ ದಾಖಲೆ ಬರೆಯುತ್ತಿದೆ. ಸದ್ಯ ಪೌರತ್ವ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಮೊದಲ ರಾಜ್ಯವಾಗಿ ಕೇರಳ ಹೊರ ಹೊಮ್ಮಿದೆ. ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿರುವ ಕೇರಳ ಕೇಂದ್ರಕ್ಕೆ ಸಡ್ಡು ಹೊಡೆದ ಪ್ರಥಮ ರಾಜ್ಯವಾಗಿದೆ. ಈ ಹಿಂದೆ ರಾಜ್ಯದಲ್ಲಿ ಪೌರತ್ವ ಕಾಯ್ದೆ ಜಾರಿಗೊಳಿಸದಿರುವ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ದಾಖಲೆ ಬರೆದಿತ್ತು. ಕೇರಳ ಇಂತಹ ಕ್ರಮ ಕೈಗೊಂಡ ಮೊದಲ ಹಾಗೂ ಏಕೈಕ ರಾಜ್ಯವಾಗಿದೆ.

ಸಿಎಎ ವಿರೋಧಿಸುವಂತೆ 11 ರಾಜ್ಯಗಳಿಗೆ ಪತ್ರ ಬರೆದ ಪಿಣರಾಯಿ: ಯಾವವು 11 ರಾಜ್ಯಗಳು?

ಕೇರಳದಲ್ಲಿ ಎಡಪಂಥೀಯ ಮೈತ್ರಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸರ್ಕಾರ ಆಡಳಿತ ನಡೆಸುತ್ತಿದೆ. ಇದರ ನೇತೃತ್ವ ಸಿಎಂ ಪಿಣರಾಯಿ ವಿಜಯನ್ ವಹಿಸಿಕೊಂಡಿದ್ದಾರೆ. ಸದ್ಯ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿರುವ ಕೇರಳ ಸರ್ಕಾರ, ಪೌರತ್ವ ಕಾಯ್ದೆ ಸಂವಿಧಾನದ ವಿಧಿ 14, 21 ಹಾಗೂ 25ನ್ನು ಉಲ್ಲಂಘಿಸುತ್ತದೆ. ಅಲ್ಲದೇ ಇದು ಜಾತ್ಯಾತೀತವೆಂಬ ಮೂಲ ಆಧಾರದ ವಿರುದ್ಧವಾಘಿದೆ. 

ಸುಪ್ರೀಂ ಕೋರ್ಟ್ ಪೌರತ್ವ ಕಾಯ್ದೆ ವಿರೋಧಿಸುವ ಸುಮಾರು 60 ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಹೀಗಿರುವಾಗ ಕೇರಳ ಸರ್ಕಾರದ ಈ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 22ರಂದು ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಜನವರಿ 3 ರಂದು ವಿವಿಧ ರಾಜ್ಯಗಳ 11 ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು, ಪೌರತ್ವ ಕಾಯ್ದೆ ವಿರೋಧಿಸುವಂತೆ ಮನವಿ ಮಾಡಿಕೊಂಡಿದ್ದರು.

ವಯನಾಡ್‌ನಲ್ಲಿ ಎರಡು ದಿನದಲ್ಲಿ ಏನೆಲ್ಲ ನೋಡಬಹುದು?