ವಸಾಹತುಶಾಹಿ ಗುರುತುಗಳನ್ನು ಅಳಿಸಿಹಾಕುವ ಉದ್ದೇಶದಿಂದ ರಾಜ್ಯಪಾಲರ ಅಧಿಕೃತ ನಿವಾಸವನ್ನು ‘ರಾಜಭವನ’ದ ಬದಲಿಗೆ ‘ಲೋಕ ಭವನ’ ಎಂದು ಮರುನಾಮಕರಣ ಮಾಡಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ನವದೆಹಲಿ: ವಸಾಹತುಶಾಹಿ ಗುರುತುಗಳನ್ನು ಅಳಿಸಿಹಾಕುವ ಉದ್ದೇಶದಿಂದ ರಾಜ್ಯಪಾಲರ ಅಧಿಕೃತ ನಿವಾಸವನ್ನು ‘ರಾಜಭವನ’ದ ಬದಲಿಗೆ ‘ಲೋಕ ಭವನ’ ಎಂದು ಮರುನಾಮಕರಣ ಮಾಡಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಇದರ ಬೆನ್ನಲ್ಲೇ, ಕೇರಳ ರಾಜಭವನವು ಸೋಮವಾರ ಮರುನಾಮಕರಣಕ್ಕೆ ಮುಂದಾಗಿದೆ. ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್‌ ರಾಜ್ಯಪಾಲರು ಈಗಾಗಲೇ ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಕೇಂದ್ರದ ಆದೇಶದನ್ವಯ ದೆಹಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳ ‘ರಾಜ ನಿವಾಸ’ವನ್ನು ‘ಲೋಕ ನಿವಾಸ’ವಾಗಿ ಹೆಸರಿಸಲು ನಿರ್ಧರಿಸಲಾಗಿದೆ.

ವರ್ಷದ ಹಿಂದೆಯೇ ನಿರ್ಧಾರ:

2024ರ ಆ.2ರಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಭೆ ನಡೆದಿತ್ತು. ಈ ವೇಳೆ, ‘ರಾಜಭವನ ಎಂಬುದು ಬ್ರಿಟಿಷ್‌ ವಸಾಹತುಶಾಹಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಭಾರತೀಯವಾಗಿ ಪರಿವರ್ತಿಸಬೇಕು’ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್‌. ರವಿ ನೇತೃತ್ವದ ರಾಜ್ಯಪಾಲರ ಸಮಿತಿ ಶಿಫಾರಸು ಮಾಡಿತ್ತು ಹಾಗೂ ಬಳಿಕ ಇದನ್ನು ಸಭೆ ಅಂಗೀಕರಿಸಿತ್ತು. ಈಗ ಕೇಂದ್ರ ಗೃಹ ಸಚಿವಾಲಯವೂ ಈ ಪ್ರಸ್ತಾವವನ್ನು ಅಂಗೀಕರಿಸಿ, ಮರುನಾಮಕರಣ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದೆ.

ಏಕೆ ಬದಲಾವಣೆ?

- ರಾಜಭವನ ಎಂಬುದು ಬ್ರಿಟಿಷ್‌ ವಸಾಹತುಶಾಹಿಯನ್ನು ಪ್ರತಿಬಿಂಬಿಸುತ್ತದೆ. ಅದನ್ನು ಭಾರತೀಯವಾಗಿಸಬೇಕು ಎಂಬ ಬೇಡಿಕೆ- 2024ರ ಆ.2ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರ ಸಭೆಯಲ್ಲಿ ಗವರ್ನರ್‌ಗಳು ಸಮಿತಿಯಿಂದ ಈ ಬಗ್ಗೆ ಶಿಫಾರಸು- ಈ ಪ್ರಸ್ತಾವವನ್ನು ಅಂಗೀಕರಿಸಿದ್ದ ಗೃಹ ಸಚಿವಾಲಯ ಮರುನಾಮಕರಣ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು- ಅದರಂತೆ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್‌ ರಾಜ್ಯಪಾಲರಿಂದ ಈಗಾಗಲೇ ಹೆಸರು ಬದಲಾವಣೆ ಪೂರ್ಣ