ನವದೆಹಲಿ(ಡಿ.05): ಲೋಕಸಭೆ ಕಲಾಪಕ್ಕೆ ಹಾಜರಾಗಲು ನಿಗದಿತ ಸಮಯ ಮೀರಿದ ಕಾರಣ, ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಸದನಕ್ಕೆ ಓಡಿ ಬಂದ ಅಪರೂಪದ ಘಟನೆ ನಡೆದಿದೆ.

ಪ್ರಶ್ನೋತ್ತರ ಕಲಾಪಕ್ಕೆ ತಡವಾದ ಕಾರಣ, ಪಿಯೂಷ್ ಗೋಯೆಲ್ ಓಡಿ ಹೋಗಿ ಸದನದ ಒಳೆಗೆ ಪ್ರವೇಶಿಸಿದರು. ತಮ್ಮ ಕಾರಿನಿಂದ ಇಳಿಯುತ್ತಿದ್ದಂತೇ ಗೋಯೆಲ್ ಸದನದ ಬಾಗಿಲೆಡೆ ಓಡಿ ಹೋದರು.

ರೈಲಿನೊಳಗಿನ ಸೇವೆ ಮಾತ್ರ ಖಾಸಗಿಗೆ, ಇಡೀ ರೈಲ್ವೆಯನ್ನಲ್ಲ: ಕೇಂದ್ರದ ಸ್ಪಷ್ಟನೆ

ಪಿಯೂಷ್ ಗೋಯೆಲ್ ಸದನಕ್ಕೆ ಓಡಿ ಹೋದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಚಿವರ ಕರ್ತವ್ಯನಿಷ್ಠೆಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸದನದ ಕಲಾಪಕ್ಕೆ ಗೈರು ಹಾಜರಾಗುವ ಸಚಿವರಿಗೆ ಪ್ರಧಾನಿ ಮೋದಿ ಇತ್ತೀಚಿಗಷ್ಟೇ ಚಾಟಿ ಬೀಸಿದ್ದರು. ಅಲ್ಲದೇ ನಿಯಮಿತವಾಗಿ ಕಲಾಪಕ್ಕೆ ಹಾಜರಾಗುವಂತೆ ಎಲ್ಲ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದನ್ನುಇಲ್ಲಿ ಸ್ಮರಿಸಬಹುದು.

ರೈಲು ಖಾಸಗೀಕರಣ: ಸಚಿವರಿಂದ ಮಹತ್ವದ ಘೋಷಣೆ!