ಸರ್ಕಾರಕ್ಕೆ ರೈಲ್ವೇ ಇಲಾಖೆ ಖಾಸಗೀಕರಣಗೊಳಿಸುವ ಇರಾದೆ? ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಮಹತ್ವದ ಘೋಷಣೆ| ಯಾವುದೇ ಕಾರಣಕ್ಕೂ ರೈಲ್ವೇ ಇಲಾಖೆ ಖಾಸಗೀಕರಣವಿಲ್ಲ ಎಂದ ಸಚಿವ| ಖಾಸಗಿ ರೈಲು ಸೇವೆಗೆ ಅನುಮತಿ ನೀಡುವ ಪ್ರಸ್ತಾವನೆ| 

ನವದೆಹಲಿ(ಜೂ.30): ರೈಲ್ವೇ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಮಾತುಳ ನಡುವೆ, ಕೇಂದ್ರ ರೖಲ್ವೇ ಸಚಿವ ಪಿಯೂಷ್ ಗೋಯೆಲ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವುದೇ ಕಾರಣಕ್ಕೂ ರೈಲ್ವೇ ಇಲಾಖೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದಿರುವ ಗೋಯೆಲ್, ಆದರೆ ಖಾಸಗಿ ರೈಲು ಸೇವೆಗೆ ಅನುಮತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ಗೋಯೆಲ್, ದೇಶದ ಅತೀ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಇರಾದೆ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ ಅವಶ್ಯಕತೆಗನುಗುಣವಾಗಿ ಒಂದು ವೇಳೆ ಖಾಸಗಿ ರೈಲು ಸೇವೆಯ ಅಗತ್ಯತೆ ಕಂಡು ಬಂದರೆ ಈ ಕುರಿತು ಯೋಚಿಸಲಾಗುವುದು ಎಂದು ಗೋಯೆಲ್ ತಿಳಿಸಿದರು.

ಅಲ್ಲದೇ 100 ದಿನಗಳ ಯೋಜನೆಯನ್ವಯ ಇಲಾಖೆಗೆ ಎರಡು ವಿಶೇಷ ರೈಲುಗಳನ್ನು ನೀಡುವ ಇರಾದೆ ಇದ್ದು, ಪ್ರಮುಖ ನಗರಗಳ ಅತೀ ಮುಖ್ಯ ಸಂಪರ್ಕ ಮಾರ್ಗಗಳಲ್ಲಿ ಇವುಗಳನ್ನು ಓಡಿಸುವ ಪ್ರಸ್ತಾವನೆ ಇದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಹಿಂದೆ ರಾಜಧಾನಿ ಎಕ್ಸಪ್ರೆಸ್ ಮತ್ತು ಶತಾಬ್ದಿ ಎಕ್ಸಪ್ರೆಸ್ ರೈಲುಗಳನ್ನು ಇಲಾಖೆ ಖಾಸಗೀಕರಣಗೊಳಿಸಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.